ನಮ್ಮಲ್ಲಿ ಎಷ್ಟು ಜನ ಓಟು ಹಾಕ್ತೀವಿ??

ನಮ್ಮಲ್ಲಿ ಎಷ್ಟು ಜನ ಓಟು ಹಾಕ್ತೀವಿ??

ಬರಹ

ರಾಜಕೀಯದ ಬಗ್ಗೆ ತುಂಬಾ ಅಂದ್ರೆ ತುