ನಮ್ಮನ್ನು ನಾವೇ ನಿರ್ಲಕ್ಷಿಸಿರುವ ಬದುಕು ಬೇಕೇ.?
ವಿಶ್ವವೆಲ್ಲಾ ನಮ್ಮ ಕಡೆ ನೋಡುತ್ತಿದ್ದರೆ, ನಾವು ಅವರ ಕಡೆ ನೋಡುತ್ತಿದ್ದೇವೆ.!
ಬೆಳಗ್ಗೆ ಎದ್ದು ಸ್ನಾನ ಮಾಡಿ, ತುಳಸಿ ಕಟ್ಟೆಗೆ ಪೂಜೆ ಮಾಡಿ ನನ್ನ ಈ ದಿನ ಶುಭವಾಗಿರಲೆಂದು ಬೇಡುತ್ತಾದೈನಂದಿನ ಕೆಲಸ ಮುಂದುವರಿಸಬೇಕು. ಇದನ್ನು ಓದುತ್ತಿರುವ ಈಗಿನ ಯುವ ಪೀಳಿಗೆ ಇದ್ಯಾವುದೋ70 ಅಥವಾ 80ರ ದಶಕದ ಸಿನಿಮಾದ ಕಥೆ ಇರಬೇಕು ಎಂದುಕೊಳ್ಳುತ್ತಾರೆ. ಏಕೆಂದರೆ ಈಗಿನವರುಹಲ್ಲುಜ್ಜದೇ ಚರಂಡಿಯ ಹಾಗೆ ಗಬ್ಬುನಾತದ ಬಾಯಲ್ಲಿ ಬೆಡ್ ಕಾಪಿ ಕುಡಿಯುವವರಲ್ಲವೇ. ಋಗ್ವೇದ,ಯಜುರ್ವೇದ, ಸಾಮವೇದ ಮತ್ತು ಅಥರ್ವಣ ಇವು ಸಿನಿಮಾ ನಟರ ಹೆಸರುಗಳಲ್ಲ, ಭಾರತದ ಶ್ರೇಷ್ಟವೇದಗಳು. ಪರಿಪೂರ್ಣ ಜೀವನ ಪಾಠ ವೇದಗಳಲ್ಲಿ ಈ ಅಡಗಿದೆ. ಆದರೆ ವೇದಗಳ ಬಗ್ಗೆ ಕೇಳಿರುವವರೆಕಡಿಮೆ. ನಮ್ಮ ಸಂಸ್ಕೃತಿಯನ್ನು ವಿದೇಶಿಯರು ಮೆಚ್ಚುತ್ತಾರೆ ಹಾಗೂ ಅನುಸರಿಸುತ್ತಾರೆ. ಆದರೆ ನಾವುನಮ್ಮ ಸಂಸ್ಕೃತಿಯನ್ನೇ ನಿರ್ಲಕ್ಸ್ಯ ಮಾಡಿರುವುದು ಭಾರತದ ದೌರ್ಬಾಗ್ಯ. ಪಾಶ್ಚಿಮಾತ್ಯ ಸಂಸ್ಕೃತಿಮತ್ತು ಪದ್ದತಿಗೆ ಮಾರುಹೋಗಿ ನಮ್ಮ ವಿಚಾರಧಾರೆಯನ್ನೇ ಮರೆತುಹೋಗಿದ್ದೇವೆ.
