ನನ್ನ ಹಾಳು ಮರೆವೂ ಮತ್ತು ವೈ ವೈ, ಹೌ ಹೌ , ವಾಟ್ ವಾಟ್ ಅನಾಲಿಸಿಸ್ಸೂ

ನನ್ನ ಹಾಳು ಮರೆವೂ ಮತ್ತು ವೈ ವೈ, ಹೌ ಹೌ , ವಾಟ್ ವಾಟ್ ಅನಾಲಿಸಿಸ್ಸೂ

ಬರಹ

ಅರವತ್ತಕ್ಕೆ ಅರಳು ಮರಳು ಅಂತಾರೆ, ಅದು ಐವತ್ತಾಯ್ತು, ನಲವತ್ತಾಯ್ತು, ಮುವತ್ತೂ ಆಗ್ಲಿ ಬಿಡಿ ಆದರೆ ಇಪ್ಪತ್ತರ ನಡುವಲ್ಲಿನ ನಮಗ್ಯಾಕೆ ಬಂತು ಅಡರಿಕೊಂಡಿತು ಈ ಮರೆವಿನ ಕಾಯಿಲೆ ಅನ್ನೋದೇ ತಿಳೀತಿಲ್ಲ
ಅದೇನೋ ಸುಮಾರು ವರ್ಷದಿಂದ ಎಲ್ಲಾ ಮರೀತಿದೀನಿ. ಎಷ್ಟರ ಮಟ್ಟಿಗ್ಗೆ ಅಂದರೆ ಯಾವುದೋ ಡಾಕ್ಯುಮೆಂಟ್ಸ್ ಸೈನ್ ಮಾಡಬೇಕು ಅಂದರೆ
"ಅಂಜಲಿ ಅದೇನೋ ಕೊಟ್ಟು ಅದೇನೋ ಮಾಡ್ಬೇಕಂತ ಹೇಳಿದ್ದೀರಲ್ಲಾ ತಗೊಂಬನ್ನಿ ಅನ್ನುವಷ್ಟರ ಮಟ್ಟಿಗೆ, ಆಕೆ ಕಕ್ಕಾಬಿಕ್ಕಿ" ಏನ್ ಮೇಡಮ್"
" ಅದೇಮಾ ನೆನ್ನೆ ಹೇಳ್ತಾ ಇದ್ರಲ್ಲ ಅದು" ಆಕೇನೆ ಅರ್ಥ ಮಾಡ್ಕೊಬೇಕು.

ಇನ್ನೊಮ್ಮೆ ನನ್ನ ಸ್ಟೂಡೆಂಟ್ ಒಬ್ಬ ಬ್ಯಾಲನ್ಸ್ ದುಡ್ದು ಕೊಡಬೇಕಿತ್ತು. ಅವತ್ತು ಯಾರೋ ಬಂದರು " ಏನಪ್ಪ ಇಷ್ಟು ದಿನಾ ಆಯ್ತು ದುಡ್ಡು ಕೊಡಲ್ಲ, ಅದೇ ಒಂದೆರೆಡು ದಿನ ಲೇಟ್ ಆಗಿ ಮೆಟೀರಿಯಲ್ಸ್ ಕೊಟ್ರೆ ತಡೀತೀರಾ " ಅಂತ ಶುರು ಮಾಡಿದೆ ಆತ "ಮೇಡಮ್ ನಾನು ಎನ್‌ಕ್ವರಿ ಮಾಡಕೆ ಅಂತ ಬಂದಿರೋದು ಎಂದಾಗ ನಾನು ಸುಸ್ತು.
ಏನಾದರೂ ಅಡುಗೆ ಮಾಡಬೇಕಿದ್ದಾಗ ನನ್ನ ಗೋಳು ಹೇಳಕ್ಕಾಗಲ್ಲ
ಏನೋ ಮಾಡಲು ಹೋಗಿ ಏನೋ ಮಾಡೋದೆ ಆಗಿರೋದು.
ಎಲ್ಲಕ್ಕಿಂತ ತಮಾಷೆ ಕೀನದ್ದು ಸ್ಕೂಟಿ ಕೀ ತರೋದಿಕ್ಕೆ ಬದಲಾಗಿ ಅಲೆಮಾರ ಕೀ ತಂದದ್ದಲ್ಲದೆ ಸ್ಕೂಟಿಗೆ ಹಾಕಕ್ಕಾಗದೆ ಪ್ರಯಾಸ ಪಡ್ತಿದ್ದೆ ಮನೇಲಿ ಕೀ ಕಾಣದೆ ಕಂಗಾಲು.

