ನನ್ನ ಬದುಕು

ನನ್ನ ಬದುಕು

ಬರಹ

ದಿಟ್ಟೆ ಮನಸು ಏಕೆ ಕೊಟ್ಟೆ

ನನ್ನ ಸ್ಥಿತಿ-ಗತಿ ನೋಡಿಷ್ಟೆ

ಮುರುಕು ಮನೆ -ಅರಕು ಚಾಪೆ

ನನ್ನ ಮನೆಯು

ಮುರಿದ ಮನಸ್ಸು ಅರಿದ ಕನಸು

ನನ್ನ ಎದೆಯು

ಹೊಂಗೆ ನೆರಳು ಎನ್ನ ಸೂರು

ಮಾಗಿಯ ಚಳಿಗೆ

ನಿನಗೆ-ನಾ-ನನಗೆ ನೀ

ಕಂಬಳಿ

ಬೇಸಿಗೆಯ ಬಿಸಿಲಿಗೆ

ನಿನಗೆ ನನ್ನ ನನಗೆ ನಿನ್ನ

ಮೆಲ್ನುಡಿಯ ತಂಗಾಳಿ

ಒಲವೇ ನಿನ್ನ ನನ್ನ ಮೈಗೆ

ವಸ್ತ್ರ  ನಮ್ಮ ಪ್ರೀತಿ ಆಗಲಿ

ಪವಿತ್ರ ನಂಬಿಕೆಯೇ ನಿನಗೆ

ನಾ ಕಟ್ಟುವ ತಾಳಿ

ಆದರ್ಶವ ಹಂಚೊಣ

ಒಂದಾಗಿ ಬಾಳಿ

-ಕೃಷ್ಣಮೊರ್ತಿಅಜ್ಜಹಳ್ಲಿ