ಒಂದು ದೇಶ ವಿಜೃಂಬಣೆಯಿಂದ ನಳನಳಿಸಬೇಕೆಂದರೆ ಬರಿ ರಾಜಕೀಯ, ಟೆಕ್ನಾಲಜಿ ಇದ್ದರೆ ಸಾಲದು ಸಾಂಸ್ಕೃತಿಕ ವಿಷಯಗಳು ಮುಖ್ಯ ಪಾತ್ರವಹಿಸುತ್ತವೆ.ನಮ್ಮ ಭಾರತದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಇತಿಹಾಸವಂತೂ ಬಂಗಾರದ ಪುಟಗಳು. ವಿದೇಶಿಯರು ನಮ್ಮ ದೇಶಕ್ಕೆ ಕಾಲಿಡಬೇಕೆಂದರೂ ಕೈಮುಗಿದುಬರಬೇಕು. ಅಂತಹ ಪುಣ್ಯ ಭೂಮಿ ನಮ್ಮ ಭಾರತ. ಆದರೆ ಈಗಿನ ಪೀಳಿಗೆ ಭಾರತವನ್ನು ತಪ್ಪು ದಾರಿಗೆ ಕೊಂಡೊಯ್ಯತ್ತಿದ್ದಾರೆ. ಈಗಿನ ಮಟ್ಟಿಗೆ ಇದು ತಪ್ಪು ಎಂದುತಿಳಿಯುವುದಿಲ್ಲ ಮುಂದಿನ ದಿನಗಳಲ್ಲಿ ತುಂಬಾ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಆಗಾದರೆ ಈಗಿನ ಪೀಳಿಗೆಯ ಈ ನಿರ್ಲಕ್ಸ್ಯಕ್ಕೆ ಹಾಗೂ ಅಸಡ್ಡೆಗೆ ಕಾರಣಯಾರು? ಶಾಲೆಗಳಾ.? ಪೋಷಕರಾ.? ಅಥವಾ ಸರ್ಕಾರಗಳಾ.? ಮುಖ್ಯವಾಗಿ ಈಗಿನ ಶಾಲೆಗಳು ಉತ್ತಮ ವ್ಯಕ್ತಿಯನ್ನು ರೂಪಿಸುವ ಕೆಲಸ ಮಾಡುತ್ತಿಲ್ಲ.ಮಾಡುತ್ತಿದ್ದರೂ ಬೆರಳೆಣಿಕೆಯಷ್ಟು ಮಾತ್ರ. ಪುಸ್ತಕದಲ್ಲಿರುವುದನ್ನು ಉತ್ತರ ಪತ್ರಿಕೆಗೆ ಇಳಿಸುವುದನ್ನು ಮಾತ್ರ ಈಗಿನ ಶಾಲೆಗಳು ಹೇಳಿಕೊಡುತ್ತಿವೆ. ಪಾಠದಸಾರಾಂಶವನ್ನು ಮಕ್ಕಳ ಮನಸ್ಸಿಗೆ ಇಳಿಸುವ ಶಾಲೆಗಳು ತೀರಾ ಕಡಿಮೆ. ರಾಜಕಾರಣಿಗಳು, ಉದ್ಯಮಿಗಳು ತಮ್ಮ ಆದಾಯ ತೆರಿಗೆ ವಿನಾಯಿತಿ ಮಾಡುವಸಲುವಾಗಿ ಬೀದಿ ಬೀದಿಗಳಲ್ಲಿ ನಾಯಿ ಕೊಡೆಗಳಂತೆ ಶಾಲೆಗಳನ್ನು ಕಟ್ಟಿದಾರೆ. ಇಂತಹ ಶಾಲೆಗಳು ಆದಾಯಕ್ಕಾಗಿ ಮಾತ್ರ. ರಾಷ್ಟ್ರ ನಿರ್ಮಾಣಕ್ಕಾಗಿ ಅಲ್ಲ. ಇನ್ನೂಪೋಷಕರು ಸಹ ನಮ್ಮ ಮಗ / ಮಗಳು ಸಿಗರೇಟ್ ಸೇದಲಿ, ಸಾರಾಯಿ ಕುಡಿಯಲಿ, ಹುಡುಗ / ಹುಡುಗಿಯರ ಜೊತೆ ಸುತ್ತಾಡಲಿ, ಏನಾದರೂ ಮಾಡಲಿ ಮಾರ್ಕ್ಸ್ಕಾರ್ಡ್ನಲ್ಲಿ ಹೆಚ್ಚು ಮಾರ್ಕ್ಸ್ ಬಂದರೆ ಸಾಕು ಎನ್ನುವವರು. ಸರ್ಕಾರಗಳು ತಮ್ಮ ಪಕ್ಷದ ನಾಯಕರ ಹುಟ್ಟುಹಬ್ಬಗಳನ್ನು ವಿಜೃಂಬಣೆಯಿಂದ ಆಚರಿಸುತ್ತಾರೆ. ಆದರೆದೇಶಭಕ್ತರ, ಸ್ವಾತಂತ್ರ ಹೋರಾಟಗಾರರ ಲೆಕ್ಕಕ್ಕೆ ಇಲ್ಲದಂತಾಗಿದ್ದಾರೆ. ಮಾಧ್ಯಮಗಳು ಅಷ್ಟೇ ಸಿನಿ ನಟ-ನಟಿಯರ ಹುಟ್ಟುಹಬ್ಬಗಳನ್ನು ಪ್ರಸಾರ ಮಾಡುವುದಕ್ಕೆಮಾತ್ರ ಸೀಮಿತವಾಗಿವೆ. ಇನ್ನೆಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ. ಒಬ್ಬ ಹುಡುಗ ತನ್ನ ಶಾಲಾ ವರ್ಷಗಳಲ್ಲಿ ಅಂದರೆ ೧ರಿಂದ ೧೦ನೇ ತರಗತಿಯವರೆಗೆ ಯಾವವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೋ ಬಹುತೇಕ ಅದೇ ವ್ಯಕ್ತಿತ್ವ ಅವನ ಜೀವನ ಪೂರ್ತಿ ಮುಂದುವರಿಯುತ್ತದೆ. ಅದಕ್ಕೆ ಕಾರಣ ನಾನೇ. ವಿಶ್ವ ಹಿಂದೂ ಪರಿಷದ್ಆಶ್ರಯದಲ್ಲಿ ನಡೆಯುತ್ತಿರುವ ನಮ್ಮ ಶಾಲೆ ಬಹುತೇಕ ಮಕ್ಕಳನ್ನು ಒಳ್ಳೆಯ ಪ್ರಜೆಗಳನ್ನಾಗಿ ನಿರ್ಮಾಣ ಮಾಡಿದೆ. ಬಾರತದಲ್ಲಿ ಬಿಟ್ಟು ವಿದೇಶದಲ್ಲಿ ಓದುವವರು,ವಿದೇಶದಲ್ಲಿ ಮದುವೆ ಆಗುವವರು ಹೆಚ್ಚಾಗಿದ್ದಾರೆ. ವಿದೇಶಿಯರು ಭಾರತಕ್ಕೆ ಓದಲು ಬರುವುದು ಸಹ ಅಷ್ಟೇ ಸಹಜ. ಇತ್ತೀಚೆಗೆ ವಿದೇಶಿಯರು ಬಂದು ನಮ್ಮದೇಶದ ದೇವಸ್ತಾನಗಳಲ್ಲಿ ಮದುವೆಯಾಗುವುದು ಸಾಮಾನ್ಯ.
ಒಮ್ಮೆ ಸ್ವಾಮಿ ವಿವೇಕಾನಂದರು ಜಪಾನ್ ಪ್ರವಾಸದ ಸಂದರ್ಭ, ರಾತ್ರಿ ಮಲಗುವಾಗ ಅಲ್ಲಿನ ಒಬ್ಬ ಹುಡುಗನಿಗೆ ಒಂದು ಬಾಳೆಹಣ್ಣು ತರುವಂತೆ ಹೇಳುತ್ತಾರೆ. ಆಹುಡುಗ ಹೋದವನು ಬರುವುದೇ ಇಲ್ಲ. ವಿವೇಕಾನಂದರು ಕಾದು ಕಾದು ಮಲಗಲು ಹೋಗುತ್ತಾರೆ. ಆಗ ಹುಡುಗ ಬಾಳೆಹಣ್ಣಿನೊಂದಿಗೆ ಓಡೋಡಿ ಬರುತ್ತಾನೆ. ಏಕೆಇಷ್ಟು ಹೊತ್ತು ಎಂದು ಕೇಳಿದಾಗ ಆ ಹುಡುಗ "ನಮ್ಮೂರಿನ ಎಲ್ಲಾ ಅಂಗಡಿಗಳು ಮುಚ್ಚಿದ್ದರು ಪಕ್ಕದ ಊರಿಗೆ ಹೋಗಿ ಬರಲು ಇಷ್ಟೋತ್ತಾಯಿತು ಬಾಳೆಹಣ್ಣುತರಲಿಲ್ಲವೆಂದರೆ ನಿಮ್ಮ ದೇಶಕ್ಕೆ ಹೋಗಿ ಜಪಾನ್ ನಲ್ಲಿ ಒಂದು ಬಾಳೆಹಣ್ಣು ಗತಿಯಿಲ್ಲ ಎಂದು ಹೇಳಬಾರದಲ್ಲವೇ" ಎಂದು ಹೇಳುತ್ತಾನೆ. ಅದೇ ಜಪಾನ್ ನಲ್ಲಿಇನ್ನೊಬ್ಬ ಹುಡುಗನನ್ನು "ಬುದ್ಧ ನಿಮ್ಮ ಆರಾಧ್ಯ ದೈವ, ಅಕಸ್ಮಾತ್ ಭಾರತದಿಂದ ಬುದ್ಧ ನಿಮ್ಮ ಮೇಲೆ ಯುದ್ದಕ್ಕೆ ಬಂದರೆ ಏನು ಮಾಡುತ್ತೀರಾ" ಎಂದುವಿವೇಕಾನಂದರು ಕೇಳುತ್ತಾರೆ. ಆಗ ಆ ಹುಡುಗ "ಆಗೇನಾದರೂ ಆದರೆ ನಾವು ಯುದ್ದ ಮಾಡಿ ಬುದ್ಧನನ್ನು ಸೋಲಿಸುತ್ತೇವೆ" ಎಂದು ಹೇಳುತ್ತಾನೆ. ಈ ರೀತಿಯದೇಶಭಕ್ತಿ ಈಗಿನವರಿಗೆ ಇಲ್ಲವೇ ಇಲ್ಲ. ಬೆಳಗ್ಗೆ ಹಲ್ಲುಜ್ಜುವ ಪೇಸ್ಟ್, ಬ್ರಶ್, ತಿನ್ನುವ ಊಟ, ಹಾಕುವ ಬಟ್ಟೆ ಇತ್ಯಾದಿ ಎಲ್ಲವೂ ಪ್ಪಾಶ್ಚಿಮಾತ್ಯ ಸಂಸ್ಕೃತಿಯನ್ನುಬಿಂಬಿಸುವಂತಹವೇ. ಇಂತಹ ಸಮಯದಲ್ಲಿ ಅಬ್ದುಲ್ ಕಲಾಂ ರ 2020ರ ಕನಸು ನನಸಾಗೋದು ಕಷ್ಟಸಾಧ್ಯ.
