ನನ್ನ ಮೊದಲ ಅಡುಗೆ

ನನ್ನ ಮೊದಲ ಅಡುಗೆ

ನಾನಾಗ 7 ನೆಯ ಕ್ಲಾಸೋ ಅಥವಾ 8 ನೆಯ ಕ್ಲಾಸೋ ನನಗೆ ಸರಿಯಾಗಿ ನೆನಪಿಲ್ಲ.. ನನ್ನ ಅಮ್ಮ ಒಳಗಿಲ್ಲದ ಕಾರಣ ಅಡುಗೆ ಕೆಲಸ ನನ್ನ ಪಾಲಿಗೆ ಬಂದಿತ್ತು. ನಮ್ಮದು ಒಟ್ಟು ಕುಟುಂಬವಾದರೂ ಚಿಕ್ಕಿ ಮತ್ತು ಅವರ ಮಕ್ಕಳೆಲ್ಲ ಬೇಸಿಗೆ ರಜೆಗೆ ಊರಿಗೆ ಹೋಗಿದ್ದೂ ಸಹ ಮತ್ತೊಂದು ಕಾರಣ. ನನ್ನ ಅಪ್ಪ ಮತ್ತು ಚಿಕ್ಕಪ್ಪ ಹೋಟೆಲ್ ನಡೆಸುತ್ತಿದ್ದರು. ಸುಮ್ಮನೆ ಹೋಟೆಲ್ ನಿಂದ ಊಟ ತರಿಸಭುದಿತ್ತು. ಆದರೆ ಅಮ್ಮನಿಗೆ, ನನಗೆ ಅಡುಗೆ ಮಾಡಲು ಕಲಿಸಲು ಇದೊಂದು ಉತ್ತಮ ಅವಕಾಶ ಎಂದೆನಿಸಿರಬೇಕು. ಹಿತ್ತಿಲ ಕಡೆ ಬಾಗಿಲಿನ ಮೂಲಕ ಅಡುಗೆ ಮನೆಯ ಬಾಗಿಲಿನ ಹತ್ತಿರ ಬಂದು ಹೇಗೆ ಹೇಗೆ ಮಾಡಬೇಕು ಎಂದು ಹೇಳತೊಡಗಿದಂತೆ ನಾನೂ ಅದನ್ನು ಅನುಸರಿಸತೊಡಗಿದೆ. ನಮ್ಮ ಮನೆಯಲ್ಲಿ ಆಗ ಎಲಕ್ಟ್ರಿಕ್ ಸ್ಟೌ ಉಪಯೋಗಿಸುತ್ತಿದ್ದುದು. ಆದರ ಬಗೆಗೆ ಅಮ್ಮ ಮತ್ತು ಚಿಕ್ಕಿ ಇಬ್ಬರಿಗೂ ಅವ್ಯಕ್ತ ಭಯ ಇತ್ತು. ನಮ್ಮನ್ನೆಲ್ಲ ಅದರ ಹತ್ತಿರ ಸುಳಿಯಲೂ ಬಿಡುತ್ತಿರಲಿಲ್ಲ. ಜೊತೆಗೆ ಅಮ್ಮನಿಗೆ 'ಇಷ್ಟು ಸಣ್ಣ ಹೆಣ್ಣಿನ ಹತ್ರ ಕೆಲಸ ಮಾಡಿಸ್ಕಲ್ಲ ' ಎಂಬ ಮರುಕ ಇರಬೇಕು (ಬರೀ ನನ್ನ ಊಹೆ) ಅದಕ್ಕೆ ಸೀಮೆ ಎಣ್ಣೆ ಸ್ಟೌ ಹಚ್ಚಿಸಿದರು . ಬೇಳೆ ಬೇಯಿಸಿ ಒಂದು 'ಗೊಡ್ಡು' ಸಾರು ಮಾಡಿದರೆ ಅನ್ನ ಹೋಟೆಲ್ ನಿಂದ ತರಿಸುವ ಯೋಚನೆ ಅಮ್ಮನದು. ಅಮ್ಮನ ಸೂಚನೆಯಂತೆ ಎಲ್ಲ ಮಾಡಿ ಮುಗಿಸಿದೆ. ಸ್ಟೌ ಮೇಲೆ ಸಾರು ಕೊತ ಕೊತ ಕುದಿಯುತ್ತಿದ್ದರೆ, ಸಾರಿನ ಪರಿಮಳ ಘಮ ಘಮ ಎಂದು ಮೂಗನ್ನು ಅರಳಿಸಿ ಬಾಯಲ್ಲಿ ನಿರೂರಿಸುತ್ತಿತ್ತು. ಕುದಿದ ಸಾರನ್ನು ಕೆಳಗಿಳಿಸಲು ಹೋದಾಗ ಸ್ಟೌ ಸಮೇತ ಪಾತ್ರೆ ಕೆಳಗುರುಳಿ ಸಾರೆಲ್ಲ ನೆಲದ ಪಾಲಾಗಿತ್ತು. ಸ್ಟೌ ಸಹ ಉರುಳಿದ್ದರಿಂದ ಸೀಮೆ ಎಣ್ಣೆಯೂ ಚೆಲ್ಲಿ ಬೆಂಕಿ ಹತ್ತಿಕೊಂಡು ಉರಿಯತೊಡಗಿದಾಗ ನಾನು ಗಾಬರಿಯಿಂದ ಅಳತೊಡಗಿದ್ದೆ. ಅಮ್ಮ "ಎಂತಾ ಹೆಣೆ , ಎಂತ ಮಾಡ್ದೆ?" ಎಂದು ಅದರ ಮೇಲೆ ನೀರು ಸುರಿಯಲು ಹೇಳಿದ್ದರು. ಆಮೇಲೆ ಹೋಟೆಲಿನ ಅನ್ನ, ಸಾಂಬಾರೆ ಗಟ್ಟಿಯಾಯಿತು.

