ನನ್ನ ಸಂಪದ-ಸಂಪದ

ನನ್ನ ಸಂಪದ-ಸಂಪದ

ಸಂಪದಕ್ಕೆ ಸೇರಿ ಕೆಲವೇ ದಿನಗಳಾದರೂ ಸಂಪದದ ಬಗ್ಗೆ ಬರೆಯಬೇಕೆಂಬ ಅದಮ್ಯ ಅಭಿಲಾಷೆ.ಇದೀಗ ಸೇರಿದವಳು ಸಂಪದದ ಬಗ್ಗೆ ಇನ್ನೇನು ಬರೆದಾಳು ಎಂದಿರೆ?ಅದೂ ನಿಜ ಅನ್ನಿ.ಆದರೆ ನನಗೀಗ ಸಂಪದಕ್ಕೆ ನಾನು ತೀರಾ ಹಳಬಳೆನ್ನಿಸುತ್ತಿದೆ.
 ಅನ್ನ ಬೆಂದಿದೆಯೇ ಎಂದು ನೋಡಲು ಅಗಳೊಂದನ್ನು ನೋಡಿದರೆ ಸಾಲದೆ?
            ನಾನು ಸಂಪದಕ್ಕೆ ಹೊಸಬಳು.ಅದಾಗ್ಯೂ ಸಂಪದ ನನ್ನನ್ನು ಅಕ್ಕರೆಯಿಂದ ಬರಮಾಡಿಕೊಂಡಿತು.ಇಲ್ಲಿನ ಪಾರದರ್ಶಕತೆ,ಸಹೃದಯತೆ,ಸೃಜನಶೀಲತೆ ನನ್ನ ಮನಸ್ಸನ್ನು ಗೆದ್ದಿತು.ಸಂಪದದ ಬಂಧುಗಳು ನಿಜಕ್ಕೂ ಸರಳ ಪ್ರವೃತ್ತಿಯವರು.
ಇನ್ನು ಸಂಪದದ ಬಗ್ಗೆ ಹೇಳಬೇಕೆಂದರೆ ಇದು ಸರಸ್ವತಿಯ ನಾಸಿಕದ ಮೌಕ್ತಿಕ.ಇದೊಂದು ಅತ್ತ್ಯುತ್ತಮ ವೇದಿಕೆ.ಬಹಳ ಹಿಂದೆ (೧೬ ವರ್ಷಗಳ )ಹೊಸದಿಗಂತ ಪತ್ರಿಕೆಯಲ್ಲಿ ನನ್ನ ಕಥೆ ಸಮೀಕ್ಷೆ ಪ್ರಕಟವಾಗಿತ್ತು.ತದನಂತರ ನಾನು ಬರೆದದ್ದು ಸಂಪದದಲ್ಲೇ.ಕನ್ನಡದಲ್ಲಿ ಟ್ಯೆಪ್ ಮಾಡಲು ಕಲಿತದ್ದೂ ಸಂಪದದಕ್ಕೆ ಬಂದಮೇಲೆ.ಪ್ರಪಂಚದ ಎಲ್ಲಾ ಕನ್ನಡ ಬಂಧುಗಳನ್ನು ಪ್ರೇಮ ತಂತುವಿನಿಂದ ಜೋಡಿಸಿದ ಸಂಪದದ ಪ್ರಯತ್ನ ನಿಜಕ್ಕು ಶ್ಲಾಘನೀಯವಾದದ್ದು.ಮುಖ್ಯವಾಗಿ ಹೇಳಬೇಕೆಂದರೆ ಇಲ್ಲಿ ಎಲ್ಲರಿಗೂ ಮುಕ್ತ ಅವಕಾಶ.ಇದರಿಂದ ಸಮಾಜದಲ್ಲಿ ಎಲೆಮರೆಯ ಕಾಯಾಗಿರುವ ಎಷ್ಟೋ ಪ್ರತಿಭಾನ್ವಿತ,ಉದಯೋನ್ಮುಖ ಲೇಖಕರನ್ನು ಜನ ಗುರುತಿಸುವಂತಾಗಿದೆ.ಮಾತ್ಸರ್ಯವನ್ನು ಮೀರಿ ನಿಂತಿರುವ ಸಂಪದಿಗರ ಸ್ವಭಾವ ಸಂಪದವನ್ನು ಗಗನಕ್ಕೇರಿಸಿದೆ.
ಇಂತಹ ಓಂದು ಸಾಹಿತ್ಯಾತ್ಮಕ ಮಾಧ್ಯಮವನ್ನು ಒದಗಿಸಿಕೊದುವ ಹಿಂದೆ ಸೂತ್ರಧಾರನ ಪಾತ್ರ ಬಹುಮುಖ್ಯ.ನಾನು ಸಂಪದದ ಹಣ್ಣನ್ನು ತಿನ್ನುತ್ತಿರುವವಳು.ಆದರೆ ಸಂಪದವೆಂಬ ಬೀಜವನ್ನು ಬಿತ್ತಿ ಅದನ್ನು ಪೋಷಿಸಿ ಬೆಳೆಸಿ ಅದು ಕಾಯಾಗಿ ಹೂವಾಗಿ ಹಣ್ಣಾಗುವ ವರೆಗೂ ಅದೆಷ್ಟು ಶ್ರಮ ಪಟ್ಟಿರಬಹುದೆಂದು ಯೋಚಿಸಿದಾಗ ಸಂಪದದ ನಿರ್ವಾಹಕರನ್ನು ಹೃತ್ಪೂರ್ವಕ ವಾಗಿ ಅಭಿನಂದಿಸ ಬೇಕೆನಿಸುತ್ತದೆ.
