ನನ್ನ ದೊರೆ !

ನನ್ನ ದೊರೆ !

ಕವನ

ನಗು ನಗುತ ನೀ

ಬಾರೊ ನನ್ನ ದೊರೆಯೆ

ನೀ ಹತ್ತಿರ ಹತ್ತಿರ ಬಂದರೆ 

ನಾ ನೋವನೆಲ್ಲ ಮರೆವೆ... ಪ 

 

ನೀನು ನಗುತ ನಗುತ ಇದ್ದರೆ 

ನನ್ನ ತನುವರಳಿ ನಲಿಯುತೈತೊ 

ನೀನು ಹತ್ತಿರ ಹತ್ತಿರ ಬಂದರೆ 

ನನ್ನ ಮನವರಳಿ ಹೂವಾಗುತೈತೊ 

 

ಈ ತಾಯಿಯ ಒಡಲಾಸೆ

ನಿನ್ನ ನಗುವ ಕಡಲಂತೆ ನೋಡುತೈತೊ 

ಹೊಂಗಿರಣದಿ ಹೊಳೆವಾಸೆ 

ನಿನ್ನ ನಗೆ ಹೊಳೆಯಲಿ ಮೀಯುತೈತೊ 

 

ನಿನ್ನ ಅಪ್ಪುಗೆ ಬೇಕೆಂಬಾಸೆ ಕೊರಳ

ಕದ ತೆರೆದು ಜೋಗುಳವ ಹಾಡುತೈತೊ 

ನಗು ನಗುತ ನೀ ಬಂದಾಗ  ಮನ 

ಶೃತಿಲಯ ಸೇರಿದ ಬದುಕ ಕಾಣುತೈತೊ 

 

ನಿನ್ನ ನಗು ನೋಡಿ ಬಾನಲ್ಲಿ

ಮುಗಿಲು ಬಣ್ಣದ ಚಿತ್ತಾರ ಹಾಕುತೈತೊ 

ನಿನ್ನ ನಗೆ ಮೋಡಿಗೆ ನನ್ನಲ್ಲಿ  

ಬಾಳ ಬೆಳದಿಂಗಳ ಬೆಳಕು ಕಾಣುತೈತೊ

-ಬಂದ್ರಳ್ಳಿ ಚಂದ್ರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್