ನನ್ನ ಗೆಳತಿ - ಒಂದು ಗಝಲ್

ನನ್ನ ಗೆಳತಿ - ಒಂದು ಗಝಲ್

ಕವನ

ಎದೆಯ ಮೆಟ್ಟಿಲು ಹತ್ತಿ

ಬರುವೆಯಾ ಗೆಳತಿ

ಕದನ ಮಾಡದೆ ಜೊತೆಗೆ

ಇರುವೆಯಾ ಗೆಳತಿ

 

ಅನಂಗಳಾಗಿ ತನುವ

ಬೆರೆತ ಸುಮಭೂಷಿತೆ

ಅನಂತವಾದ ಪ್ರೀತಿಯನು

ತೋರುವೆಯಾ ಗೆಳತಿ

 

ಗೌರವರ್ಣದಿ ಹೊಳೆದು

ನಲಿದಿರುವ ಮಲ್ಲಿಗೆ

ಕಾರ್ಮೋಡದಿ ಮಳೆಯ

ಸುರಿವೆಯಾ ಗೆಳತಿ

 

ಶುಕ್ತಿಯೊಳಗೆ ಮುತ್ತಾಗಿ

ಮೌನ ಧರಿಸಿರುವೆ

ಯುಕ್ತಿಯಲಿ ರಮಣನ

ಅಪ್ಪುವೆಯಾ ಗೆಳತಿ

 

ವಾಗೀಶ್ವರಿ ನುಡಿಯಲ್ಲಿ

ಕಂಕರಿಯ ಬಾರಿಸುವೆ

ರಾಗದಲಿ ಅಭಿನವನನು

ಸೆಳೆವೆಯಾ ಗೆಳತಿ

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್