ನಭೋಮಂಡಲದಲ್ಲಿ ದೀಪಾವಳಿ

ನಭೋಮಂಡಲದಲ್ಲಿ ದೀಪಾವಳಿ

ಬರಹ

ಇದೆಂತಾ ದೀಪಾವಳಿ ಅಂದ್ಕೊಂಡ್ರಾ? ಹೌದು, ಬಾಹ್ಯಾಕಾಶದಲ್ಲಿ ರಾಕೆಟ್ ಸಿಡಿದು ಹತ್ತು ಉಪಗ್ರಹಗಳನ್ನ ಕಕ್ಷೆಗೆ ಸೇರಿಸಿದೆ. ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C9) ಸೋಮವಾರ ಈ ಕೆಲಸ ಮಾಡಿದೆ.

ಭಾರತ ಇದರಿಂದಾಗಿ ಬಾಹ್ಯಾಕಾಶ ಇತಿಹಾಸವನ್ನ ಸೃಷ್ಟಿಸಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾ ದಿಂದ ಗಗನಕ್ಕೆ ಚಿಮ್ಮಿದ PSLV-C9 ಒಂದಾದನಂತರ ಒಂದು ಉಪಗ್ರಹವನ್ನ ನಿರ್ದೇಶಿತ ಕಕ್ಷೆಗೆ ಸೇರಿಸ್ತಾ ಹೊಯ್ತಂತೆ. Cartosat-2A ಮತ್ತು IMS-1 ಭಾರತದ ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್ಗಳಾದರೆ, ಉಳಿದವು ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳು ಅಭಿವೃದ್ದಿ ಪಡಿಸಿದಂತಹವು.

ಈ ಉಪಗ್ರಹಗಳು ಏನೆಲ್ಲಾ ಮಾಡಬಲ್ಲವು ಅಂತ ತಿಳಿಸುವ ಹಿಂದು ಪತ್ರಿಕೆಯ "Fit as a Fiddle" ವರದಿ ಇಲ್ಲಿದೆ.

 ಇಸ್ರೋದ PSLV-C9 ವೆಬ್ ಪೇಜ್ ನಿಮಗಿಲ್ಲಿ ಲಭ್ಯವಿದೆ.

ನ್ಯಾನೋ ಸ್ಯಾಟಲೈಟ್ ಗಳನ್ನ ನೋಡೋದ್ ಮರೀಬೇಡಿ.