ನಮಗೊಬ್ಬ ಅಳಿಯನುಬೇಕು

ನಮಗೊಬ್ಬ ಅಳಿಯನುಬೇಕು

ಬರಹ

ನಾವು ಬಡವರು
ನಮಗೊಬ್ಬ ಅಳಿಯನುಬೇಕು
ಅಳಿಯನು ಬಡವನಾಗಿರಬೇಕು

ಅಪ್ಪ:
S/W Engineer ಆಗಿರಬೇಕು
Foreign ಗೆ ಹೋಗಿ ಬರುತ್ತಿರಬೇಕು
30x40 ರ ಮನೆ ಎರಡಿರಬೇಕು
ಊರಲಿ ತೋಟ ಗದ್ದೆಯಿರಬೇಕು
ಅಕೌಂಟಲಿ 20 ಲಕ್ಷ ದುಡ್ಡಿರಬೇಕು
ದುಡ್ಡು ಡಾಲರದಾಗಿರಬೇಕು

ನಮಗೊಬ್ಬ ಅಳಿಯನುಬೇಕು ಅಳಿಯನು ಬಡವನಾಗಿರಬೇಕು...

ಅಮ್ಮ:
TV Fridge ಮನೆತುಂಬಿರಬೇಕು
Grinder woven ಅಡುಗೆಮನೆ ಸೇರಿರಬೇಕು
ದುಬಾರಿ Furniture ಗೋಡೆಸುತ್ತಿರಬೇಕು
ದುಬಾರಿ curtain ಕಿಡಕಿಯೆರಿರಬೇಕು
ರತ್ನಗಂಬಳಿ ನೆಲಸಾರಿಸಿರಬೇಕು
ರತ್ನದುಂಗುರ 10 ಬೆರಳೆರಿರಬೇಕು

ನಮಗೊಬ್ಬ ಅಳಿಯನುಬೇಕು ಅಳಿಯನು ಬಡವನಾಗಿರಬೇಕು...

ಮಗಳು:
ಅತ್ತೆಯ ಆಪತ್ತು ಇರಬಾರದು
ನಾದಿನಿಯರ ವಿಪತ್ತು ಬರಬಾರದು
ಕೈಗೆರಡು ಕೆಲಸದ ಆಳಿರಬೇಕು
ಆಳಿದ್ದರು ಹೆಸರಿಗೆ Washing machine ಇರಬೇಕು
ಕೆಂಪು Santro ಕಾರಿರಬೇಕು
ಕಾರಿದ್ದು ಬೈಕು ಹಲವಿರಬೇಕು
ಗಂಡನು ಸೆಲೂಟು ಹೊಡೆಯಲೇಬೇಕು
ನನ್ನ ಮಾತು ಯಾವಾಗಲು ಕೇಳಲೇಬೇಕು
ತಿಂಗಳಿಗೆ ಎರಡು ಲಕ್ಷ ಎಣಿಸಲೇಬೇಕು
ಎಣಿಸಿ ನನ್ನ ಕೈಗೆಕೊಟ್ಟು ನಡೆಯುತ್ತಿರಬೇಕು

ನನಗೊಬ್ಬ ಗಂಡನುಬೇಕು ಗಂಡನು ಬಡವನಾಗಿರಬೇಕು...