ನಮಗೆ ಕಷ್ಟಗಳು ಬಂದಾಗ...

ನಮಗೆ ಕಷ್ಟಗಳು ಬಂದಾಗ...

ಕಷ್ಟಗಳು ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತಾ.. ಎಂಬ ಮಾತಿದೆ. ಮರಗಿಡಗಳಿಗೂ ಜೀವವಿದೆ. ಅವುಗಳಿಗೆ ಹೇಳಲು ಬರುವುದಿಲ್ಲ ಅಷ್ಟೇ. ಈಗಂತೂ ನಗರೀಕರಣದ ನೆಪದಲ್ಲಿ ಮರಗಳನ್ನು ಬೇಕಾಬಿಟ್ಟಿ ಕಡಿಯುತ್ತಿದ್ದಾರೆ. ಇರಲಿ, ಇಲ್ಲಿರುವ ಕೆಲವು ಸಾಲುಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಓದಿರಲೂ ಬಹುದು. ಕಷ್ಟ ಬಂದಾಗ ಕುಗ್ಗದೆ, ಹಿಂಜರಿಯದೇ ನಿಮ್ಮ ಗುರಿಯತ್ತ ನಡೆದರೆ ಮಾತ್ರ ನೀವು ಜೀವನದಲ್ಲಿ ಸಫಲರಾಗಬಹುದು ಎನ್ನುವುದೇ ಈ ಬರಹದ ಉದ್ದೇಶ. ಈ ಮೆಸ್ಸೇಜ್ ಎಷ್ಟು ಅದ್ಭುತವಾಗಿದೆ, ಒಮ್ಮೆ ಓದಿ...

  • ಹಾಲಿಗೆ ಕಷ್ಟ ಕೊಟ್ಟರೆ ಮೊಸರು ಬರುತ್ತೆ.
  • ಮೊಸರನ್ನ ಸತಾಯಿಸಿದರೆ ಬೆಣ್ಣೆ ಬರುತ್ತೆ.
  • ಬೆಣ್ಣೆಗೆ ಬೆಂಕಿಯಿಟ್ಟರೆ ತುಪ್ಪ ಬರುತ್ತೆ.
  • ಹಾಲಿಗಿಂತ ಮೊಸರಿಗೆ ಬೆಲೆ ಜಾಸ್ತಿ, ಮೊಸರಿಗಿಂತ ಬೆಣ್ಣೆಗೆ ಬೆಲೆ ಜಾಸ್ತಿ, ಬೆಣ್ಣೆಗಿಂತ ತುಪ್ಪಕ್ಕೆ ಬೆಲೆ ಜಾಸ್ತಿ.

ಆದರೆ ಈ ನಾಲ್ಕೂ ವಸ್ತುಗಳ ಬಣ್ಣ ಮಾತ್ರ ಬಹುತೇಕ ಒಂದೇ ತರಹದ್ದು. ಇದರ ಅರ್ಥ ಏನೆಂದರೆ, ಮಾತುಮಾತಿಗೆ ದುಃಖ, ಎಂತಹ ಕಷ್ಟದ ಪರಿಸ್ಥಿತಿ ಬಂದರೂ ಯಾವ ಮನುಷ್ಯನ ಬಣ್ಣ ಬದಲಾಗುವುದಿಲ್ಲವೊ, ಆ ವ್ಯಕ್ತಿಗೆ ಸಮಾಜದಲ್ಲಿ ಬೆಲೆ ಜಾಸ್ತಿ ಇರುತ್ತೆ.

  • ಹಾಲು ಉಪಯೋಗಕ್ಕೆ ಬರುವ ವಸ್ತುವೇ, ಆದರೆ ಅದರ ಬಳಕೆ ಒಂದು ದಿನ ಮಾತ್ರ. ಆಮೇಲೆ ಅದು ಕೆಡುತ್ತೆ.
  • ಹಾಲಲ್ಲಿ ಒಂದು ಹನಿ ಮಜ್ಜಿಗೆ ಹಾಕಿದರೆ ಅದು ಮೊಸರಾಗುತ್ತೆ, ಆದರೆ ಎರಡೇ ದಿನ ಚೆನ್ನಾಗಿರುತ್ತೆ.
  • ಮೊಸರನ್ನ ಸತಾಯಿಸಿದರೆ ಬೆಣ್ಣೆ ಬರುತ್ತೆ, ಆದರೆ ಅದು ಸಹ ಮೂರು ದಿನ ಚೆನ್ನಾಗಿರುತ್ತೆ.
  • ಬೆಣ್ಣೆಯನ್ನ ಕಾಯಿಸಿದಾಗ ತುಪ್ಪ ಬರುತ್ತೆ, ಆ ತುಪ್ಪ ಯಾವತ್ತೂ ಕೆಡುವುದಿಲ್ಲ.

  ಒಂದು ದಿನದಲ್ಲಿ ಹಾಳಾಗೊ ಹಾಲಲ್ಲಿ ಯಾವತ್ತೂ ಕೆಡದಿರೊ ತುಪ್ಪ ಅಡಗಿರುತ್ತೆ. ಅದೇ ರೀತಿ ನಿಮ್ಮ ಮನಸ್ಸಿನಲ್ಲಿ ಕೂಡ ಲೆಕ್ಕವಿಲ್ಲದಷ್ಟು ಶಕ್ತಿ, ಸಾಮರ್ಥ್ಯ ಅಡಗಿರುತ್ತೆ. ಅದಕ್ಕೆ ಒಳ್ಳೆಯ ಆಲೋಚನೆಗಳನ್ನ ತುಂಬಿ ನಿಮಗೆ ನೀವೇ ಚಿಂತನೆ ಮಾಡಿ. ಯಾವುದೇ ಸಮಸ್ಯೆ, ಗುರಿ ಬಂದರೂ ಇದೇ ರೀತಿ ವಿಶ್ಲೇಷಣೆ ಮಾಡಿ. ಆಗ ನೀವು ಜೀವನದಲ್ಲಿ ಯಾವತ್ತೂ ಸೋಲುವುದಿಲ್ಲ. ಧೈರ್ಯವಾಗಿ, ಸಮರ್ಥವಾಗಿ ಮುನ್ನುಗ್ಗುತ್ತೀರಿ...ಗೆಲವುವನ್ನ ಪಡೆಯುತ್ತೀರಿ!

(ವಾಟ್ಸಾಪ್ ಸಂಗ್ರಹಿತ)