ನಮ್ಮದೂ ಒಂದು ಕಾಲ ಇತ್ತು...
ಐದನೆಯ ಕ್ಲಾಸ್ ತನಕ
ಪಾಟಿ ಪೆನ್ಸಿಲ್( ಕಡ್ಡಿ / ಬಳಪ) ನಿಂದಲೇ ಅಭ್ಯಾಸ,
ನಾಲಿಗೆಯಿಂದ ಕಡ್ಡಿ ಚೀಪುವುದು, ಇದು common ಆಗಿತ್ತು ಅದಕ್ಕೆ ಏನೋ, ನಮಗ್ಯಾರಿಗೂ ಕ್ಯಾಲ್ಸಿಯಂ
ಗುಳಿಗೆ ಬೇಕಾಗಲಿಲ್ಲ, ನಾವು ಎoಜಲು ಕಡ್ಡಿಯಿಂದಾ ಬರೆದರೂ ,ಸರಸ್ವತಿ ದೇವಿಯ ಕೃಪೆ ಇತ್ತು ನಮ್ಮ ಮೇಲೆ,
ಅವಳು ಎಂದೂ ನಾರಾಜ ಆಗಲಿಲ್ಲ ನಮ್ಮ ಮೇಲೆ..
ಪುಸ್ತಕಗಳಲ್ಲಿ ,page ಗಳ ನಡುವೆ,
ನವಿಲಿನ ಪುಚ್ಚ,(ಗರಿ),
ಕೆಲವು ಗಿಡಗಳ ಎಲೆ ಮುಚ್ಚಿ
ಇಡುವ ಚಟ ಇತ್ತು...
ಇದರಿಂದ ಸರಸ್ವತಿ ದೇವಿಯ ಕೃಪೆ
ಹೆಚ್ಚಾಗುವದೆಂದು ಹುಚ್ಚು ಭಾವನೆ...
ಹಳೆಯ ಪ್ಯಾಂಟಿನ
ಬ್ಯಾಗ್ ನಮ್ಮದು,
ಅಥವಾ ಅಕ್ಕನ ಹರಿದ
ದಾವಣಿಯಿಂದ ತಯಾರಾದ
ಶಾಲಾ ಬ್ಯಾಗ್ ನಮ್ಮದು.
ಎಲ್ಲ ಪುಸ್ತಕ ಮತ್ತು
ನೋಟ್ ಬುಕ್ ಗೆ ಕವರ್
ಹಾಕುವದೇ ಒಂದು ಉತ್ಸವ ನಮಗೆ.
ಹಳೆಯ ಕ್ಯಾಲೆಂಡರಿನ
ಹಾಳೆಗಳೇ ಕವರ್ ಗೆ ಸಿಗುವ ಪೇಪರುಗಳು.....
ತಂದೆ ತಾಯಿಗೆ
ಶಿಕ್ಷಣದ ಕುರಿತಂತೆ ಹೆಚ್ಚಿನ ಚಿಂತೆ ಇರಲಿಲ್ಲ.
ಯಾರೂ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್
ಆಗುವ ಕನಸೂ ಕಂಡಿರಲಿಲ್ಲ, ವರ್ಷಗಟ್ಟಲೆ , ಯಾವ ಹೆತ್ತವರೂ ಶಾಲೆಯ ದಾರಿಗೂ ಹೋಗಿರಲಿಲ್ಲ.
ಸೈಕಲ್ ಸವಾರಿ, ಡಬ್ಬಲ್ ರೈಡ್,
ಒಮ್ಮೊಮ್ಮೆ ತ್ರಿಬಲ್ ರೈಡ್ ಕೂಡ
ಮಾಡುತ್ತಿದ್ದೆವು.
ಎರಡೂ ಕೈ ಬಿಟ್ಟು ನಡೆಸಿ,
ಹೀರೋ ಅನ್ನಿಸಿ ಕೊಳ್ಳುವ
ಛಲ,....
ಅದೆಷ್ಟು ಸಲ ಮಾಸ್ಟರ್ ಕೈ ಏಟು
ತಿಂದೆವೋ ನೆನಪಿಲ್ಲ,
ಆದರೆ ,ಒಂದು ಸಲವೂ ಇದರ
ಸುಳಿವು ಹೆತ್ತವರಿಗೆ ಗೊತ್ತಾಗದ ಹಾಗೆ ಕಾದುಕೊಂಡೆವು.
