ನನ್ನ ಪ್ರೀತಿ
ಕವನ
"ಹೃದಯದ ಬಾಗಿಲ ನೂಕಿ
ಸದ್ದಿಲ್ಲದೇ ಒಳಗೆ ಬಂದಾಕಿ
ಉಸಿರಲ್ಲಿ ಪ್ರೀತಿ ತುಂಬಿದಾಕಿ
ಹೃದಯದ ಬಡಿತ ಆದಾಕಿ
ಪ್ರೀತಿಯ ಲೋಕಕೆ ನನ್ನನು ನೂಕಿ
ಎಲ್ಲಿ ಹೋದಳು ನನ್ನಾಕಿ....?
-----------------------------------
"ಹೆಣ್ಣೇ ನಿನ್ನ ನೋಡಿದ ಮೇಲೆ
ನೆನಪುಗಳು ಕಾಡುತಿವೆ ಮೇಲಿಂದ ಮೇಲೆ
ಎಲ್ಲೆಲ್ಲಿಯೂ ನಿನ್ನ ಮಾತಿನ ಅಲೆ
ನೋಡಿದಲೆಲ್ಲಾ ನಿನ್ನ ಹೆಜ್ಜೆಯ ಕಲೆ
ತೋರಿಸಿದರೆ ನಿನ್ನ ಮುಖ ಈಗಲೇ
ಕಾಣುವೆ ಸ್ವರ್ಗ ಇಲ್ಲಿಂದಲೆ....!"