Comments

Submitted by sasi.hebbar Fri, 01/04/2013 - 08:52

ಚೆನ್ನಾಗಿದೆ!!!! ಈ ರೀತಿಯ ನಿಮ್ಮ‌ ಅನುಭವ‌ ಇನ್ನಶ್ಟು ಮೂಡಿಬರಲಿ, ‍_ "ಎಂತಾ ಹೆಣೆ , ಎಂತ ಮಾಡ್ದೆ?" ‍ ‍= ಈ ರೀತಿಯ‌ ಮಾತುಕತೆ ಅಲ್ಲಲ್ಲಿ ಬರೆದಶ್ಟೂ, ಬರಹ‌ "ರೈಸತ್!"
Submitted by Shobha Kaduvalli Fri, 01/04/2013 - 13:25

In reply to by sasi.hebbar

ಹೌದು! ನಮ್ಮ‌ ಊರಿನ‌ ಭಾಷೆ ಸುoದರ‌... ....., ಕಿವಿಗೆ ಇoಪು... ಆದರೆ ನನಗೆ ಅಷ್ಟಾಗಿ ಗೊತ್ತಿಲ್ಲ‌.. ಘಟ್ಟದ‌ ಕೆಳಗಿoದ‌ ಬ‌oದು ಬಹಳ‌ ವರ್ಷಗಳಾಯಿತು. ಒಮ್ಮೆ ಊರಿಗೆ ಹೋಗಿದ್ದಾಗ‌..., ನಾನು ಮತ್ತೆ ನನ್ನ‌ ತ‌oಗಿ ಇಬ್ಬರೇ, ಕುoದಾಪುರದಿoದ‌ ಕೆರಾಡಿಗೆ ಹೋಗುವ‌ ಬಸ್ ನಿಲ್ಡಾಣಕ್ಕೆ ದಾರಿ ಕೇಳಿದೆವು ಒಬ್ಬ‌ ಮಹಿಳೆಯ‌ ಹತ್ತಿರ‌.... ಉತ್ತರ‌ ಹೇಗಿತ್ತು ಗೊತ್ತಾ? ಹೀoಗೆ ಹೋಯ್ನಿ, ಬಲ್ದಾಕಡಿಗ್ ತಿರ್ಕಣಿ....." ಸ‌oಗೀತ‌ ಹಾಡಿದ‌oತಿತ್ತು.... ನನಗೆ ತುoಬಾ ಇಷ್ಟ‌ ನಮ್ಮ‌ ಕುoದಾಪುರದ‌ ಕನ್ನಡ‌... ಬೆoಗಳೂರಿನಲ್ಲಿ ಯಾರನ್ನದರೂ ದಾರಿ ಕೇಳಿ...!
Submitted by Shobha Kaduvalli Fri, 01/04/2013 - 13:29