ಮಹಾಕವಿ ಕಾಳಿದಾಸನ ಶಾಕುಂತಲದಲ್ಲಿನ ಸೂತ್ರಧಾರನ ಶ್ಲೋಕವೊಂದು ನೆನಪಾಗುತ್ತಿದೆ.
"ಆಪರಿತೋಷಾದ್ವಿದುಷಾಮ್ ನ ಸಾಧು ಮನ್ಯೇ ಪ್ರಯೋಗ ವಿಜ್ಞಾನಮ್"
ವಿದ್ವಾಂಸರು ನನ್ನ ಈ ನಾಟಕವನ್ನು ನೋಡಿ ಪರಿತುಷ್ಟರಾಗುವ ತನಕ ನನ್ನ ಈಪ್ರಯೋಗವು ಸರಿಯಾಗಿದೆಯೆಂದು ನಾನು ಭಾವಿಸುವುದಿಲ್ಲ ಎಂದು.
ಸಂಪದದಲ್ಲಿ ಬರುತ್ತಿರುವ ಅನೇಕ ವಿದ್ವತ್ಪೂರ್ಣ ಲೇಖನಗಳು,ಕವನಗಳು ಸಂಪದದ ಗರಿಮೆಯನ್ನು ಹೆಚ್ಚಿಸಿವೆ.ಇವತ್ತು ಸಂಪದ ವಿದ್ವಜ್ಜನರಿಗೆ ಅತ್ಯಂತ ಪ್ರಿಯವಾಗಿದೆ.ಸರಸ್ವತಿಯ ಸೇವೆ ಅಹರ್ನಿಶಿ ನಡೆಯುತ್ತಿದೆ.
  ಶ್ರೀ ಶಂಕರಾಚಾರ್ಯರಿಂದ ರಚಿತವಾದ ಸೌಂದರ್ಯ ಲಹರಿಯ ಕೊನೆಯ ಶ್ಲೋಕದ ಕೊನೆಯ ಸಾಲಿನಲ್ಲಿ-
"ತ್ವದೀಯಾಭಿರ್ವಾಗ್ಭಿಸ್ತವಜನನಿ ವಾಚಾಂ ಸ್ತುತಿರಿಯಮ್"
ಆ ಭಗವತಿಯಿಂದ ಪ್ರದತ್ತವಾದ ವಾಕ್ಕುಗಳಿಂದಲೇ ಅವಳಿಗೆ ಸೇವೆ.
ಅದೇ ಸಾಹಿತ್ಯ ಸರಸ್ವತಿಯ ಸೇವೆ ಇಲ್ಲಿ ಪ್ರತಿದಿನವೂ ನಡೆಯುತ್ತಿದೆ.
ಸಂಪದಕ್ಕಾಗಿ ಹಗಲಿರುಳುಶ್ರಮಿಸಿದ ರೂವಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.ನಾನು ಸಂಪದಕ್ಕೆ ಇತ್ತಿಚೆಗೆ ಸೇರ್ಪಡೆಯಾಗಿದ್ದರೂ ಇದೀಗ ಸಂಪದ ನನ್ನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ.ಸಂಪದಕ್ಕೆ ನನ್ನನ್ನು ಪರಿಚಯಿಸಿದ ಸ್ನೇಹಿತೆ ಜಯಲಕ್ಶ್ಮಿ ಜ್ಞಾನಶೇಖರ್ ಳಿಗೆ ನಾನು ಚಿರಋಣಿ.
ವಿಪದೋ ನೈವ ವಿಪದಃ
ಸಂಪದೋ ನೈವ ಸಂಪದಃ
ವಿಪದ್ವಿಸ್ಮರಣಂ ವಿಷ್ಣೋಃ
ಸಂಪನ್ನಾರಾಯಣಸ್ಮೃತಿಃ
ಇದು ಒಂದು ತರಹದಲ್ಲಿ ಸಂಪದಕ್ಕೂ ಅನ್ವಯಿಸುವುದು.
ವಿಪತ್ಸಂಪದ ವಿಸ್ಮರಣಮ್
ಸಂಪತ್ಸಂಪದ ಲೇಖನಂ
ಸಂಪದದ ಬಳಗಕ್ಕೆ ಸಂಪದದ ವಿಸ್ಮರಣೆಯೇ ವಿಪತ್ತು
ಸಂಪದ ಲೇಖನವೇ ಸಂಪತ್ತು.

