ನನ್ನ ಕಲಾ ಪ್ರದರ್ಶನಕ್ಕೆ ಒಂದು ವರ್ಷ.
ನನ್ನ ಜನಸಂಪರ್ಕ ಕಲಾಪ್ರದರ್ಶನಕ್ಕೆ ಒಂದು ವರ್ಷವಾದ ನೆನಪಿಗಾಗಿ ಚಿತ್ರೀಕರಣದ ಕೆಲಸದ ಒತ್ತಡದ ನಡುವೆ ಹೊಸ ಲೇಖನವನ್ನು ಬರೆಯಲು ಸಮಯವಿಲ್ಲದೆ ನನ್ನ ಹಳೇ ಬರಹವನ್ನು ಪ್ರಕಟಿಸುತ್ತಿದ್ದೇನೆ.
ಅದು ನನ್ನ ಜೀವನದಲ್ಲಿ ಮರೆಯಲಾಗದ , ಮರೆಯಲು ಸಾದ್ಯವೇ ಇಲ್ಲದ ಸಂತೋಷದ ಕ್ಷಣಗಳನ್ನು ದಾಖಲಿಸಲು ಇಷ್ಟು ದೀರ್ಘ ಸಮಯ ಬೇಕಾಯಿತು..
ಡಿಸೆಂಬರ್ ೧೩ ನನ್ನ ಜೀವನದ ಮರೆಯಲಾಗದ ಅತ್ಯಮೂಲ್ಯದ ದಿನ. ನನ್ನ ಮೊದಲ ಮತ್ತು ಏಕವ್ಯಕ್ತಿಯ ಕಲಾ ಪ್ರದರ್ಶನದ ದಿನ.. ಹೌದು ಮೊದಲನೆಯದು ಯಾಕೆಂದರೆ.. ನನ್ನ ಅಕಾಡೆಮಿಕ್ ವಿದ್ಯಾರ್ಥಿ ಜೀವನದ ನಂತರ ವೃತ್ತಿಪರ ಕಲಾವಿದನಾದ ಮೇಲೆ ನಾನು ಮಾಡಿದ ಮೊದಲ ಕಲಾಪ್ರದರ್ಶನ ಅದೂ ಏಕವ್ಯಕ್ತಿ, ಸಾರ್ವಜನಿಕವಾಗಿ... ಸಾರ್ವಜನಿಕರ ಮಧ್ಯೆ..
ಬಾಷ್ ಅನುದಾನ ಸಿಕ್ಕಿದ್ದಾಗ ಇದ್ದ ಖುಷಿ ಪ್ರದರ್ಶನದ ದಿನಾಂಕ ನಿಗದಿ ಮಾಡಿ ಆ ದಿನ ಹತ್ತಿರ ಬರುತ್ತಿದ್ದಂತೆ ಭಯ ಹೆಚ್ಚಾಗತೊಡಗಿತು. ಕಾರಣ ನಾನು ಮಾಡಲು ಹೊರಟಿದ್ದ ಪ್ರದರ್ಶನ ಇಲ್ಲಿಯವರೆಗು ನಾನು ಯಾವತ್ತು ಕಂಡಿರದಿದ್ದ ಅನುಭವವಿಲ್ಲದ ಸಾರ್ವಜನಿಕ ಕಲಾಪ್ರದರ್ಶನ. ಅದು ಮೆಜೆಸ್ಟಿಕ್ ಬಳಿ ..


