ನನ್ನ ನಿರೀಕ್ಷೆ...
ಕವನ
ಹೃದಯ ಕಡಲಿನಲ್ಲಿ ಮಿಂದು
ಮಡಿಯಾಗಬೇಕು ನೀನು!!
ಸುಧೆಯ ಹರಿಸುವ ಗೀತೆಯ
ಸ್ವರವಾಗಬೇಕು ನೀನು!!
ಸುಕುಮಾರಿ ಮನದಿ ಮೆಲ್ಲಗೆ
ಸೂಜಿಕಾಂತ ಇಡುತಿರುವೆ!!
ಸುಕೋಮಲ ಸಹೃದಯ ಕಲ್ಪನೆಯ
ಸುಮವಾಗಬೇಕು ನೀನು!!
ಅಮೋಘ ಪೇಶಲದ ಅಪ್ಸರೆಯ
ನಯನ ಧರಿಸಿದೆಯೇಕೆ!!
ಜೀಮೂತದಂತೆ ಭುವಿಗೆ ಇಳಿವ
ಹನಿಯಾಗಬೇಕು ನೀನು!!
ಪರಿಶುದ್ದ ಭಾವದಲಿ ಆಮೋದ
ತರಲು ಬಾರೆ ರೂಪಸಿ!!
ಶರಧಿಯ ಆಳದಲಿ ಖನಿಜದ
ನಿಧಿಯಾಗಬೇಕು ನೀನು!!
ಒಡಲಿನ ಒಳ ಮಾರ್ಮಿಕತೆಯು
ಅಭಿನವನ ಕವಿತೆ!!
ಮಿಡಿವ ಅಂತರ್ಯದ ತಂಪಾದ
ನುಡಿಯಾಗಬೇಕು ನೀನು!!
-*ಶಂಕರಾನಂದ ಹೆಬ್ಬಾಳ*
ಜೀಮೂತ: ಮೋಡ
ಪೇಶಲ: ಕಾಂತಿ
ಚಿತ್ರ್