 
 

Comments

Submitted by venkatb83 Mon, 12/02/2013 - 14:50

In reply to by abdul

+1

ಸಂಪದದ‌ ಬಗ್ಗೆ ಹೇಳೋಕೆ ಹೊರಟ್ರೆ ಅದೇ ಒಂದು ದೊಡ್ದ ಬರಹ‌ ಆದೀತು.. .!!
ಅದರ‌ ಅಗತ್ಯತೆ ,ಉಪಯುಕ್ತತೆ,ಅದನ್ನು ನಾವ್ ಉಪಯೋಗಿಸಿಕೊಳ್ಳಬೇಕಾದ‌ ರೀತಿ ಬಗ್ಗೆ ಅಬ್ದುಲ್ ಅವರ ಮಾತನ್ನು ನಾ ಅನುಮೋದಿಸುವೆ..
ನಿಮ್ಮ ಬರಹ‌ ಕಾರಣವಾಗಿ‍ ನಾ ಸಂಪದ‌ ಸೇರಿ ಎಸ್ಟು ದಿನ‌ ಆಯ್ತು ಎಂದು ನೋಡಿದಾಗ‌ ' 5 ವರ್ಷ‌ ಒಂದು ವಾರ‌' ಎಂದು ತಿಳಿದು ಬಂತು...
ಇನ್ನೂ ಮೊನ್ನೆ ಮೊನ್ನೆ ನಾ ಸೇರಿದ‌ ಹಾಗೆ ಅನಿಸುತ್ತಿದೆ... ಇಸ್ಟು ಬೇಗ‌ ಅಸ್ಟು ವರ್ಷಗಳು ಆದವೇ ಅಂತ‌ ಅಚ್ಛರಿ !! ಸಹಾ ...!!

ನಿಮಗೆ ಶ್ಹುಭವಾಗಲಿ..

