ನನ್ನ ತುಳುನಾಡು

ನನ್ನ ತುಳುನಾಡು

ನಾನು ನನ್ನ ತುಳುನಾಡಿನ ಬಗ್ಗೆ ಹೆಚ್ಚಾಗಿ ತುಳುವಿನಲ್ಲೇ ಲೇಖನ ಬರೆಯುತ್ತಿದ್ದೆ. ಈ ಪುಟ್ಟ ಲೇಖನವನ್ನು ಕನ್ನಡದಲ್ಲಿ ಬರೆದಿದ್ದೇನೆ ಏಕೆಂದರೆ "ತುಳುನಾಡನ್ನು ತುಳುವರು ಎಷ್ಟು ಪ್ರೀತಿಸುತ್ತಾರೊ ಅಷ್ಟೇ ಕನ್ನಡಿಗರೂ ಪ್ರೀತಿಸುತ್ತಾರೆ ಎಂಬುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ" ಈ ಕಾರಣಕ್ಕಾಗಿ ಕರ್ನಾಟಕದ ನನ್ನ ಕನ್ನಡಿಗ ಸ್ನೇಹಿತರೂ ನನ್ನ ಈ ಪುಟ್ಟ ಲೇಖನ ಓದಲಿ ಎಂದು  ಬರೆಯುತ್ತಿದ್ದೇನೆ.

ಉತ್ತರದ ಬಾರ್ಕೂರಿನಿಂದ ದಕ್ಷಿಣದ ನೀಲೇಶ್ವರದವರೆಗೆ ಸ್ವಚ್ಚಂದವಾದ ಹಸಿರು ವನಸಿರಿಯಿಂದ ಕಂಗೊಳಿಸುತ್ತಿದೆ ನನ್ನ ತುಳುನಾಡು. ಕಲೆ ಕಾರ್ಣಿಕಗಳಿಂದ ಮೆರೆಯುತ್ತಿದೆ. ಯಕ್ಷಗಾನ, ಕೋಲ, ಕಂಬುಲಗಳ ತವರೂರು ದೈವ ದೇವರುಗಳು ನೆಲೆಯಾಗಿರುವ ಪುಣ್ಯದ ಮಣ್ಣು ತುಳುನಾಡು. ವೀರರಾದ ಅಗೊಳಿ ಮಂಜಣ್ಣ ಹಾಗು ಕಾರಣಿಕದ ವೀರ ಪುರುಷರಾದ ಕೊಟಿ ಚನ್ನಯರು, ದೇವುಪೂಂಜರಂತಹ ಕಾರ್ಣಿಕ ಪುರುಷರು ಧರ್ಮ ನಿಷ್ಠೆ ಯಿಂದ ಮೆರೆದ ಪುಣ್ಯದ ಮಣ್ಣು ಇದು. ಸ್ತೀ ಪ್ರಧಾನವಾದ ಚೌಕಟ್ಟಿನಲ್ಲಿ ಎಲ್ಲಾ ಸಂಪ್ರದಾಯಗಳು ಇಲ್ಲಿನದ್ದು. ಇತರರಿಗೆ ಚಂದ್ರೊದಯದ ಅಮಾವಾಸ್ಯೆಯ ಲೆಕ್ಕದಲ್ಲಿ ತಿಂಗಳ ಕಾಲ ನಿರ್ಣಯವಾದರೆ ತುಳುನಾಡಿಗರಿಗೆ ಸೂರ್ಯೋದಯ ಸಂಕ್ರಮಣದ ಲೆಕ್ಕದಲ್ಲಿ ತಿಂಗಳ ಕಾಲ ನಿರ್ಣಯವಾಗುತ್ತದೆ ತಿಂಗಳ ಸಂಕ್ರಮಣದಂದು ತುಳುನಾಡಿನಲ್ಲಿ ತಿಂಗಳು ಬದಲಾಗುತ್ತದೆ ಸೌರಮಾನ ಯುಗಾದಿ (ಬಿಸು ಪರ್ಬ) ತುಳುನಾಡಿಗೆ ಹೊಸ ವರ್ಷ.

