ನನ್ನ ಮೊದಲ ಅಡುಗೆ
ನಾನಾಗ 7 ನೆಯ ಕ್ಲಾಸೋ ಅಥವಾ 8 ನೆಯ ಕ್ಲಾಸೋ ನನಗೆ ಸರಿಯಾಗಿ ನೆನಪಿಲ್ಲ.. ನನ್ನ ಅಮ್ಮ ಒಳಗಿಲ್ಲದ ಕಾರಣ ಅಡುಗೆ ಕೆಲಸ ನನ್ನ ಪಾಲಿಗೆ ಬಂದಿತ್ತು. ನಮ್ಮದು ಒಟ್ಟು ಕುಟುಂಬವಾದರೂ ಚಿಕ್ಕಿ ಮತ್ತು ಅವರ ಮಕ್ಕಳೆಲ್ಲ ಬೇಸಿಗೆ ರಜೆಗೆ ಊರಿಗೆ ಹೋಗಿದ್ದೂ ಸಹ ಮತ್ತೊಂದು ಕಾರಣ. ನನ್ನ ಅಪ್ಪ ಮತ್ತು ಚಿಕ್ಕಪ್ಪ ಹೋಟೆಲ್ ನಡೆಸುತ್ತಿದ್ದರು. ಸುಮ್ಮನೆ ಹೋಟೆಲ್ ನಿಂದ ಊಟ ತರಿಸಭುದಿತ್ತು. ಆದರೆ ಅಮ್ಮನಿಗೆ, ನನಗೆ ಅಡುಗೆ ಮಾಡಲು ಕಲಿಸಲು ಇದೊಂದು ಉತ್ತಮ ಅವಕಾಶ ಎಂದೆನಿಸಿರಬೇಕು. ಹಿತ್ತಿಲ ಕಡೆ ಬಾಗಿಲಿನ ಮೂಲಕ ಅಡುಗೆ ಮನೆಯ ಬಾಗಿಲಿನ ಹತ್ತಿರ ಬಂದು ಹೇಗೆ ಹೇಗೆ ಮಾಡಬೇಕು ಎಂದು ಹೇಳತೊಡಗಿದಂತೆ ನಾನೂ ಅದನ್ನು ಅನುಸರಿಸತೊಡಗಿದೆ. ನಮ್ಮ ಮನೆಯಲ್ಲಿ ಆಗ ಎಲಕ್ಟ್ರಿಕ್ ಸ್ಟೌ ಉಪಯೋಗಿಸುತ್ತಿದ್ದುದು. ಆದರ ಬಗೆಗೆ ಅಮ್ಮ ಮತ್ತು ಚಿಕ್ಕಿ ಇಬ್ಬರಿಗೂ ಅವ್ಯಕ್ತ ಭಯ ಇತ್ತು. ನಮ್ಮನ್ನೆಲ್ಲ ಅದರ ಹತ್ತಿರ ಸುಳಿಯಲೂ ಬಿಡುತ್ತಿರಲಿಲ್ಲ. ಜೊತೆಗೆ ಅಮ್ಮನಿಗೆ 'ಇಷ್ಟು ಸಣ್ಣ ಹೆಣ್ಣಿನ ಹತ್ರ ಕೆಲಸ ಮಾಡಿಸ್ಕಲ್ಲ ' ಎಂಬ ಮರುಕ ಇರಬೇಕು (ಬರೀ ನನ್ನ ಊಹೆ) ಅದಕ್ಕೆ ಸೀಮೆ ಎಣ್ಣೆ ಸ್ಟೌ ಹಚ್ಚಿಸಿದರು . ಬೇಳೆ ಬೇಯಿಸಿ ಒಂದು 'ಗೊಡ್ಡು' ಸಾರು ಮಾಡಿದರೆ ಅನ್ನ ಹೋಟೆಲ್ ನಿಂದ ತರಿಸುವ ಯೋಚನೆ ಅಮ್ಮನದು. ಅಮ್ಮನ ಸೂಚನೆಯಂತೆ ಎಲ್ಲ ಮಾಡಿ ಮುಗಿಸಿದೆ. ಸ್ಟೌ ಮೇಲೆ ಸಾರು ಕೊತ ಕೊತ ಕುದಿಯುತ್ತಿದ್ದರೆ, ಸಾರಿನ ಪರಿಮಳ ಘಮ ಘಮ ಎಂದು ಮೂಗನ್ನು ಅರಳಿಸಿ ಬಾಯಲ್ಲಿ ನಿರೂರಿಸುತ್ತಿತ್ತು. ಕುದಿದ ಸಾರನ್ನು ಕೆಳಗಿಳಿಸಲು ಹೋದಾಗ ಸ್ಟೌ ಸಮೇತ ಪಾತ್ರೆ ಕೆಳಗುರುಳಿ ಸಾರೆಲ್ಲ ನೆಲದ ಪಾಲಾಗಿತ್ತು. ಸ್ಟೌ ಸಹ ಉರುಳಿದ್ದರಿಂದ ಸೀಮೆ ಎಣ್ಣೆಯೂ ಚೆಲ್ಲಿ ಬೆಂಕಿ ಹತ್ತಿಕೊಂಡು ಉರಿಯತೊಡಗಿದಾಗ ನಾನು ಗಾಬರಿಯಿಂದ ಅಳತೊಡಗಿದ್ದೆ. ಅಮ್ಮ "ಎಂತಾ ಹೆಣೆ , ಎಂತ ಮಾಡ್ದೆ?" ಎಂದು ಅದರ ಮೇಲೆ ನೀರು ಸುರಿಯಲು ಹೇಳಿದ್ದರು. ಆಮೇಲೆ ಹೋಟೆಲಿನ ಅನ್ನ, ಸಾಂಬಾರೆ ಗಟ್ಟಿಯಾಯಿತು.