ಪ್ರಶಾಂತ್, ವೆಂಕಟೇಶ್, ರ ಸಹಕಾರ ಮತ್ತು ಅನಿಲ್ ಸರ್ ಪ್ರತಿದಿನ ಕೊಡುತ್ತಿದ್ದ ಆತ್ಮಸ್ಥೈರ್ಯ. ಅಪ್ಪ ಮಾಡುತ್ತಿದ್ದ ಪ್ರತಿದಿನದ ಫೋನ್ ಕಾಲ್ .. ಇಷ್ಟು ಒಟ್ಟಾರೆ ನನಗಿದ್ದ ಸಾಥ್. ಇವೆಲ್ಲದರ ಜೊತೆಗೆ ಬಿಬಿಎಂಪಿಯವರು ತುಂಬಾ ಸತಾಯಿಸದೆ.. ಕೊನೆ ಘಳಿಗೆ ಅಂದರೆ ಭಾನುವಾರ ಪ್ರದರ್ಶನಕ್ಕೆ ಶುಕ್ರವಾರ ರಾತ್ರಿ ೯.೩೦ ಕ್ಕೆ ಅನುಮತಿ ಪತ್ರ ಕೊಟ್ಟಿದ್ದು. ಥ್ಯಾಂಕ್ಸ್ ಟು ಛೀಫ್ ಇಂಜಿನಿಯರ್ ಬಿಟಿ.ರಮೇಶ್ ಸರ್.... ಇದಕ್ಕು ಮೊದಲು ನಾನು ಬಯಸಿದ್ದ ರೀತಿಯಲ್ಲೇ ನನಗೆ ಕಟೌಟ್ ಬರೆದು ಕೊಟ್ಟ ರಾಜ್ ಕಮಲ್ ಆರ್ಟ್ಸ್.. ಚಿನ್ನಪ್ಪ ನವರನ್ನು ಹೇಗೆ ಮರೆಯಲು ಸಾದ್ಯ?
ಪ್ರದರ್ಶನಕ್ಕೆ ಡಿಜಿಟಲ್ ಕಟೌಟ್ ರೆಡಿ ಆಗಿದ್ದು ಶನಿವಾರ.
ಪ್ರದರ್ಶನಕ್ಕೆ ಸಹಾಯ ಮಾಡಲು ಶನಿವಾರ ಸಂಜೆಯಿಂದಲೇ ಜೊತೆಯಾದ ಮಾವ ಸೋಮ ಮತ್ತು ಫ್ರೆಂಡ್ಸ್ ಹರಿ, ಗಿರಿ ರಾತ್ರಿ ಅಲ್ಲಿಗೆ ಬಂದ ಕನಕ, ಬೆಳಗ್ಗೆ ಬಂದ ಲಕ್ಷ್ಮಿನಾರಾಯಣ ಕೊನೆಯವರೆಗೂ ಇದ್ರು...
ಹರಿ ಕಾರಲ್ಲಿ ಎಲ್ಲಾ ಮೆಟೀರಿಯಲ್ ತೆಗೆದುಕೊಂಡು ಹೋಗಿ ಅಲ್ಲಿ ಫಿಕ್ಸ್ ಮಾಡಿ ಮುಗಿಸಿದಾಗ ರಾತ್ರಿ ಮುಗಿದು ಮುಂಜಾನೆ ಮೂರು ಘಂಟೆ ಆಗಿತ್ತು.
ಬೆಳಗ್ಗೆ ಆರುಘಂಟೆಗೆ ಹೋಗಿ ವಿಡೀಯೋ ಡಾಕ್ಯುಮೆಂಟೇಶನ್ ಮಾಡಲು ತೊಡಗಿದ ನನಗೆ ನನ್ನ ಆ ಪ್ರದರ್ಶನ ಅಷ್ಟು ಯಶಸ್ವಿಯಾಗಿ ನನಗೆ ನನ್ನದೇ ಆದ ಒಂದು ಐಡೆಂಟಿಟಿ ಕೊಡುತ್ತದೆಂದು.
ನನ್ನ ಪ್ರದರ್ಶನದ ಮೊದಲ ವೀಕ್ಷಕರು ಅನಿಲ್ ಮತ್ತು ಸುರೇಖಾ... ಬೆಳಗ್ಗೆ ಏಳು ಘಂಟೆಗೆ ಬಂದಿದ್ದರು.