ವಿಭಿನ್ನ ಆಚರಣೆ ವಿಭಿನ್ನ ಸಂಸ್ಕೃತಿ ತುಳುನಾಡಿನದ್ದು ಭಾರತದ ಇತರ ಹಲವು ರಾಜ್ಯಗಳಲ್ಲಿ ಪುರುಷ ಪ್ರದಾನ ಪದ್ಧತಿಯಲ್ಲಿ ಮದುವೆಯಾಗಿ ಹೋದ ಹೆಣ್ಣು ಗಂಡನ ಕುಟುಂಬವನ್ನು ಸೇರುತ್ತಾಳೆ ಮತ್ತೆ ಅವಳಿಗೆ ತಾಯಿಮನೆಯ ಯಾವ ಹಕ್ಕೂ ಇರುವುದಿಲ್ಲ ಈ ಪದ್ಧತಿ ಗೆ "ಮಕ್ಕಳ ಕಟ್ಟ್" ಎಂಬ ಹೆಸರೂ ಇದೆ ಆದರೆ ತುಳುನಾಡಿನಲ್ಲಿ ಇದರ ತದ್ವಿರುದ್ಧವಾಗಿ "ಅಳಿಯ ಕಟ್ಟ್" ಅಥವಾ ಅಪ್ಪೆ ಕಟ್ಟ್ ಎಂಬ ಪದ್ಧತಿಯಲ್ಲಿ ತಾಯಿ ಮನೆಯ ಎಲ್ಲಾ ಹಕ್ಕನ್ನು ಮದುವೆಯಾಗಿ ಹೋದ ಹೆಣ್ಣು ಮಗಳು ಹೊಂದಿರುತ್ತಾಳೆ. ತಾಯಿಮನೆಯ ಆಸ್ತಿಪಾಲು ಅಂತ ಬಂದಾಗ ಆ ಮನೆಯ ಗಂಡು ಮಕ್ಕಳಿಗಿರುವ ಸಮಾನ ಪಾಲನ್ನು ಅವಳಿಗೂ ನೀಡಲಾಗುತ್ತದೆ. ಇಂತಹ ಸ್ತ್ರೀಗೆ ಮಹತ್ವದ ಸ್ಥಾನವನ್ನು ತುಳುನಾಡಿನಲ್ಲಿ ಅಲ್ಲದೆ ಬೇರೆ ಎಲ್ಲೂ ಇಂತಹ ಮೂಲ ಪದ್ದತಿಯನ್ನು ನೋಡಲು ಸಾಧ್ಯವಿಲ್ಲ

ಇನ್ನು ಆರಾಧನೆಯ ವಿಚಾರಕ್ಕೆ ಬಂದರೆ ಇಲ್ಲಿ ಮೂಲ ಆರಾಧನೆ ದೈವ ಆರಾಧನಾ ಪದ್ದತಿ ತುಳುನಾಡಿನಲ್ಲಿ ಕಾಣಸಿಗುತ್ತದೆ" ದೇವರಿಗೆ ಸಂಸ್ಕೃತ ಭಾಷೆ ಯಲ್ಲಿ ಇರುವ ಶ್ಲೋಕಗಳಿಂದ ಪೂಜೆ ಪುರಸ್ಕಾರಕ್ಕೆ ಪ್ರಾಧನ್ಯತೆ ನೀಡಿದರೆ ತುಳುನಾಡಿನಲ್ಲಿ ಕಾರ್ಣಿಕ ಮೆರೆಯುತ್ತಿರುವ ದೈವಗಳಿಗೆ "ತುಳುನಾಡಿನ ಆಡುಭಾಷೆ ತುಳುವಿನಲ್ಲೇ ಸಂಧಿ ಪಾಡ್ದನಗಳ ಮೂಲಕ ದೈವಾರಾಧನೆದ ಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ"

ಸುಂದರವಾದ ಸಂಸ್ಕೃತಿ ಹಾಗು ಪ್ರಾಕೃತಿಕ ಸಂಪತ್ತು ಸೌಂದರ್ಯದಿಂದ ಮೆರೆಯುತ್ತಿರುವ ತುಳುನಾಡು, ತುಳುನಾಡಿನ ದೈವಗಳ ಕೃಪೆಯಿಂದ  ವಿಶ್ವಕ್ಕೆ ಮಾದರಿಯಾಗಿರುವ ಪ್ರದೇಶ.

-ಪ್ರವೀಶ್ ಕುಲಾಲ್ ಬೀರಿಕುಂಜ

ಚಿತ್ರ ಕೃಪೆ: ಮಂಗಳೂರು ಹೆರಿಟೇಜ್ ಜಾಲತಾಣದಿಂದ