ಒಮ್ಮೆ ಉಡುಪಿಯಲ್ಲಿ ಇಂಟರ್ ನ್ಯಾಷನಲ್ ವೇದಿಕ್ ಸೆಮಿನಾರ್ ಆಯೋಜಿಸಿದ್ದರು. ಪ್ರಪಂಚದ ವಿವಿದೆಡೆಯಿಂದ ಬಂದವರು ನಮ್ಮ ವೇದಗಳ ಬಗ್ಗೆಮಾತನಾಡುವ ಕಾರ್ಯಕ್ರಮ ಅದಾಗಿತ್ತು. ಒಬ್ಬ ವಿದೇಶಿ ಹೆಣ್ಣುಮಗಳು ವೇದಿಕೆಯ ಮೇಲೆ ತನ್ನ ಮಾತು ಶುರು ಮಾಡುತ್ತಾ “ಈ ಕಾರ್ಯಕ್ರಮಕ್ಕೆ ನನ್ನ ಗಂಡಬರಬೇಕಿತ್ತು. ಕೆಲ ದಿನಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡರು. ಸಾಯುವ ಮುನ್ನ ನಾನು ಭಾರತ ಬೇಟಿಯ ಅವಕಾಶ ವಂಚಿತನಾದೆ, ಆದರೆ ನೀನು ಈಅವಕಾಶವನ್ನು ಬಿಡಬೇಡ. ಸಾಯುವ ಮುನ್ನ ಭಾರತದ ನೆಲಕ್ಕೆ ಕಾಲಿಟ್ಟು ಪುಣ್ಯಾತ್ಮಳಾಗು ಎಂದರು, ಅದಕ್ಕೆ ಈಗ ಇಲ್ಲಿಗೆ ಬಂದಿದ್ದೇನೆ” ಎಂದು ಹೇಳುತ್ತಾರೆ. ಇದುಆಕೆಯ ಕುಟುಂಬದಲ್ಲಿ ಇದ್ದ ಭಾರತದ ಮೇಲಿನ ಗೌರವ. ಈಗಿನವರು ಪಿಯೂಸಿ ಮುಗಿಯುತ್ತಿದ್ದಂತೆ ವಿದೇಶಕ್ಕೆ ಹಾರುವ ಪ್ರಯತ್ನ ನಡೆಸುತ್ತಾರೆ.
ರಾಮಕೃಷ್ಣ ಪರಮಹಂಸರ ಪ್ರಕಾರ ಎಲ್ಲಾ ಧರ್ಮಗಳು ಶ್ರೇಷ್ಠ. ಇದನ್ನು ವಿಶ್ವದ ಪ್ರತಿಯೊಬ್ಬರೂ ಒಪ್ಪಲೇಬೇಕು. ಭಾರತೀಯರಿಗೆ ಬೇಕಾಗಿರುವುದು ಹಿಂದುತ್ವ,ಕ್ರಿಶ್ಚಿಯಾನಿಟಿ ಅಥವಾ ಮುಸಲ್ಮಾನಿಟಿ ಅಲ್ಲ. ಬೇಕಾಗಿರುವುದು “INDIANNESS” ಕನ್ನಡದಲ್ಲಿ ಹೇಳಬೇಕೆಂದರೆ “ಭಾರತೀಯತೆ”. ಭಾರತೀಯತೆ ಅಂದರೆಭಾರತದ ಗ್ರಂಥಗಳ, ವೇದಗಳ, ಮಹಾಪುರುಷರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವುದು. ಮಹಾಪುರುಷರ ಅರಿವೇ ಇಲ್ಲದ ಈಗಿನ ಜನತೆ ಅವರವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾರಾ.? ಮನೆಯಲ್ಲಿ ಹಾಲ್, ರೂಂ, ಅಡಿಗೆ ಮನೆ ಇರುತ್ತವೆಯೋ ಹಾಗೆಯೇ ಪ್ರಪಂಚ. ಈಪ್ರಪಂಚವೆಂಬ ಮನೆಯಲ್ಲಿ ದೇವರ ಮನೆಯೇ ಭಾರತ. ಭಾರತ ಮಾತೆಯ ಪಾದಗಳನ್ನು ಶುಭ್ರಗೊಳಿಸುವ ಹಿಂದೂ ಮಹಾಸಾಗರ. ಆಕೆಯ ತಲೆಗೆ ಅಡ್ಡಲಾಗಿಹಿಮಾಲಯ. ಭೂಮಿ ಮೇಲಿನ ಸ್ವರ್ಗ ಭಾರತ. ಈತರಹದ ಬೌಗೋಳಿಕ ಯಾವ ದೇಶಕ್ಕೂ ಇಲ್ಲ. ಕಾಳಿದಾಸನನ್ನು ಭಾರತದ ಶೇಕ್ಸ್ ಪಿಯರ್ ಎಂದುಕರೆಯುತ್ತಾರೆ. ಆದರೆ ಕಾಳಿದಾಸ 6ನೇ ಶತಮಾನದಲ್ಲಿದ್ದವನು. ಶೇಕ್ಸ್ ಪಿಯರ್ 15ನೇ ಶತಮಾನದಲ್ಲಿದ್ದವನು. ಆದ್ದರಿಂದ ಶೇಕ್ಸ್ ಪಿಯರ್, ಕಾಳಿದಾಸನ ತರಹಎನ್ನಬೇಕೆ ಹೊರತು ಕಾಳಿದಾಸ ಶೇಕ್ಸ್ ಪಿಯರ್ ಎನ್ನುವುದರಲ್ಲಿ ಅರ್ಥವಿಲ್ಲ.
ಭಾರತ ತನ್ನದೇ ಆದ ಕೆಲವು ವಿಶೇಷತೆಗಳನ್ನು ಹೊಂದಿದೆ. ವಿಶ್ವದ ಪ್ರಥಮ ವಿಶ್ವವಿದ್ಯಾಲಯ ಶುರುವಾಗಿದ್ದು ತಕ್ಷಿಲಾದಲ್ಲಿ(700B.C ಯಲ್ಲಿ). ಇಲ್ಲಿ 10500 ವಿದ್ಯಾರ್ಥಿಗಳು ಸುಮಾರು 60 ವಿಷಯಗಳನ್ನು ಅಭ್ಯಸಿಸಿದ್ದರು. ಓದಲು ವಿದೇಶಕ್ಕೆ ಹಾರುವ ಎಷ್ಟೋ ವಿದ್ಯಾರ್ಥಿಗಳಿಗೆ ಇದು ಗೊತ್ತೇ ಇಲ್ಲ. ಸಾಬೀರ್ ಬಾಟಿಯಎನ್ನುವ ಭಾರತೀಯ “HOTMAIL” ಅನ್ನು ಕಂಡುಹಿಡಿದು ಆನಂತರ ಅದನ್ನು ಮೈಕ್ರೋಸಾಫ್ಟ್ ಗೆ ಮಾರಲಾಯಿತು. ಭಾರತದಲ್ಲಿ ಮಾತ್ರ 325 ಆಡು ಭಾಷೆಹಾಗೂ 18 