ನನ್ನ ಆಸೆ

ನನ್ನ ಆಸೆ

ಬರಹ

ನಿನ್ನ ಮುಂಗುರುಳುಗಳಲಿ ಕೈಯಾಡಿಸುವ ಆಸೆ
ನಿನ್ನ ಸುಮಧುರ ಸುವಾಸನೆ ಸವೆಯುವ ಆಸೆ

ನಿನ್ನ ಕಣ್ಗಳಲಿ ಕಣ್ಣಿಟ್ಟು ನನ್ನ ನಾನು ಮರೆಯುವ ಆಸೆ
ನಿನ್ನ ಕೈಗಳಲಿ ಕೈಇಟ್ಟು ಎಳು ಜನ್ಮ ನಡೆಯುವ ಆಸೆ

ನನ್ನ ತೊಳ್ಗಳಲಿ ನಿನ್ನ ಬಂಧಿ ಯಾಗಿಸುವ ಆಸೆ,
ನನ್ನ ಹೃದಯದಲಿ ನಿನ್ನ ದೇಗುಲವ ಕಟ್ಟುವ ಆಸೆ, ಆದರಲಿ ನಿನ್ನ ಪೂಜೆ ಮಾಡುವ ಆಸೆ.

ನಿನ್ನ ಜೊತೆ ಹುಣ್ಣಿಮೆ ಚಂದ್ರನ ನೊಡುವ ಆಸೆ,
ನಿನ್ನ ಜೊತೆ ಚಳಿಗಾಲದ ಸವಿ ಮುಂಜಾನೆಯಲಿ ನಡೆಯುವ ಆಸೆ.

ನಿನ್ನ ಜೊತೆ ನನ್ನ ಕನಸುಗಳ ಹಂಚಿಕೊಳ್ಳುವ ಆಸೆ,
ಆದನ್ನು ನನಸು ಮಾಡಿ ತೊರಿಸುವ ಆಸೆ.

ನಾ ಬರೆಯುವ ಕವನಗಳ ಕಾವ್ಯ ನಿನ್ನ ನಾಗಿಸುವ ಆಸೆ,
ಆದನ್ನು ಓದಿ ನನ್ನ ನಾ ಮರೆಯುವ ಆಸೆ.

ನಿನಗಾಗಿ ಹಗಲಿರುಳು ಕಾಯುವ ಆಸೆ,
ನಿನ್ನ ಜೊತೆ ಹಗಲಿರುಳು ಕಳೆಯುವಾಸೆ.

ನಿನಗಾಗಿ ನನ್ನ ಹಸಿವನ್ನು ತಡೆಯುವ ಆಸೆ,
ನಿನಗಾಗಿ ಬಿಸಿ ಅಡುಗೆ ಮಾಡಿ ಬಡಿಸುವ ಆಸೆ.

ನಿನ್ನ ಜೊತೆ ಹತ್ತು ನಿಮಿಷ ಮಾತಾಡುವ ಆಸೆ,
ಆ ಹತ್ತು ನಿಮಿಷದಲ್ಲಿ ಹತ್ತು ಜನ್ಮ ಕಳೆಯುವ ಆಸೆ.

ನಿನಗಾಗಿ ನನ್ನ ರಕ್ತ ಹರೆಸುವ ಆಸೆ,
ಅದರಲ್ಲಿ ನಿನಗೆ ಪ್ರೇಮ ಪತ್ರ ಬರೆಯುವ ಆಸೆ.

ನಿನ್ನ ನಂಬಿಕೆಗೆ ನನ್ನ ನಂಬಿಕೆ ಬೆಸೆಯುವ ಆಸೆ,
ಆ ನಂಬಿಕೆಯನ್ನು ಉಳಿಸಿ ಬೆಳಸುವ ಆಸೆ.

ನನ್ನ ಮೇಲೆ ನೀನು ಮುನಿಸಿಕೊಳ್ಳಬೇಕೆಂಬ ಆಸೆ,
ನಿನ್ನ ತುಟಿಯ ಮೆಲೆ ನನ್ನ ತುಟಿಯೊತ್ತಿ ರಮಿಸಬೇಕೆಂಬ ಆಸೆ,

ನನ್ನ ಮನಸಿನ ಜೋಕಾಲಿಯಲ್ಲಿ ನಿನ್ನ ತೂಗಬೆಕೆಂಬ ಆಸೆ,
ಆಲ್ಲಿ ಜೊಗುಳ ಹಾಡುತ ನಿನ್ನ ಮಲಗಿಸಬೇಕೆಂಬ ಆಸೆ.

ನಿನ್ನ ಮುಗ್ಢ ಮುಖವ ನೋಡುತ ಕೂಡಬೇಕೆಂಬ ಆಸೆ,
ನೋಡುತ ಈ ಜಗವ ಮರೆಯುವ ಆಸೆ.

ನನ್ನ ಎದೆಯ ಬಡೆತದಲ್ಲಿ ನಿನ್ನ ಹೆಸರ ಕೇಳುವ ಆಸೆ,
ಆದನ್ನು ಕೇಳುತ ನನ್ನ ಜೀವ ಬಿಡುವ ಆಸೆ