ನಮಸ್ಕಾರ

ನಮಸ್ಕಾರ

ಬರಹ

ಸಂಪದದ ಮಿತ್ರರಿಗೆ ನಮಸ್ಕಾರ.
ನಾನೊಬ್ಬ Mac OS X ಬಳಕೆದಾರ.. ಹಾಗಾಗಿ Macನಲ್ಲಿ ಯೂನಿಕೋಡ್ ಫಾಂಟ್ ಮತ್ತು ಕೀಬೋಡ್೯ ಲೇಔಟ್ ಒದಗಿಸಿದ ಶ್ರೀ ನಿಕೊಲಸ್ ಶಾಂಕ್ಸ್ ಮತ್ತು ಶ್ರೀ ಹರಿಪ್ರಸಾದ್ ನಾಡಿಗರಿಗೆ ಧನ್ಯವಾದಗಳು.

ನಾನು ಹಿಂದೊಮ್ಮೆ Mac ಕನ್ನಡ ಫಾಂಟ್ ಗೋಸ್ಕರ Googleನ ಪಾತಾಳ ಗರಡಿಯಿಂದ ಅಂತಜಾ೯ಲವನ್ನು ಜಾಲಾಡಿ ನಿರಾಶನಾಗಿದ್ದೆ.ಆದರೆ Wikipediaದಲ್ಲಿ ಸಿಕ್ಕ Mac ಯೂನಿಕೋಡ್ ಫಾಂಟ್ ಮತ್ತು ಕೀಬೋಡ್೯ ಲೇಔಟ್ ಲಿಂಕಿನಿಂದಾಗಿ ಬಹಳಷ್ಟು ಕನ್ನಡ ತಾಣಗಳನ್ನು ಓದಲು ಸಾಧ್ಯ ಆಗ್ತ ಇದೆ.ಕಳೆದ ಎರಡು, ಮೂರು ತಿಂಗಳುಗಳಿಂದ 'ಸಂಪದ'ದ ಓದುಗನಾಗಿ ಇದರ ಅನನ್ಯತೆಗೆ ಮಾರು ಹೋಗಿದ್ದೇನೆ.ಬ್ಲಾಗ್, ಲೇಖನಗಳು, ಸಾಹಿತಿಗಳ ಸಂದಶ೯ನ ಎಲ್ಲವೂ ಅಧ್ಬುತವಾಗಿವೆ..

ಬರಹದ ಹೊರತಾಗಿ ಈ ಬಗೆಯ ಕೀಬೋಡ್೯ ಲೇಔಟ್ ಬಳಸಿ ಅಭ್ಯಾಸವಿಲ್ಲದೆ ತಿಣುಕುತ್ತ, ಬೆವರುತ್ತ ಇಷ್ಟು ಟೈಪಿಸಿ ಮುಗಿಸಿದ್ದೀನಿ ! ತಪ್ಪಿದ್ದರೆ ಕ್ಷಮಿಸಿ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet