ನನ್ನ ದೇಶ

ನನ್ನ ದೇಶ

ಬರಹ

ನನ್ನ ಭಾರತ ದೇಶ, ಎಷ್ಟು ಸುಂದರ ದೇಶ
ನಯನಮನೋಹರ ಇಲ್ಲಿ ಸಿಗುವ ದೃಶ್ಯ

ಪಂಜಾಬ್ ಯುದ್ಧಕ್ಕೆ ಖ್ಯಾತಿಯಾದರೆ, ಬಂಗಾಳ ಬರೆಯುವುದರಲ್ಲಿ ಖ್ಯಾತಿ
ಆಹಾ ಏನು ಸುಂದರ ನನ್ನ ಭಾರತ!!!

ರಾಜಸ್ಥಾನ ಇತಿಹಾಸದಲ್ಲಿದ್ದರೆ, ಮಹಾರಾಷ್ಟ್ರ ಉದ್ದಿಮೆಗಾರಿಕೆಯಲ್ಲಿ
ಆಹಾ ಏನು ಸುಂದರ ನನ್ನ ಭಾರತ!!!

ಒರಿಸ್ಸಾ ದೇವಾಲಯ ನಗರವಾದರೆ, ಬಿಹಾರ ಖನಿಜಗಳ ರಾಜ,
ಆಹಾ ಏನು ಸುಂದರ ಈ ನನ್ನ ಮಂದಿರ!!!

ಮೈಸೂರು (ಕರ್ನಾಟಕ) ರೇಷ್ಮೆ ಚೆಂದ, ಹರ್ಯಾಣದ ಕ್ಷೀರ ಉತ್ಪನ್ನದಲ್ಲಿ ಅಂದ
ಚೆಂದಕ್ಕಿಂತ ಚೆಂದ ನೀನೆ ಸುಂದರ!!!

ನಾಗಾಲ್ಯಾಂಡ್ ನ ಪರ್ವತ ಮಾಲೆ, ಉತ್ತರಪ್ರದೇಶದಲ್ಲಿ ಗಿರಣಿಗಳ(ಯಂತ್ರ) ಸಾಲೆ
ಭಾರತಮಾತೆ ಇದೆಲ್ಲ ನಿನ್ನ ಮಾಯೆ!!!

ಕೇರಳ ಜ್ಞಾನಕ್ಕೆ, ತಮಿಳುನಾಡು ಧಾನ್ಯಕ್ಕೆ
ಭಾರತ ಮಾತೆ - ನಾನು ಯಾವುದಕ್ಕೆ???