ನನ್ನ ಅಮ್ಮ

4



ಕಂಗಳಲಿ ತುಂಬಿರುವ ಕನಸಿನಂತೆ,

ಹೊಂಬೆಳಕ ಹೊಮ್ಮಿಸುವ ಬೆಳಗಿನಂತೆ.

ಹರಿವ ನದಿಯೊಳಗಿನಾ ಸುಳಿಗಳಂತೆ,

ನಿನ್ನ ಪ್ರೀತಿಯು ಎನಗೆ ಅನಂತೆ.

 

ಮುದುಡಿದಾ ಮಲ್ಲಿಗೆಯು ಅರಳುವಂತೆ,

ಸುಡುವ ಬಿಸಿಲೊಳಗೂ ನೆರಳಿನಂತೆ,

ಋತುಗಳಾ ಚಂಚಲತೆ ಮೀರಿನಿಂತೆ,

ನಿನ್ನ ಪ್ರೀತಿಗೆ ನಾ ಶರಣು ಎಂದಿನಂತೆ.

 

-ವಿಶ್ವನಾಥ್ . ಡಿ. ಎ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ವಿಶ್ವನಾಥ್ ನನ್ನ ಊಹೆಯಂತೆ ಇದು ನಾ ನಿಮ್ಗೆ ಪ್ರತಿಕ್ರಿಯಿಸುತ್ತಿರುವ ಎರಡನೇ ಬರಹ...!! ಮಾತೆಯ ಬಗೆಗೆ ಸರಳವಾಗಿ ಒಂಥರಹ ರೈಮ್ಸ್ ತೆರದಿ ಚೆನ್ನಾಗಿ ಬರೆದಿರುವಿರಿ.. ಬಹು ಹಿಡಿಸಿತು.. ಶುಭವಾಗಲಿ... ನನ್ನಿ \|/