ಕವನ
ಕನ್ನಡ ಅಂದರೆ ಹೇಗಿರಬೇಕು
ಒಳ್ಳೇಯ ನುಡಿಯೇ ಕನ್ನಡವಾಗಿರಬೇಕು,
ಭೇದ ಭಾವವಿಲ್ಲದ ಭಾಷೆ ಅದು ಕನ್ನಡವಾಗಿರಬೇಕು,
ನನ್ನದು ನಿನ್ನದು ಎಲ್ಲರದು ಅದು ಕನ್ನಡವಾಗಿರಬೇಕು,
ಹುಟ್ಟಿ ಸಾಯುವ ಮುನ್ನ ಕನ್ನಡ ಕಲಿತಿರಬೇಕು,
ಒಳ್ಳೇಯ ಸಂಸ್ಕೃತಿ ಅದು ಕನ್ನಡವಾಗಿರಬೇಕು,
ನಮ್ಮೆಲ್ಲರ ಕನ್ನಡಿ ಅದು ಕನ್ನಡವಾಗಿರಬೇಕು,
ಬ್ರಹ್ಮ ಹಣೆಬರ ಬರೆಯುವ ಭಾಷೆ ಅದು ಕನ್ನಡವಾಗಿರಬೇಕು,
ನುಡಿಯಬೇಕು ಕನ್ನಡ,
ಮಾತಾಡಬೇಕು ಕನ್ನಡ,
ಉಳಿಸಿರಿ ಕನ್ನಡ ಬೆಳೆಸಿರಿ ಕನ್ನಡ,
ಎಂದೆಂದಿಗೂ ಆಗಿರಲಿ ಕನ್ನಡಿಗರ ಕನ್ನಡ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಲ್ಗೆ.
ಇಂತಿ ನಿಮ್ಮ ಕಿರು ಕವಿ,
ಸಿದ್ದರಾಮ ಏನ್.ಕೋರಪಳ್ಳಿ
Comments
ಕನ್ನಡವ ಮಾತಾಡು ಕನ್ನಡದ ಕಂದ
ಕನ್ನಡವ ಮಾತಾಡು ಕನ್ನಡದ ಕಂದ