ನನ್ನ ಮನ ನೊಂದಿದೆ ..
ಕವನ
ನನ್ನ ಮನ ನೊಂದಿದೆ
ದುಃಖವೆಂಬ ಬೆಂಕಿಯಲ್ಲಿ
ಉರಿದು ಬೆಂದಿದೆ
ನನ್ನ ಮನ ನೊಂದಿದೆ
ಪ್ರೀತಿಯೆಂಬ ದ್ವೇಷದಲ್ಲಿ
ನಗುವು ಕುಂದಿದೆ
ನನ್ನ ಮನ ನೊಂದಿದೆ
ಕಣ್ಣೀರಿನ ಕಡಲಿನಲ್ಲಿ
ಸುಖವೆಲ್ಲ ಮುಳುಗಿದೆ
ನನ್ನ ಮನ ನೊಂದಿದೆ
ಜೀವನದ ದಾರಿಯಲ್ಲಿ
ಉಸಿರು ನಿಂತಿದೆ
ನನ್ನ ಮನ ನೊಂದಿದೆ
ಪ್ರೀತಿಯ ವಿಶ್ವಾಸದಲ್ಲಿ
ಮನದ ಕೊಲೆಯಾಗಿದೆ
ನನ್ನ ಮನ ನೊಂದಿದೆ
ನೊಂದ ಮನದಲ್ಲಿ
ನಿರಾಸೆ ತುಂಬಿದೆ
ಜೀವನದಲ್ಲಿ ಜೀವಿಸುವುದಕ್ಕಿಂತ
ಜೀವನದಲ್ಲಿ ಜೀವಿಸದಿರುವುದೇ
ಜೀವದ ಭಾಗ್ಯವೆನಿಸಿದೆ