ನನ್ನ ಕನಸುಗಳು

ನನ್ನ ಕನಸುಗಳು

ಬರಹ

ಮುಸುಕು ಮೋಡದೊಳಗಿಂದ
ಹನಿಯಾಗಿ ಹೊರಬೀಳ್ವ ನನ್ನ
ಮನದಾಳದಾ ಕನಸುಗಳಿಗೆ ನಾ
ನದಿಯಾಗಿ ಜೀವ ತುಂಬುತ್ತೇನೆ.

ಪ್ರತಿ ನಿಮಿಷಕೂ ಜನಿಸುವ
ಹೊಚ್ಚಹೊಸ ಕನಸುಗಳಗೆ
ಕಿರುನಗೆ ಮೂಡಿಸುವ ಹೋಂಗನಸುಗಳಿಗೆ
ನಗಿಸುವಾ ನಲ್ಲೆಯಾಗುತ್ತೇನೆ

ಮಂಜುಗಡ್ಡೆಯಂತಿರುವ ಕನಸುಗಳು
ಕಣ್ಣೀರಾಗಿ ಕರಗುತಿರುವಾಗ
ದುಃಖಿಸುವ ಕನಸುಗಳಿಗೆ ನಾ
ಸಂತೈಸ್ವ ಮಡದಿಯಾಗುತ್ತೇನೆ

ಕಾರ್ಮುಗಿಲ ಕಷ್ಟದಲೂ
ಮೊಳೆಯುತಿರುವ ಕನಸ ಸಸಿಗಳಿಗೆ
ನನ್ನಲ್ಲಿರುವುದ ನೀಡಿ
ಬೆಳೆಸುವಾ ತಾಯಾಗುತ್ತೇನೆ.