ನಾವು ಎಂದೂ ಹೆತ್ತವರಿಗೆ
I love you mom,
I love you dad..
ಅಂತ ಅನ್ನಲೇ ಇಲ್ಲ,...
(ಈಗ ಹೇಳುವಾ ಅನಿಸಿದರೂ ಕೇಳಲು ತಂದೆ ತಾಯಿ ಯಾರೂ ಉಳಿದಿಲ್ಲ... )
ತಂದೆ ತಾಯಿಯರ ಮೇಲಿದ್ದ ನಮ್ಮ ಪ್ರೀತಿಯನ್ನಾ ನಾವೆಂದೂ ವ್ಯಕ್ತ ಪಡಿಸಲೇ ಇಲ್ಲ.
(ಆಗ ಅದರ ಅರಿವೂ ನಮಗಿರಲಿಲ್ಲ..)
ಇಂದು ನಾವು ಬಹಳ ಮುಂದುವರಿದಂತೆ ನಟನೆ ಮಾಡುತ್ತೇವೆ, ಯಾರಿಗೆ ಏನು ಬೇಕೋ
ಅದನ್ನು ಗಳಿಸಿದ್ದೇವೆ, ಆದರೂ ಏನೋ.... ಏನೋ ಕೊರತೆ ಮನವನ್ನು ಕೊರೆಯುತಿದೆ...
ನಾವು ಈ ಜೀವನದ ಓಟದಲ್ಲಿ
ಎಲ್ಲೋ ಕಳೆದು ಹೋಗಿದ್ದೇವೆ ಅನಿಸುತ್ತಿದೆ.
ಆದರೆ ಒಂದು ಮಾತು ಮಾತ್ರ ನಿಜಾ,...
ನಾವು ಬೆಳೆದಿದ್ದು,
ವಾಸ್ತವಿಕ ದುನಿಯಾ( ಜಗತ್ತಿನಲ್ಲಿ)
ಬಟ್ಟೆ ಗಳ ಇಸ್ತ್ರಿ ಬಗ್ಗೆ, ಕಾಲಿನ ಶೂ ಅಥವಾ ಚಪ್ಪಲಿ ಬಗ್ಗೆಯಾಗಲೀ
ಒಣ ಪ್ರತಿಷ್ಠೆ ತೋರಿಸುವುದು ನಮಗೆ (ಇಂದಿನವರಂತೆ)
ಎಂದೂ ಬರಲೇ ಇಲ್ಲ..
ಈ ವಿಷಯದಲ್ಲಿ ನಾವು ಮೂರ್ಖರಾಗಿಯೇ ಉಳಿದೆವು.
ನಮ್ಮ ನಸೀಬ ಕಬೂಲ ಮಾಡಿ(ಒಪ್ಪಿಕೊಂಡು)
ಇವಿತ್ತಿಗೂ ನಾವು ಕನಸು ಕಾಣುತ್ತೇವೆ.
ಬಹುಶಃ ಈ ಕನಸುಗಳೇ
ನಮಗೆ ಜೀವಿಸುವ ಸ್ಪೂರ್ತಿ.
ಈ ಆಸೆಯ ಕನಸುಗಳು ಇಲ್ಲದಿದ್ದರೆ,
ಇದುವರೆಗೆ ನಾವು ಹೇಗೆ
ಜೀವಿಸುತ್ತಿದ್ದೆವು?
ಇದರ ಕಲ್ಪನೆ
ಮಾಡುವದೂ ಕಷ್ಟ.
ಮುಂದಿನ ಪೀಳಿಗೆಗೆ ಈ ವಿಷಯ ತಿಳಿ ಹೇಳುವದು
ಅಸಾಧ್ಯದ ಮಾತು..
ನಾವು ಒಳ್ಳೆಯವರೋ,
ಅಥವಾ ಕೆಟ್ಟವರೋ ಗೊತ್ತಿಲ್ಲ....
ಇಷ್ಟಂತೂ ನಿಜ...
ನಾವೂ ಬದುಕಿ ಜೀವಿಸಿದೆವು, ಹೊಸ ಪೀಳಿಗೆಗೆ ಜನ್ಮ ಕೊಟ್ಟು ಬೆಳೆಸಿದೆವು...
ಹೀಗೆ
*ನಮ್ಮದೂ ಒಂದು ಕಾಲ ಇತ್ತು..*
(ಆಧಾರ) ಚಿತ್ರ ಕೃಪೆ - ಇಂಟರ್ನೆಟ್ ತಾಣ