ನನ್ನ ಮಾತು

ನನ್ನ ಮಾತು

ಕವನ

ನನ್ನ ಮಾತು

ನನ್ನ ಎಡೆಗೆ

ಸಾಗಿ ಬರಲಿ ಎಂದಿಗು

ಎನ್ನ ಒಲವೆ

ಬಾಳ ಪಯಣ

ನಿನ್ನ ಜೊತೆಗೆ ಮುಂದೆಗು

 

ಕಾಣ ಬರಲಿ

ನಮ್ಮ ಸನಿಹ

ಕೈಯ ಹಿಡಿದ ಸುದಿನವು

ಮತ್ತೆ ಸೋಲು

ಚಿತ್ತ ನೋವು

ಬಿಟ್ಟು ಬಾರೆ ಚಂದವು

 

ಹೊತ್ತು ಕಂತಿ

ಮೆತ್ತಗಾಗೆ

ಮತ್ತಿನಾಟ ಕರೆಯಿತು

ಮೂಡು ಬೆಳಗೆ

ಚುಕ್ಕಿ ಸರಿಯೆ

ಮುತ್ತಿನೊಲವು ತಪ್ಪಿತು

 

ಜೀವ ಪಯಣ

ಹೀಗೆ ಸಾಗೆ

ನೋಡಿದಷ್ಟು ಹರುಷವು

ಬತ್ತದಿರುವ 

ಪ್ರೀತಿಯೊಳಗೆ

ಸತ್ಯವಿರಲಿ ನಿತ್ಯವು

 

ಮಾಹಿತಿ:

೩+೩

೩+೩

೩+೩+೪

೩+೩

೩+೩

೩+೩+೪

 

ಪ್ರತಿ ಸಾಲಿನಲ್ಲೂ ೩ ಮಾತ್ರೆಗಳಂತೆ ೨ ಗಣ, ಮೂರನೆ ಸಾಲಿನಲ್ಲಿ ೩ ಮಾತ್ರೆಯ ೨ ಗಣ ಕೊನೆಯ ಗಣ ನಾಲ್ಕು ಮಾತ್ರೆಗಳಿರುವಂತೆ ರಚಿಸಿರುವ ಛಂದಸ್ಸು ರಹಿತ ಕವನ .೩ನೇ ಮತ್ತು ೬ ನೇಯ ಸಾಲಿನ ಕೊನೆ ಅಕ್ಷರ ಪ್ರಾಸವಿರುವಂತೆ ರಚಿಸಿರುವ ನನ್ನದೇ ಆದ ಲಯ, ತಾಳ, ಯತಿಯ ಹಿಡಿತದೊಂದಿಗೆ ಗೆಯತೆಯನಿಟ್ಟು ಬರೆದ ಗೀತೆ .

******

ಗಝಲ್

ಇಣುಕದಿರು ನನ್ನೊಳಗೆ ಬಕುತಿಯನು ಬೇಡುತಲಿ 

ಕೆಣಕದಿರು ನಿನ್ನೊಳಗೆ  ಶಕುತಿಯನು ಬೇಡುತಲಿ

 

ಸಿಲುಕದಿರು ನಮ್ಮೊಳಗೆ ಮೌನವನು ಬೇಡುತಲಿ

ತಳೆಯದಿರು ಸಿಡುಕೊಳಗೆ ಚಹರೆಯನು ಬೇಡುತಲಿ

 

ಜರಿಯದಿರು ಮನದೊಳಗೆ ಚಿಂತೆಯನು ಬೇಡುತಲಿ

ಕಳೆಯದಿರು ತನುವೊಳಗೆ ಭ್ರಾಂತಿಯನು ಬೇಡುತಲಿ

 

ಸೆಣೆಸದಿರು ಕನಸೊಳಗೆ ಶಾಂತಿಯನು ಬೇಡುತಲಿ

ಪಡೆಯದಿರು ನನಸೊಳಗೆ ಕ್ರಾಂತಿಯನು ಬೇಡುತಲಿ

 

ತಡೆಯದಿರು ಈಶನೊಳಗೆ ಛಾಯೆಯನು ಬೇಡುತಲಿ

ಕಡೆಯದಿರು ಛಲದೊಳಗೆ ಚಾಳಿಯನು ಬೇಡುತಲಿ

 

-ಹಾ ಮ ಸತೀಶ

 

ಚಿತ್ರ್