ನನ್ನ ಗೊಂಬೆ - ಶಿಶುಗೀತೆ

ನನ್ನ ಗೊಂಬೆ - ಶಿಶುಗೀತೆ

ಕವನ

ಮೋಟು ಕೈಯ ಚೋಟು ಗೊಂಬೆ

ನನ್ನ ನೋಡಿ ಕರೆಯಿತು!!

ಜಾತ್ರೆಯಲ್ಲಿ ಅಲೆಯುವಾಗ

ನನ್ನ ಮನವ ಕದಿಯಿತು!!

 

ದುಡ್ಡುಕೊಟ್ಟು ಮನೆಗೆತಂದೆ

ನಾನು ಆಟವಾಡಲು!!

ಕಣ್ಣು ತಗೆದು ಮುಚ್ಚುವಂತ

ಪುಟ್ಟ ಗೊಂಬೆ ನೋಡಲು!!

 

ತೊಟ್ಟಿಲಲ್ಲಿ ಮಲಗಿಸಿಟ್ಟು

ನಾನು ಲಾಲಿ ಹಾಡುವೆ!!

ಚಂದ್ರನನ್ನು ತೋರಿ ಅದಕೆ

ಕೈಯ ತುತ್ತ ನೀಡುವೆ!!

 

ತಲೆಯಬಾಚಿ ಹೂವನಿಟ್ಟು

ಪೌಡರನ್ನು ಹಚ್ಚುವೆ!!

ದೃಷ್ಟಿಬೊಟ್ಟು ಇಟ್ಟು ನಾನು

ಲಟಿಕೆಯನ್ನು ಮುರಿಯುವೆ!!

 

ಇಂತ ಗೊಂಬೆಗಾಗಿ ನಾನು

ಅಲ್ಲಿ ಇಲ್ಲಿ ಅಲೆದೆನು!!

ಗೋಲಿ ಕಣ್ಣ ಗೊಂಬೆಯಿಂದ

ದಿನವು ಹರುಷ ತಳೆದೆನು!!

-*ಶಂಕರಾನಂದ ಹೆಬ್ಬಾಳ*

ಚಿತ್ರ: ಗೂಗಲ್ 

 

ಚಿತ್ರ್