ನನ್ನೆದೆಯಲಿ

ನನ್ನೆದೆಯಲಿ

ಒ೦ಟಿತನ,ಖಾಲಿತನ


ಯಾವುದರ ನಶೆಯೋ ನನ್ನೆದೆಯಲಿ


ಪ್ರತಿದಿನ ಪ್ರತಿ ಕ್ಷಣ


ಮುಗಿಯದ ನೋವಿದೆ ನನ್ನೆದೆಯಲಿ


 


ಇದೆ೦ತಹ ಕಿಚ್ಚೋ ,ನಾ ಕಾಣೆ


ಹೊಗೆಯೂ ಇಲ್ಲ,ಕಿಡಿಯೂ ಇಲ್ಲ


ಬಹುಷ: ನನಸಾಗದ


ಕನಸೊ೦ದು ಸುಡುತಿರಬೇಕು ನನ್ನೆದೆಯಲಿ


 


ನಿಶೆಯಲೂ ಕೆಲವೊಮ್ಮೆ ಸೂರ್ಯ


ಸುಡುವನ೦ತೆ ದಾರಿಯನು


ಪ್ರೀತಿಗಾಗಿ ನಾ ಆಯ್ದ


ದಾರಿಯೂ ಅ೦ತಹುದೇ ನನ್ನೆದೆಯಲಿ


 


ಎಲ್ಲರನೂ ಒ೦ದಾಗಿ ನೋಡುವ


ಭಾವ ಅನುಕ್ಷಣ ಸಾಧ್ಯವೇ..?


ಸ್ವಲ್ಪ ಸಿಹಿ,ಸ್ವಲ್ಪ ಕಹಿ


ಎಲ್ಲವೂ ಇದೆ ನನ್ನೆದೆಯಲಿ

Comments