In reply to by sasi.hebbar

ಹೌದು! ನಮ್ಮ‌ ಊರಿನ‌ ಭಾಷೆ ಸುoದರ‌... ....., ಕಿವಿಗೆ ಇoಪು... ಆದರೆ ನನಗೆ ಅಷ್ಟಾಗಿ ಗೊತ್ತಿಲ್ಲ‌.. ಘಟ್ಟದ‌ ಕೆಳಗಿoದ‌ ಬ‌oದು ಬಹಳ‌ ವರ್ಷಗಳಾಯಿತು. ಒಮ್ಮೆ ಊರಿಗೆ ಹೋಗಿದ್ದಾಗ‌..., ನಾನು ಮತ್ತೆ ನನ್ನ‌ ತ‌oಗಿ ಇಬ್ಬರೇ, ಕುoದಾಪುರದಿoದ‌ ಕೆರಾಡಿಗೆ ಹೋಗುವ‌ ಬಸ್ ನಿಲ್ಡಾಣಕ್ಕೆ ದಾರಿ ಕೇಳಿದೆವು ಒಬ್ಬ‌ ಮಹಿಳೆಯ‌ ಹತ್ತಿರ‌.... ಉತ್ತರ‌ ಹೇಗಿತ್ತು ಗೊತ್ತಾ? ಹೀoಗೆ ಹೋಯ್ನಿ, ಬಲ್ದಾಕಡಿಗ್ ತಿರ್ಕoಬ್ಕು (ನನಗೆ ಸರಿಯಾಗಿ ಗೊತ್ತಿಲ್ಲ‌))))))))( )) )) )))))000)))....." ಸ‌oಗೀತ‌ ಹಾಡಿದ‌oತಿತ್ತು.... ನನಗೆ ತುoಬಾ ಇಷ್ಟ‌ ನಮ್ಮ‌ ಕುoದಾಪುರದ‌ ಕನ್ನಡ‌... ಬೆoಗಳೂರಿನಲ್ಲಿ ಯಾರನ್ನದರೂ ದಾರಿ ಕೇಳಿ...!
Submitted by sasi.hebbar Mon, 01/07/2013 - 18:13

In reply to by Shobha Kaduvalli

ಬದನೆಕಾಯಿ ಉಪ್ಪುಗೊಜ್ಜ್ ಮಾಡುವ ರೀತಿ ಓದಿ, ಬಾಯಲ್ಲಿ ನೀರು ಬಂದು, ಅದೇ ರೀತಿ ಗೊಜ್ಜು ಮಾಡುವ ಅಂತ, ಜೆ.ಪಿ.ನಗರದ "ಮಂಗಳೂರು ಸ್ಟೋರ್" ನಲ್ಲಿ ಗುಳ್ಳದ ರೇಟು ಕೇಳಿದರೆ, ಕಿಲೊಗೆ 75 ರೂಪಾಯಿ ಅಂದರು! ರೇಟ್ ಎಷ್ಟೇ ಆದ್ರೂ, ಊರಿನ ಹೊಸರುಚಿಯನ್ನು - ಅಲ್ಲಲ್ಲ, ಹಳೆರುಚಿಯನ್ನು ಬಿಡುವುದಕ್ಕಾಗುತ್ತಾ? -ಮತ್ತೆ, ಈಗ ನೀವು ನಿಮ್ಮ ಹಾಲಾಡಿ ಅಜ್ಜಯ್ಯನ್ ಹೆಸರನ್ನು ಕಷ್ಟಪಟ್ಟು ಹುಡುಕಿ, ನನ್ನನ್ನು ಸ್ಕ್ವೇರ್ ಒನ್ ಗೆ ತಂದಿಟ್ಟುಬಿಟ್ಟಿರಿ! ಯಾಕೆಂದರೆ, ನೀವು ಹೇಳಿದ ಅಜ್ಜಯ್ಯನ ಹೆಸರನ್ನು ಪತ್ತೆ ಮಾಡಲು, ನಾನು ನನ್ನ ದೊಡ್ಡಮ್ಮನ ಹತ್ತಿರ ಕೇಳಬೇಕಾದ ಪರಿಸ್ಥಿತಿ ನನ್ನದು!
Submitted by Shobha Kaduvalli Mon, 01/07/2013 - 18:47

In reply to by sasi.hebbar

ಎoತಹ‌ ವಿಪರ್ಯಾಸ‌ ಅಲ್ವಾ..? ನಮ್ಮ‌ ಹಿoದಿನ‌ ಬರೀ ಎರಡನೇ ತಲೆಮಾರಿನವರ‌ ಹೆಸರು...ವಿವರ‌ ನಮಗೆ ಗೊತ್ತಿರುವುದಿಲ್ಲ‌.. ಬಹುಶಃ ಅವಿಭಕ್ತ ಕುಟುಂಬದ ಪರಿಕಲ್ಪನೆ ಮಾಯವಾಗುತ್ತಿರುವುದೇ ಕಾರಣ ಎನಿಸುತ್ತದೆ.
Submitted by Shobha Kaduvalli Sun, 01/27/2013 - 11:19

