ನಮೋ ಸೂರ್ಯ ದೇವ

ನಮೋ ಸೂರ್ಯ ದೇವ

ಕವನ

ಮುಗಿಲ ಬಾನೇರಿ ಬರುವ

ಬೆಳಕಿನೊಡೆಯನೆ ನಿನಗೆ ನಮೋ ಎನ್ನುವೆ

ಮುಗಿಲುಭುವಿಗೆ ಬೆಳಕು ನೀಡೊ

ಬಾನದೊರೆಯೆ ನಿನಗೆ ನಮೋ ಎನ್ನುವೆ.   ಪ 

 

ಇರುಳೆಲ್ಲ ಚಂದ್ರತಾರೆಗೆ ಬೆಳಕು 

ಹಗಲಲಿ ಭುವಿಗೆ ಚೇತನವ

ಹಸಿರಿಗೆ ಉಸಿರು ತುಂಬುವ

ಜೀವಕೆ ಜೀವ ಕೊಡುವವ

ಸೂರ್ಯದೇವನೆ ನಿನಗೆ ನಮೋ ಎನ್ನುವೆ

 

ದಿನವೆಲ್ಲ ಜಗದ ಜೀವಕಾಗಿ ಬರುವ

ಕಣಕಣದ ಶಕ್ತಿಯ ಶಕ್ತಿ ಭಾನುವೆ 

ಜೀವಿಜೀವದ ಜೀವಾಳ ರವಿಯೆ

ಮೊದಲು ನಮನದ ಆದಿತ್ಯನೆ ಹೊ

ಸೂರ್ಯದೇವನೆ ನಿನಗೆ ನಮೋ ಎನ್ನುವೆ 

 

ನೀನೆ ದಿನಕರ ಲೋಕ ತಿಲಕ

ನೀನೆ ದಿನಮಣಿ ಜಗದ ಬೆಳಕ

ನೀನೆ ಆದಿತ್ಯ ಸರ್ವಶಕ್ತಿ ಪ್ರದಾಯಕ

ನೀನೆ ಭಾನು ವಾರದ ಮೊದಲಿಗ

ಸೂರ್ಯದೇವನೆ ನಿನಗೆ ನಮೋ ಎನ್ನುವೆ

 

-ಬಂದ್ರಳ್ಳಿ ಚಂದ್ರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್