ಅಧಿಕೃತ ಭಾಷೆಗಳಿರುವುದು. ಜರಾಯುವೆಂಬ ಪೊರೆಯಿಂದ ಗರ್ಭವು ಮುಚ್ಚಲ್ಲಪಟ್ಟಿದೆ ಎಂದು ಶ್ರೀ ಕೃಷ್ಣ ಭಗವತ್ಘೀತೆಯಲ್ಲಿ ಭೋದಿಸಿರುವ ನೆಲಭಾರತ. ಎರಡು ಅಥವಾ ಮೂರು ವರ್ಷದ ಹಿಂದೆ ಭಾರತ ಮೂಲದ ಅಮೆರಿಕನ್ ಶ್ರೀಕಾಂತ್ ಶ್ರೀನಿವಾಸನ್ ಅಲ್ಲಿನ ಎರಡನೇ ಶ್ರೇಷ್ಠ ಅಧೀನ ನ್ಯಾಯಾಲಯದಲ್ಲಿನ್ಯಾಯಮೂರ್ತಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯುರ್ವೇದ, ಚದುರಂಗ, DECIMAL SYSTEM, ALGEBRA, TRIGONOMETRY, CALCULUS ಶುರುವಾಗಿದ್ದೇ ಭಾರತದಲ್ಲಿ. ರಮಾನುಜರೊಬ್ಬರೇ ಬರೋಬ್ಬರಿ 3542 ತಿಯರಮ್ ಗಳನ್ನು ಬರೆದಿದ್ದಾರೆ. ವಿಶ್ವದ ಮೊದಲ ಗ್ರಾನೈಟ್ದೇವಾಲಯ ಕಟ್ಟಿದ್ದು ಬೃಹದೇಶ್ವರದಲ್ಲಿ. 13ನೇ ಶತಮಾನದಲ್ಲಿ ಹಾವು-ಏಣಿ ಆಟವನ್ನು ಮೋಕ್ಷಪತ್ ಎಂಬ ಹೆಸರಿನಿಂದ ಆಡುತ್ತಿದ್ದರು. ಸಂಸ್ಕೃತ ಕಂಪ್ಯೂಟರ್ಸಾಫ್ಟ್ ವೇರ್ ಗೆ ಒಪ್ಪುವ ಏಕೈಕ ಭಾಷೆ. ಭಾರತ 90 ದೇಶಗಳಿಗೆ ಸಾಫ್ಟ್ ವೇರ್ ಅನ್ನು ರಫ್ತು ಮಾಡಲಾಗುತ್ತಿದೆ. ಶೇ.38ರಷ್ಟು ಅಮೆರಿಕಾದ ವೈಧ್ಯರುಭಾರತೀಯರು. ಶೇ.12ರಷ್ಟು ಅಮೆರಿಕಾದ ವಿಜ್ಞಾನಿಗಳು ಭಾರತೀಯರು. ಶೇ.36ರಷ್ಟು NASA ವಿಜ್ಞಾನಿಗಳು ಭಾರತೀಯರು. ಶೇ.34ರಷ್ಟು ಮೈಕ್ರೋಸಾಫ್ಟ್ಉದ್ಯೋಗಿಗಳು ಭಾರತೀಯರು. ಶೇ.28ರಷ್ಟು IBM ಉದ್ಯೋಗಿಗಳು ಭಾರತೀಯರು. ಶೇ.17ರಷ್ಟು INTEL ವಿಜ್ಞಾನಿಗಳು ಭಾರತೀಯರು. ಇದೆಲ್ಲವೂ ಭಾರತದಒಂದು ಮುಖ. ಇಲ್ಲದೆ ಓದಿ ಇನ್ನೊಂದು ಮುಖ. ಚೀನಾ-ಪಾಕಿಸ್ತಾನ-ಶ್ರೀಲಂಕಾ ಒಂದಾಗುತ್ತಿವೆ, ಹಣದುಬ್ಬರ ಭಯಾನಕ ಏರಿಕೆ ಕಾಣುತ್ತಿದೆ. ವಿದೇಶಿ ವಿನಿಮಯಕುಸೀಯುತ್ತಲೇ ಇದೆ. ಓಟಿಗೆ ಮುನ್ನ ಜನ ದೇಶದ ಬದಲು ಜಾತಿ,ನೋಟು ನೋಡುತ್ತಿದ್ದಾರೆ. ಶಿಕ್ಷಣದಲ್ಲಿ ದೇಶಭಕ್ತಿ ಬದಲು ಸ್ವಾರ್ಥ ಬೆಳೆಯುತ್ತಿದೆ. ಆಂಬುಲೆನ್ಸ್,ಪೊಲೀಸ್ ಗಿಂತ ಬೇಗ ಪಿಜ್ಜಾ ಮನೆಗೆ ಬರುತ್ತಿದೆ. ಶೈಕ್ಷಣಿಕ ಹಾಗು ರೈತರ ಸಾಲಕ್ಕೆ ಅಧಿಕ ಬಡ್ಡಿಯಾದರೆ, ಮರ್ಸಿಡೀಸ್ ಬೆನ್ಸ್ ಕಾರು ಕೊಳ್ಳಲು 0% ಬಡ್ಡಿ. ತಿನ್ನೋಅಕ್ಕಿ 50 ರೂ ಆದರೆ, ಸಿಮ್ ಕಾರ್ಡ್ ಫ್ರೀ. ಬಡವರು ಕ್ರಿಕೆಟ್ ಪಂದ್ಯದ ಟಿಕೆಟ್ ಕೊಳ್ಳಲು ಪರದಾಡಿದರೆ, ಶ್ರೀಮಂತರು ಕ್ರಿಕೆಟ್ ತಂಡವನ್ನೇ ಖರೀದಿಸುತ್ತಾರೆ.ಆದರೂ ಸರ್ಕಾರ ಭಾರತ ನಿರ್ಮಾಣವಾಗುತ್ತಿದೆ ಎಂದು ಜಾಹೀರಾತು ಕೊಡುವುದುಂಟು. ಇದೇನಾ ಭಾರತ ನಿರ್ಮಾಣ.? ಸಾಮಾನ್ಯ ಜನ ಬದುಕುವುದೇಕಷ್ಟವಾಗುತ್ತಿದೆ. ಇದಕ್ಕೆ ಕಾರಣ ಬಹುಶಃ ನಮ್ಮ ದೇಶದ ಮೇಲೆ ನಮ್ಮ ಜನತೆ ತೋರುವ ಅಸಡ್ಡೆಯೇ ಇರಬೇಕು. ಪ್ರತಿಯೊಂದು ದಿನಬಳಕೆ ವಸ್ತು ವಿದೇಶದ್ದೇಆಗಿರಬೇಕು. ನಮ್ಮ ಕಲೆಯನ್ನು ಇಂದು ನೋಡುವವರೇ ಇಲ್ಲ. ಉದಾಹರಣೆಗೆ “ಯಕ್ಷಗಾನ” ಇಂದು ಅಳಿವಿನ ಅಂಚಿನಲ್ಲಿದೆ. ನಮ್ಮವರೆಲ್ಲರೂ ವಿದೇಶಿ ವಾಧ್ಯಗಳಿಗೆಮಾರುಹೋಗಿದ್ದಾರೆ. ಸ್ವತಂತ್ರ ಬಂದಾಗ “ವಂದೇ ಮಾತರಂ” ಅನ್ನು ರಾಷ್ಟ್ರಗೀತೆ ಮಾಡಬೇಕೆಂಬುದು ಪ್ರತಿಯೊಬ್ಬರ ಒತ್ತಾಸೆಯಾಗಿತ್ತು. ಆದರೆ ವಂದೇಮಾತರಂ ವಿದೇಶಿ ವಾಧ್ಯಗಳಿಗೆ ಸರಿಹೊಂದುವುದಿಲ್ಲ ಎಂಬಾ ಒಂದೇ ಒಂದು ಕಾರಣಕ್ಕೆ “ಜನ ಗಣ ಮನ” ವನ್ನು ರಾಷ್ಟ್ರಗೀತೆಯನ್ನಾಗಿ ಮಾಡಲಾಯಿತು. ಇದುನಮ್ಮ ಸ್ವದೇಶಿ ಕಲೆಗೆ ನೆಹರೂ ಸರ್ಕಾರ ಕೊಟ್ಟಂತಹ ಅಗೌರವ. ಲಂಗ, ದಾವಣಿ, ಪಂಚೆ ಈಗಾಗಲೇ ಕಣ್ಮರೆಯಾಗಿವೆ. ಇನ್ನು 10-15 ವರ್ಷಗಳಲ್ಲಿ ಸೀರೆ ಉಡುವಹೆಂಗಸರು ಕಣ್ಣಿಗೆ ಕಾಣುವುದೇ ಇಲ್ಲ. ಪ್ರತಿಭಟನೆಯ ಸಂದರ್ಭಗಳಲ್ಲಿ ಸರ್ಕಾರಿ ವಾಹನಗಳಿಗೆ ಕಲ್ಲು ಎಸೆಯುತ್ತೇವೆ. ಸರ್ಕಾರಿ ಆಸ್ತಿ ನಮ್ಮದೇ ಎಂಬ ಪರಿಜ್ಞಾನವೂಇರುವುದಿಲ್ಲ. ನಮ್ಮ ಹಬ್ಬಗಳು ಈಗಾಗಲೇ ನೆಲಕಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಹೊಸವರ್ಷವನ್ನು ಜನವರಿ ಒಂದಕ್ಕೆ ಆಚರಿಸುತ್ತಿದ್ದಾರೆ. ಮಧ್ಯಪಾನ,ಧೂಮಪಾನ ಮಾಡಿ ಹೊಸವರ್ಷವನ್ನು ಸ್ವಾಗತಿಸುವುದು ನಮ್ಮ ಸಂಸ್ಕೃತಿಯೇ.? ನಿಜವಾದ ಪ್ರಾಕೃತಿಕ ಹೊಸವರ್ಷ ಉಗಾದಿ. ಒಂದು ಅಖಂಡ ರಾಷ್ಟ್ರಕ್ಕೆಸಾಂಸ್ಕೃತಿಕ ಕಲೆ ಇಲ್ಲವೆಂದರೆ ಆ ರಾಷ್ಟ್ರ ಮೆದುಳಿಲ್ಲದ ಮನುಷ್ಯನ ದೇಹದಂತೆ. ದೇಹವಿದ್ದರೂ ಕೆಲಸಕ್ಕೆ ಬರುವುದಿಲ್ಲ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರದಿನಾಚಾರಣೆಗಳಲ್ಲೂ ದೆಹಲಿಯಲ್ಲಿ ವಿದೇಶಿ ವಾದ್ಯಗಳು, ವಿದೇಶಿ ಕಲೆಗಳು ರಾರಾಜಿಸುವುದುಂಟು. ಆಗಂತ ವಿದೇಶಿ ಕಲೆಯನ್ನು ಕಲಿಯಬಾರದೆಂದೇನು ಇಲ್ಲ.ಆಸಕ್ತಿ ಇರಲಿ, ವ್ಯಾಮೋಹ ಬೇಡ. ನಮ್ಮ ಭಾರತ ಸಾಂಸ್ಕೃತಿಕ ನೆಲೆ ಯಾರಿಗೂ ಬೇಡವೇ.? ಸ್ವಾಮಿ ವಿವೇಕಾನಂದರ ಕನಸಿನ ಭಾರತ ನಿರ್ಮಾಣವಾಗುವುದುಬೇಡವೇ.? ಭಗತ್ ಸಿಂಗ್, ಚಂದ್ರಶೇಕರ್ ಆಜ಼ಾದ್, ನೇತಾಜಿ ಹಾಗು ಹಲವಾರು ದೇಶಭಕ್ತರ ಪ್ರಾಣತ್ಯಾಗಕ್ಕೆ ಬೆಲೆಯೇ ಇಲ್ಲವೇ.? ಇನ್ನಾದರೂ ನಮ್ಮ ತನವನ್ನಉಳಿಸಿ. ನಮ್ಮನ್ನು ನಾವೇ ನಿರ್ಲಕ್ಷಿಸುವುದು ಎಷ್ಟು ಸರಿ.? ನಾನು, ನನ್ನ ಕುಟುಂಬ ಎನ್ನುವುದರ ಜೊತೆಗೆ ನನ್ನ ದೇಶ ಎನ್ನುವುದನ್ನೂ ಕಲಿಯಿರಿ. ಉಜ್ವಲ ಭಾರತನಿರ್ಮಾಣಕ್ಕೆ ನಿಮ್ಮ ಸಹಾಯವೂ ಇರಲಿ. ಜಗತ್ತೆಲ್ಲಾ ನಮ್ಮ ಕಡೆ ತಿರುಗುತ್ತಿದೆ, ವಿಶ್ವಗುರುವಾಗಿ ನಳನಳಿಸೋಣ..
Comments
ಉ: ನಮ್ಮನ್ನು ನಾವೇ ನಿರ್ಲಕ್ಷಿಸಿರುವ ಬದುಕು ಬೇಕೇ.?
ನಮ್ಮತನವಿದು ಸುಂದರ! ನಮ್ಮತನ ಉಳಿಸಿಕೊಳ್ಳುವುದು ಇಂದಿನ ಅಗತ್ಯತೆ. ಉದಾತ್ತ ವಿಚಾರ ಎಲ್ಲಿಂದಲೇ ಬರಲಿ, ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವುದು ಪ್ರಗತಿಯ ಲಕ್ಷಣ. ರಾವಣತ್ವ ಕಳೆದರೆ ರಾವಣನೂ ರಾಮನೇ ಎಂಬ ಮಾತನ್ನು (ಶ್ರೀ ಸತ್ಯನಾರಾಯಣರು ಮಾಡಿದ ಅನಲೆಯ ಪಾತ್ರ ಪರಿಚಯ ಲೇಖನ ಮಾಲೆಯ ಕೊನೆಯ ಕಂತಿನಲ್ಲಿ) ನನಗೆ ಮೆಚ್ಚುಗೆಯಾಯಿತು.. ಒಳ್ಳೆಯ ವಿಷಯ ಹೇಳಿದರೆ ಕೇಳಲು ಅದನ್ನು ಯಾರು ಹೇಳಿದರು ಎಂದು ಹಿನ್ನೆಲೆ ನೋಡಬೇಕಿಲ್ಲ. ಹೇಳಿದವರು ರಾವಣನೋ, ರಾಮನೋ ಎಂದು ವಿಚಾರಿಸುವ ಅಗತ್ಯ ತೋರದು. ಧನ್ಯವಾದ, ರೂಪೇಶರೇ.