ನನ್ನ 'ಸು' ಗೆ

ನನ್ನ 'ಸು' ಗೆ

ಬರಹ

ನನ್ನ 'ಸು' ಗೆ, ಹಿಂದಿನ ವರ್ಷ ಇದೇ ದಿನದಂದು ನೀನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಂಚಲು ಬಂದಾಗ, ನಾಚದೇ ನಾನು ನಿನ್ನ ಬಟ್ಟಲಿನಿಂದ ಬಾಚಿದ್ದೆ, ನೆನಪಿದೆಯಾ..? ನೀನು ನನ್ನ ಮುಖವನ್ನೂ ನೋಡದೆ ನೀಲಿ ಜರೀ ಲಂಗವನ್ನು ಎತ್ತಿ ಓಡುವಾಗ ನಿನ್ನ ಗೆಜ್ಜೆಗಳನ್ನೇ ಕೇಳುತ್ತಾ ನಿಂತಿದ್ದೆ ನಾನು... ನಿನ್ನ ನಾ ಬಸ್ಸಲ್ಲೇ ನೋಡಿದ್ದೆ.. ಸುಮ್ಮನೆ ನೋಡುತ್ತಾ ನಿಂತಿರುತ್ತಿದ್ದೆ..ಕಂಡಕ್ಟರನ ಬಳಿ ಎರ್ಅಡು ರೂಪಾಯಿ ಚಿಲ್ಲರೆಗೆ ಜಗಳವಾಡುವಾಗ, ಚಪ್ಪಲಿ ಮೆಟ್ಟಿ ನಿನ್ನ ಹಿಂದೆ ನಿಂತ ದಪ್ಪ ಹೆಂಗಸು ಮೈಮೇಲೆ ಬಿದ್ದಾಗ ನೀನು ದಬಾಯಿಸುವಾಗ, ಪಕ್ಕದ ಸೀಟಿನಲ್ಲಿ ಕುಳಿತ ಹೆಂಗಸಿನ ಪುಟ್ಟ ಮಗು ನಿನ್ನ ಉದ್ದ ಜಡೆ ಎಳೆಯುವಾಗ ನಾನಲ್ಲೇ ಇರುತ್ತಿದ್ದೆ.. ನೀನು ನನ್ನ ನೋಡಲಿಲ್ಲವೋ, ನೋಡಿದರೂ ನೋಡದಂತೆ ನಟಿಸಿದೆಯೋ ನಾಕಾಣೆ.. ಆದರೆ ಅಂದೇ ನೀನು ಆವರಿಸಿದ್ದೆ.. ಅದಾದ ಮೇಲೇ ನಾನು ಪೌಡರ್ ಹಚ್ಚಿಕೊಂಡು ಒಮ್ಮೆ ಕಾಲೇಜಿಗೆ ಬಂದದ್ದು..