ನನ್ನ ತೀರ್ಮಾನ‌

ನನ್ನ ತೀರ್ಮಾನ‌

ಕವನ

ಕೆಲ ಸಮಯ ನಾ ತೀರ್ಮಾನಿಸುವೆ


ಹುಟ್ಟಿರುವುದೇ ನಿರಾಸೆಯುಸಿರಾಡುವುದಕೆ


ಕೆಂದುರಿಯ ಬಿಸಿಲ ತಾಪಕೆ ಬಾಡಲು


ಕಣ್ಣೀರ ಮಳೆಯೆಲಿ  ನೆನೆಯಲು


ಶ್ರುತಿ-ಲಯವಿಲ್ಲದ ಬಾಳಗೀತೆ ಹಾಡಲು


ಕಾಮ-ಕ್ರೋಧದ ಆಳಾಗಿರಲು


ಮದ-ಮೋಹದ ಬೆನ್ನೆಲುಬಾಗಿರಲು 


ಶೋಕ-ರಥದ  ಸಾರಥಿಯಾಗಿರಲು


ನೋವು-ಬೇಗೆಯ ಬಿರುಗಾಳಿಯ ಆಪ್ತನಾಗಲು


ಹಾಲಾಹಲವೆಲ್ಲಾ  ನನಗೇ  ಕುಡಿಯಲು


ಬಾಳ-ಬೇವ ಕಹಿಯೆಲ್ಲಾ  ರುಚಿಯುಣ್ಣಲು


ಕಷ್ಟ-ಕೋಟಲೆ  ಹಾಸಲು- ಹೊದೆಯಲು


ಬೆಂದ  ಹೃದಯದ ಒಡೆಯನಾಗಲು


ಆತ್ಮವಿಲ್ಲದ  ನಿರ್ವಿಕಾರ ಪ್ರೇತವಾಗಲು.


ಶ್ರೀ ನಾಗರಾಜ್


 

Comments