ಅಲ್ಲಿಗೆ ನನ್ನಲ್ಲಿದ್ದ ಅಳುಕೆಲ್ಲಾ ಮಾಯವಾಗಿ ಆತ್ಮವಿಶ್ವಾಸ ನೂರ್ಮಡಿಯಾಯ್ತು
ಮುಂದೆ ನಡೆದಿದ್ದಲ್ಲ ನನ್ನ ಆರು ತಿಂಗಳ ಕನಸಿನ ಸಾಕಾರ.. ಬಂದು ಬೆನ್ನು ತಟ್ಟಿದ ಮಿತ್ರರು.. ಬಂಧುಗಳು.. ಎಲ್ಲರಿಗೂ ಸದಾ ಋಣಿ.

ಆತ್ಮೀಯ ಹಾಗು ನನ್ನ ಕಲಾ ವ್ಯಾಸಂಗದ ಅವದಿಯ ಪ್ರಾರಂಭದಿಂದಲೂ ನನಗೆ ಸ್ಕೆಚಿಂಗ್ ಗುರು, ಸಹಪಾಠಿ, ಮಾರ್ಗದರ್ಶಕ ನಂಜುಂಡ ಬೆಳಗ್ಗೆನೆ ಬಂದಿದ್ದು, ಅಪ್ಪ ಬರಬೇಕೆಂದು ತುಂಬಾ ಆಶಿಸಿದ್ದರು ಅನಾರೋಗ್ಯದಿಂದ ಬರಲಾಗದ್ದು ಬೇಸರವಾದರು ಅಮ್ಮ ಹೇಮಕ್ಕ ಬಂದಿದ್ದು ಆ ಬೇಸರವನ್ನು ಸ್ವಲ್ಪ ಮಟ್ಟಿಗೆ ಮರೆಸಿತು.


ಮದ್ಯಾಹ್ನದ ವೇಳೆಗೆ ಅಲ್ಲಿಗೆ ಬಂದ ಸಂಪದ ಮಿತ್ರರೊಂದಿಗೆ ಕಳೆದ ಕ್ಷಣಗಳು ಯಾವತ್ತೂ ನೆನೆಯುವಂತಹುದು. ಅಲ್ಲಿ ಶಿವು ಮತ್ತು ಸವಿತ ಮಾಡಿದ ಚುಟುಕು ಸಂದರ್ಶನ.
ನನ್ನ ಪ್ರದರ್ಶನಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ, ಪ್ರೋತ್ಸಾಹಿಸಿದ, ಎಲ್ಲಾ ಸ್ನೇಹಿತರಿಗು ನಾನು ಸದಾ ಋಣಿ. ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಮತ್ತಷ್ಟು ಆತ್ಮವಿಶ್ವಾಸ, ಸ್ಪೂರ್ತಿ, ಧೈರ್ಯ, ಜೊತೆಗೆ ಜವಾಬ್ದಾರಿಯನ್ನು ಕೊಟ್ಟಿದೆ.
ನಿಮ್ಮೆಲ್ಲರ ಸಹಕಾರ ಹೀಗೆ ಇರಲೆಂದು ಆಶಿಸುತ್ತೇನೆ.
Comments
ಉ: ನನ್ನ ಕಲಾ ಪ್ರದರ್ಶನಕ್ಕೆ ಒಂದು ವರ್ಷ.
ಉ: ನನ್ನ ಕಲಾ ಪ್ರದರ್ಶನಕ್ಕೆ ಒಂದು ವರ್ಷ.
ಉ: ನನ್ನ ಕಲಾ ಪ್ರದರ್ಶನಕ್ಕೆ ಒಂದು ವರ್ಷ.
ಉ: ನನ್ನ ಕಲಾ ಪ್ರದರ್ಶನಕ್ಕೆ ಒಂದು ವರ್ಷ.
ಉ: ನನ್ನ ಕಲಾ ಪ್ರದರ್ಶನಕ್ಕೆ ಒಂದು ವರ್ಷ.