ನನ್ನೊಲವೆ ಹೋದೆನೀನೆಲ್ಲಿಗೆ ?
ಕವನ
ಏನೋ ಕಾಣೆ ಇಂದು ನಗುವು ನಿನ್ನ ಭಾವಕೆ ಸೋತಿದೆ
ನಾ ಕಾಣದ ಅರಿವನ್ನು ಬೇಕೆಂದೇ ಬೇಡಿ ತಂದಿದೆ
ಕಿರುನಗೆಯ ನಿನ್ನ ನೋಟಕೆ ಸಾಕಾಗಿ ಮನಸು ಸೋತಿದೆ
ನಿನ್ನ ಮನಸ ಆ ಉಲಿತ ಬೇಕೆಂದೇ ಹಾಡಿ ಕಾಡಿದೆ
ಎನಿತಿಹುದೋ ಈ ಬಾಳಲಿ ಸವೆಸುವಾ ದಾರಿ
ಎಣಿಕೆಗೋ ಮೀರಿದ ಭಾವಾನೆಗಳು ಭಾರಿ
ಅಂದೇಲ್ಲೋ ನೀ ಹೇಳಿದ ಮೆಲುದನಿಯ ಲಾಲಿ
ಬೆಂಬಿಡದೆ ಎನ್ನ ಕಾಡುವುದೇ ಅದರ ಚಾಳಿ
ಅರಿವಿಗೂ ಬಾರದೆ ಪ್ರೀತಿಯ ನಾ ಶುರು ಮಾಡಿದೆ
ಮಾನಸಿಗೂ ಕೇಳದೆ ರಾಗವ ಇಂದು ಹಾಡಿದೆ
ಮೌನವೇ ಕಾರಣ ಪ್ರೀತಿಯ ಸವಿ ಮಾತಿಗೆ
ಕನಸಿಗೂ ಬಾರದೇ ನನ್ನೊಲವೆ ಹೋದೆನೀನೆಲ್ಲಿಗೆ ?