\|/

Submitted by ಗಣೇಶ Tue, 12/03/2013 - 23:52

In reply to by venkatb83

ಸಪ್ತಗಿರಿವಾಸಿ,
>>ನಾ ಸಂಪದ‌ ಸೇರಿ ಎಸ್ಟು ದಿನ‌ ಆಯ್ತು ಎಂದು ನೋಡಿದಾಗ‌ ' 5 ವರ್ಷ‌ ಒಂದು ವಾರ‌' ಎಂದು ತಿಳಿದು ಬಂತು...
-ಶುಭಾಶಯಗಳು. ೬ನೇ ವರ್ಷದಲ್ಲಿ ಅನೇಕ ಕತೆ ಕವನಗಳು ನಿಮ್ಮಿಂದ ಬರಲಿ ಎಂದು ಹಾರೈಸುವ,
ಗಣೇಶ.
ನಾಗರತ್ನ ಅವರೆ,
>>>ಸಂಪದದ ಬಳಗಕ್ಕೆ ಸಂಪದದ ವಿಸ್ಮರಣೆಯೇ ವಿಪತ್ತು
ಸಂಪದ ಲೇಖನವೇ ಸಂಪತ್ತು.
-ನೀವೇ ಬರೆದು ಮರೆತಿರಾ?
http://sampada.net/%E0%B2%97%E0%B3%81%E0%B2%A3%E0%B2%97%E0%B2%A3%E0%B2%A... ದಲ್ಲಿ ಹನುಮನ ಬಗ್ಗೆ ಒಂದು ಲೇಖನ ಬರೆಯುವೆ ಎಂದಿದ್ದೀರಿ. ಕಾಯುತ್ತಿರುವೆ. ಹಾಗೇ ಈ ಲೇಖನದಲ್ಲೇ ಪಾರ್ಥಸಾರಥಿಯವರಿಗೆ ಪ್ರತಿಕ್ರಿಯೆ ನೀಡುತ್ತಾ ಹರಿಕತೆ ಬಗ್ಗೆ ಬರೆಯುವೆ ಎಂದಿರುವಿರಿ..
ಸಿಂಗಾಪುರ ನಾಗೇಶರೆ,
ನಾಗರತ್ನ ಅವರು, ಮತ್ತು ಅವರ ತಂದೆಯವರ ( http://sampada.net/blog/haridasaneevaneganeshabhatta/11/04/2011/31255 ) ಕವನಗಳು ಸಂಪದಿಗರಿಗೆಲ್ಲಾ ಮೆಚ್ಚಿಗೆಯಾಗಿದ್ದವು. ರಘು ಮುಳಿಯ ಅವರೇ ಹೊಗಳಿದ್ದರು. ಎಲ್ಲಾ ಸಂಪದದಿಂದ ದೂರಾಗಿದ್ದಾರೆ..ಯಾಕೋ ಗೊತ್ತಿಲ್ಲ. ನಮಗೆ ಕವಿತೆಗಳ ಕೊರತೆಯಾಗದಂತೆ ನೀವು ನೋಡಿಕೊಳ್ಳುತ್ತಿದ್ದೀರಿ. ಧನ್ಯವಾದಗಳು.

Submitted by nageshamysore Wed, 12/04/2013 - 02:50

In reply to by ಗಣೇಶ

ಗಣೇಶ್ ಜಿ,

ಎಂತಹ ಸೊಗಸಾದ ಕವನ ಮತ್ತು ಕಲ್ಪನೆ! ಇವುಗಳ ಮುಂದೆ ನನ್ನ ಕವನಗಳು ಸೂರ್ಯನೆದುರು ಹಣತೆ ಹಿಡಿದಂತೆ, ಅಷ್ಟೆ. ಇವರೆಲ್ಲ ಸಂಪದದಲ್ಲಿ ಈಗ ಯಾಕೆ ಸಕ್ರೀಯರಾಗಿಲ್ಲವೊ ಗೊತ್ತಿಲ್ಲವಾದರೂ ಮತ್ತೆ ಶೀಘ್ರದಲ್ಲೆ ತಮ್ಮ ಬರಹದ ಸವಿಯುಣಿಸುತ್ತಾರೆಂದು ಆಶಿಸುತ್ತೇನೆ.

Submitted by hemalata jadhav Wed, 11/27/2013 - 21:47

ಸಂಪದ ಬಗ್ಗೆ ಪರಿಚಯ ಮಾಡಿಕೊಟ್ಟ ನಾಗರತ್ನಾ ಅವರೇ ತಮಗೆ ಅನಂತ ಧನ್ಯವಾದಗಳು.