ನನ್ ಫ್ರೆಂಡ್ಸು
ಬರಹ
ನನ್ ಫ್ರೆಂಡ್ಸ್ದೆಲ್ಲಾ ಒಂದೆ ಪ್ರಶ್ನೆ
ಯಾಕ್ ಮಾಡ್ತಿರ್ತ್ಯ ಇಷ್ಟೊಂದ್ ಜಾಗರಣೆ
ಅವ್ರಿಗ್ ಹೇಗ್ ಹೇಳ್ಲಿ ನನ್ ಯಾತ್ನೆ
ಅದಕ್ ಸ್ವಲ್ಪ ಹಾಕ್ತೀನಿ ಒಂಚೂರ್ ಒಗ್ಗರಣೆ
ಬರುತ್ತೆ ಸಖತ್ ಕೆಲ್ಸ ನನ್ ಹುಡುಕ್ಬಿಟ್ಟು
ಅದಕ್ ನೋಡ್ರಪ್ಪ ಮೈಲು, ಲೆಟ್ರು, ಸ್ಪ್ರೆಡ್ಶೀಟು
ಇದ್ರ ಜೊತೆಗ್ ಮತ್ ಮತ್ತೆ ಪಿಂಗೋ ಛಾಟು
ಅದೂ ಇಲ್ಲಾಂದ್ರೆ ನಾನೇ ಮಾಡೋ ಆರ್ಕುಟ್ಟು
ಏನಿಲ್ಲಾಂದ್ರು ಇರುತ್ತು ಸ್ಲಾಶ್ಡಾಟು, ಫ್ರೆಶ್ಮೀಟು ಮತ್ತು ರೆಡಿಟ್ಟು,
ಹೇಳ್ಕೊಳಕ್ ಮಾತ್ರ ದೊಡ್ ಬಾಸು
ಮಾಡ್ತೀಯ ಬರೀ ಟೈಂ ಪಾಸು
ಹೀಗೆ ಆದ್ರೆ ಏನಾಗ್ಬೇಕು ಬಿಸ್ನೆಸ್ಸು
ಅಂತ ಬೈದ್ರು ನನ್ ಫ್ರೆಂಡ್ಸು