Comments
ಚೆನ್ನಾಗಿದೆ!!!! ಈ ರೀತಿಯ ನಿಮ್ಮ
In reply to ಚೆನ್ನಾಗಿದೆ!!!! ಈ ರೀತಿಯ ನಿಮ್ಮ by sasi.hebbar
ಹೌದು! ನಮ್ಮ ಊರಿನ ಭಾಷೆ ಸುoದರ
In reply to ಚೆನ್ನಾಗಿದೆ!!!! ಈ ರೀತಿಯ ನಿಮ್ಮ by sasi.hebbar
ಹೌದು! ನಮ್ಮ ಊರಿನ ಭಾಷೆ ಸುoದರ
In reply to ಹೌದು! ನಮ್ಮ ಊರಿನ ಭಾಷೆ ಸುoದರ by Shobha Kaduvalli
ಬದನೆಕಾಯಿ ಉಪ್ಪುಗೊಜ್ಜ್ ಮಾಡುವ
In reply to ಬದನೆಕಾಯಿ ಉಪ್ಪುಗೊಜ್ಜ್ ಮಾಡುವ by sasi.hebbar
ಎoತಹ ವಿಪರ್ಯಾಸ ಅಲ್ವಾ..? ನಮ್ಮ
In reply to ಬದನೆಕಾಯಿ ಉಪ್ಪುಗೊಜ್ಜ್ ಮಾಡುವ by sasi.hebbar
ಜೆ.ಪಿ ನಗರದ ಮಂಗಳೂರು ಸ್ಟೋರ್ಸ್
In reply to ಜೆ.ಪಿ ನಗರದ ಮಂಗಳೂರು ಸ್ಟೋರ್ಸ್ by Shobha Kaduvalli
!!! :) :) ವ0ಡಸೆಗೆ ಹೋಯ್ಕಲೆ,
ಪತ್ತೆ ಮಾಡಿ ಮಾರ್ರೆ...
In reply to ಪತ್ತೆ ಮಾಡಿ ಮಾರ್ರೆ... by Shobha Kaduvalli
ಅಕ್, ಅಕ್. . . . ಬದ್ನೆ ಕಾಯಿ
In reply to ಅಕ್, ಅಕ್. . . . ಬದ್ನೆ ಕಾಯಿ by sasi.hebbar
ತೆಳಿ ಸಾರು ರುಚಿ ಇರತ್ ಅ0ದ್ರಿ, .
In reply to ತೆಳಿ ಸಾರು ರುಚಿ ಇರತ್ ಅ0ದ್ರಿ, . by sasi.hebbar
ಕೊಚ್ಚಕ್ಕಿ ಗಂಜಿ ಗಟ್ಟಿ
In reply to ಕೊಚ್ಚಕ್ಕಿ ಗಂಜಿ ಗಟ್ಟಿ by Shobha Kaduvalli
ಕಿಸ್ಕಾರ್ ಹೂ ಅಂದ್ರೆ ಯಾವ್ ಹೂ
In reply to ಕಿಸ್ಕಾರ್ ಹೂ ಅಂದ್ರೆ ಯಾವ್ ಹೂ by sasi.hebbar
ಇದ್ದಿಕ್...
! ! :) :)