In reply to by sasi.hebbar

ಜೆ.ಪಿ ನಗರದ ಮಂಗಳೂರು ಸ್ಟೋರ್ಸ್ ನಲ್ಲಿ ಕೆ.ಜಿಗೆ 75 ರೂಪಾಯಿ ಇದ್ದ ಗುಳ್ಳ ಬದನೆ ವಂಡ್ಸೆ ತರಕಾರಿ ಅಂಗಡಿಯಲ್ಲಿ ನಿನ್ನೆ (26.01.2013) ಕೆ.ಜಿ ಗೆ 15 ರೂಪಾಯಿಗಳುಗಳು ಇತ್ತು.
Submitted by Shobha Kaduvalli Mon, 01/07/2013 - 18:37

ಪತ್ತೆ ಮಾಡಿ ಮಾರ್ರೆ... ಬಿಡ್ಕಾತ್ತಿಲ್ಲೆ ಅಲ್ದಾ.....? ಮಟ್ಟಿ ಗುಳ್ಳನೇ ಆಗುಕ‌oತಿಲ್ಲ‌... ಬಿಳಿ ಗುoಡು ಬದನೆಯೂ ಆತ್...
Submitted by sasi.hebbar Tue, 01/08/2013 - 12:52

In reply to by Shobha Kaduvalli

ಅಕ್, ಅಕ್. . . . ಬದ್ನೆ ಕಾಯಿ ಸುಟ್ ಗೊಜ್ಜು ತಿಂಬುದು ಬಿಡುಕ್ ಆತ್ತಾ? ಲಾಯಿಕ್ ರುಚಿ ಇರತ್ ಆ ಮೇಲ್ರ.!! . . . . ಹಾಂಗೇ, ಕಿಸ್ಕಾರ್ ಹೂಗಿನ್ ತಂಬ್ಳಿ ಮಾಡುದು ಹ್ಯಾಂಗೆ ಅಂತ್ ಚೂರ್ ಬರೀನಿ, ಕಾಂಬ.
Submitted by Shobha Kaduvalli Sun, 01/13/2013 - 20:39

In reply to by sasi.hebbar

ಕೊಚ್ಚಕ್ಕಿ ಗಂಜಿ ಗಟ್ಟಿ ಆತ್ತಿಲ್ಲೆ ಅಲ್ದಾ... ಗಂಜಿ ಗಟ್ಟಿ ಇರುಕು. ಮತ್ತೆ ಕೊಚ್ಚಕ್ಕಿ ಗಂಜಿ ಸಾಪಾತ್ತಿಲ್ಲೆ ಅಂಬ್ರು. ದೊಡ್ಡಮ್ಮ ಹೇಳಿರಪ್ಪ.. ನಂಗೆಂತ ಗೊತ್ತಿತ್. ನಾ ಕಳಸ್ತ್ನನ್ನಲ್ಲೆ,ಹೆಚ್ಚಿನಂಶ ದೊಡ್ಡಮ್ಮ ಮತ್ ಚಿಕ್ಕಿನ್ ಕೇಳಿ ಬರಿತೆ.
Submitted by sasi.hebbar Thu, 01/17/2013 - 14:20

In reply to by Shobha Kaduvalli

ಕಿಸ್ಕಾರ್ ಹೂ ಅಂದ್ರೆ ಯಾವ್ ಹೂ ಅಂತ ಗಟ್ಟದ ಮೇಲಿನವರಿಗೆ ಗೊತ್ತಾತ್ತಾ? ಕಿಸ್ಕಾರ್ ಹೂ ತಂಬುಳಿ ಮಾಡುವ ರೀತಿ ತಿಳಿಸಿದ್ದಕ್ಕೆ ಧನ್ಯವಾದ. ಆ ಹೂಗಿನ ಹೆಸ್ರು ಇಂಗ್ಲಿಸಿನಂಗೆ "ಇಕ್ಸೋರಾ" ಅಂತ್ ಇದ್ದದ್, ಈ ಶಬ್ದ "ಕಿಸ್ಕಾರ್" ಎಂಬ ಕುಂದಗನ್ನಡದ ಶಬ್ದದಿಂದ ಬಂತಾ, ಹ್ಯಾಂಗೋ ಅಂತ!