ಮನೇಲಿ ನನ್ನ ಮರೆವು ನೋಡಿ ನಮ್ಮವರು ಒಂದಿನ ನನ್ನನ್ನೆ ಯಾರು ಅಂತ ಕೇಳ್ತಿಯಾ ಅಂತಾರೆ
ಹಾಗಾಗಿ ಒಂದು ಪ್ಲಾನ್ ಮಾಡ್ಕೊಂಡಿದೀನಿ
ಎಲ್ಲೋ ಯಾವುದೋ ಮ್ಯಾನೇಜ್‍ಮೆಂಟ್ ಟ್ರೈನಿಂಗ್ ಅಟೆಂಡ್ ಮಾಡಿದಾಗ ಒಂದು ವಿಷಯ ಹೇಳಿದ್ದರು ಅದೇ ವೈ ವೈ ಅನಾಲಿಸಿಸ್
ಅಂದರೆ ರೂಟ್ ಕಾಸ್ (root cause) ಯಾವುದು ಅಂತ ತಿಳಿಯುವುದು
ಒಂದು ಸಣ್ಣ ಉದಾಹರಣೆ
ಎಲ್ಲೋ ಒಂದು ಕಡೆ ನೌಕರನೊಬ್ಬನನಿಂದ ಕಂಪೆನಿಗೆ ಲಾಸ್ ಆಗುತ್ತದೆ ಎಂದುಕೊಳ್ಳಿ , ಅಂದರೆ ಅದಕ್ಕೆ ಕಾರಣ ಏನು, ನೌಕರನ ವಿಫಲತೆ , ವಿಫಲತೆಗೆ ಕಾರಣ ಏನು ಅವನ ನಿರ್ಲತ್ಕ್ಶ್ಯತನ ಕಾರಣ ಅವನ ನಿರ್ಲಕ್ಷ್ಯತನಕ್ಕೆ ಕಾರಣ ಅವನು ನಿದ್ದೆ ಸರಿಯಾಗಿ ಮಾಡಿರಲಿಲ್ಲ , ಅದಕ್ಕೆ ಕಾರಣ ಅವನು ಹಿಂದಿನ ದಿನ ತಡವಾಗಿ ಮನೆಗೆಹೋಗಿದ್ದ, ತಡವಾಗಿ ಮನೆಗೆ ಹೋಗಲು ಕಾರಣ ಅತೀ ಕೆಲಸ, ಅತೀ ಕೆಲಸದ ಕಾರಣ ಆತ ಇಬ್ಬರ ಕೆಲಸ ಒಬ್ಬನೇ ಮಾಡಿದ್ದ. ಇಬ್ಬರ ಕೆಲಸ ಒಬ್ಬನೇ ಮಾಡಿದ್ದಕ್ಕೆ ಕಾರಣ ಇನ್ನೊಬ್ಬನ ಸ್ಥಾನಕ್ಕೆ ಯಾರನ್ನೂ ತೆಗೆದುಕೊಂಡಿಲ್ಲ. ಹಾಗಾಗಿ ಅದು ಕಂಪೆನಿಯ ವೈಫಲ್ಯತೆ

ಇದಕ್ಕೂ ನನ್ನ ಮರೆವಿಗೂ ಏನು ಸಂಬಧ ಅಂದ್ಕೋಬೇಡಿ,
ನಾನು ಸಪ್ಪೋಸ್ ಕಾಫಿ ಮಾಡಿಕೊಡಲು ಅಡುಗೆ ಮನೆಗೆ ಹೋಗ್ತೀನಿ ಅಂದ್ಕೊಳ್ಳಿ
ಆಸ್ ಯೂಸುಯಲ್ ಮರೀತೀನಿ
ಮೊದಲು ನಾನು ಎಲ್ಲಿ ನಿಂತಿದೀನಿ
ಅಡುಗೆ ಮನೆಯಲ್ಲಿ
ಯಾಕೆ ಅಡುಗೆ ಮನೆಯಲ್ಲಿ ನಿಂತೀದೀನಿ ?
ಕಾಫಿ ಮಾಡೋದಿಕ್ಕೆ
ಕಾಫೀ ಮಾಡಕ್ಕೆ ಮೊದಲು ಏನು ಮಾಡಬೇಕು
ಡಿಕಾಕ್ಶನ್ ಹಾಕಬೇಕು
ಅದಕ್ಕೆ ಏನುಮಾಡಬೇಕು?
ನೀರು ಬಿಸಿಗಿಡಬೇಕು, ಜೊತೆಗೆ ಫಿಲ್ಟರ್ ತೊಳೆದಿದೆಯೇ ನೋಡಬೇಕು

ಹೀಗೆ ಸಾಗುತ್ತದೆ ನನ್ನ ಹೌ ಹೌ ಅನಾಲಿಸಿಸ್

ಇದೊಂಥರ ನಂಗೆ ಆಟವಾಗಿಯೂ , ಮರೆವಿಗೆ ಔಷಧಿಯಾಗಿಯೂ ಕೆಲಸ ಮಾಡುತ್ತೆ

ಆದರೆ ತೊಂದರೆ ಅಂದ್ರೆ ಈ ಅನಾಲಿಸಿಸ್ ಮಾಡೋದೆ ಮರೆತು ಹೋಗೋ ಸಾಧ್ಯತೆಗಳೇ ಬಹಳ ಜಾಸ್ತಿ ಇರೋದು