ನನ್ನುಸಿರು
ಕವನ
ಸಿರಿಯ ನಾ ಬೇಡಲಿಲ್ಲ
ಬೇಡಿದ್ದು ನಿನ್ನ ಒಲವು
ಕರೆಯ ನಾ ಮಾಡಲಿಲ್ಲ
ಮಾಡಿದ್ದು ನನ್ನ ಮನವು
ಗೀತೆಯ ನಾ ಹಾಡಲಿಲ್ಲ
ಹಾಡಿದ್ದು ಹೃದಯರಾಗ
ಜೊತೆಗೆ ನಾ ಓಡಲಿಲ್ಲ
ಓಡಿದ್ದು ನನ್ನಂತರಂಗ
ಪ್ರೀತಿ ಮಾಡೆಂದು ಕಾಡಲಿಲ್ಲ
ಕಾಡಿದ್ದು ಕಂಗಳ ನೋಟವು
ಏಕಾಂಗಿಯಾಗಿ ನಾ ಬಾಡಲಿಲ್ಲ
ಬಾಡಿದ್ದು ಮುಖದ ಭಾವವು
ಏನಾದರೂ ನಿನ್ನನ್ನು ಬಿಡಲಿಲ್ಲ
ಬಿಟ್ಟಿದ್ದು ನನ್ನ ಕೈ ಮಾತ್ರ
ಉಸಿರೊದರೂ ನಿನ್ನ ಬಿಡುವುದಿಲ್ಲ
ಬಿಡುವುದಾದರೆ ಹೋಗಲಿ ನನ್ನುಸಿರು.
-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್