ನನ್ನ ಮನಮೆಚ್ಚಿದ ಹುಡುಗಿ

ನನ್ನ ಮನಮೆಚ್ಚಿದ ಹುಡುಗಿ

ಕವನ

ನವನವೀನ ನಿನ್ನ ಈ ಗುಣ

ಮರುಳಾಯಿತು ನನ್ನ ಈ ಮನ

 

ಪದಪುಂಜಗಳಿಂದ ನಿನ್ನ ವರ್ಣಿಸುವೇ

ನಕ್ಷತ್ರಪುಂಜಗಳಿಂದ ನಿನ್ನ ಅಲಂಕರಿಸುವವೇ

ಜ್ಯೋರ್ತಿಪುಂಜಗಳಿಂದ ನಿನ್ನ ಬಾಳ ಬೆಳಗುವೇ

ನಾನಿನ್ನ ಪ್ರೀತಿಯ ಶರಪಂಜರದಲ್ಲಿ ಬಂಧಿಯಾಗಿರುವೇ

!!ನವನವೀನ ನಿನ್ನ ಈ ಗುಣ!!

 

ಗುಣವಂತೆ ನಿನ್ನ ಗುಣಗಾನ ಮಾಡಲೇ

ಸಿರಿವಂತೆ ನಿನ್ನ ಸಿರಿಸೊಬಗನ್ನು ನೋಡಲೇ

ಬುದ್ಧಿವಂತೆ ನಾನಿನ್ನ ಪ್ರೀತಿಗೆ ಬದ್ಧನಾಗಿರಲೇ

ನನ್ನ ಮನದ ದೇವತೆ ನಾನಿನ್ನ ಆರಾಧನೆ ಮಾಡಲೇ

!!ನವನವೀನ ನಿನ್ನ ಈ ಗುಣ!!

 

ನನ್ನ ಭರವಸೆಯ ಬೆಳಕು ನೀನು

ನನ್ನ ಮನಮನೆಯ ಬೆಳಗುವ ದೀಪವು ನೀನು

ಮಮತೆಯ ಪ್ರತಿರೂಪವು ನೀನು

ನನ್ನ ಮನಮೆಚ್ಚಿದ ಹುಡುಗಿಯು ನೀನು

!!ನವನವೀನ ನಿನ್ನ ಈ ಗುಣ!!

 

ನನ್ನ ಮನದರಸಿ ನಾನಿನ್ನರಸಿ ಬಂದಿರುವೇ

ನಿನ್ಯಾಕೆ ನನ್ನ ಕನಸಲ್ಲಿ ಬಂದು ಕಾಡುತ್ತಿರುವೇ

ನನ್ನ ಮನಸ್ಸನ್ನು ಕೆಡಿಸಿರುವ ಮಲ್ಲಿಗೆಯೇ

ನೀನೆಂದು ನನ್ನವಳಾಗಿ ನನ್ನೊಂದಿಗೆ ಬರುವೇ

!!ನವನವೀನ ನಿನ್ನ ಈ ಗುಣ!!

 

-ತುಂಬೇನಹಳ್ಳಿ ಕಿರಣ್ ರಾಜು ಎನ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್