ನನ್ನ ಮಣ್ಣಿನ ನೆನಪು
ಕವನ
ನನ್ನ ಮಣ್ಣಿನ ನೆನಪು
ನನ್ನ ಕಣ್ಣುಗಳಲ್ಲಿ ಮಿ೦ಚುವ ಬೆಳಕಿನ ಕಿರಣ
ನನ್ನ ಮಣ್ಣಿನ ಅನ್ನ
ನನ್ನ ನಾಡಿಗಳಲ್ಲಿ ಹರಿಯುವ ರಕ್ತ
ನನ್ನ ಮಣ್ಣಿನ ಕಣ ಕಣದ ಅಭಿವ್ಯಕ್ತಿ
ನನ್ನೊಳಗೆ ಯೋಚನೆಗಳನರಡಿ ಚಿ೦ತನೆಗಳಗೈದು
ಯೋಜನೆಗಳನುತ್ತು೦ಗಕೊಯ್ಯುವ ಬಾಷೆ. ನನ್ನ ಮಣ್ಣಿನ ಬಾಷೆ
ಹೀಗೆ ನನ್ನನಾವರಿಸಿರುವ ನಿನ್ನ
ಹೇಗೆ ಮರೆಯಲಿ ನನ್ನಿ೦ದಲೇ ನನ್ನ