ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

ಬರಹ

ನನ್ನೀ  ದೇಹ ಪ್ರಕೃತಿಯ ಮಡಿಲಿಗೆ ..

ಏನೋ ಆಗಿದೆ ನನಗೇನೋ ಆಗಿದೆ
ಏನೆಂದು ಕೇಳ ಬೇಡ ನೀನು,
ನೀ .. ಸಿಗಲಿಲ್ಲ ವಾದ್ದರಿಂದ
ನನ್ನೀ ಜೀವನ ಬೇಸರವಾಗಿದೆ .

ಹುಡುಕಾಡಿದೆ ನಿನ್ನನ್ನು
ಸುತ್ತಾಡಿದೆ ನಿನ್ನ ಮನೆಯನ್ನು
ಧಣಿದು ಬಸವಳಿದಿರುವೆ, ಆದರೋ
ಹುಡುಕಲಾಗಲಿಲ್ಲ ನಿನ್ನ ಸುಳಿವನ್ನು .

ಕೊರಗುತಿಹೇನು ನಿನ್ನ ನೆನೆಪಲ್ಲೆ
ನೊಂದು , ಬೆವರುತಿಹೇನು ನೀನಿಲ್ಲದ ನೋವಲ್ಲೆ
ಸುಮ್ಮನೆ ಕೂರಲು  ಮನಸಿಲ್ಲ,
ನಿನ್ನ ಹುಡುಕುವ ಉತ್ಸಾಹವೂ ನನಗಿಲ್ಲ .

ಕಾರಣ ಹೇಳದೆ ಹೋರಟು ಹೋದ ಗೆಳತಿ ನೀನು ,
ನೀನಿಲ್ಲದ ಕಾರಣ ಜೀವನ ಸಾಗಿದೆ
ತಂತಿ ಮುರಿದ ವೀಣೆಯ ರೀತಿ....,
ನಾವಿಕನಿಲ್ಲದ ದೋಣಿಯ  ರೀತಿ...!

ಎಲ್ಲಿಂದ ಬಂದ ಜೀವನವೋ ತಿಳಿಯದು
ಎಲ್ಲಿಗೀ ಪಯಣವೋ ತಿಳಿಯದು
ಕಾಲ ಬಂದಂತೆ ಕಳೆಯೆತಿಹೇನು ಜೀವನ ,
ಜೀವನದ ಮರೆಯಲ್ಲಿ ಸಾಗುತಿದೆ ನನ್ನೀ ಪಯಣ .

ಅಂದು...! ಇಂದು ..!ಎಂದೂ...!
ನನ್ನದೊಂದೇ ಶಪಥ
ಪ್ರೀತಿ ನಿನ್ನಯ ಮಡಿಲಿಗೆ
ದೇಹ ಪ್ರಕೃತಿಯ ಸೊಬಗಿಗೆ ....!



ಇದರ ಕೊಂಡಿ ಇಲ್ಲಿದೆ ನೋಡಿ ....
ನನ್ನೀ  ದೇಹ ಪ್ರಕೃತಿಯ ಮಡಿಲಿಗೆ ..
http://nannavalaloka.blogspot.com/2010/09/blog-post_16.html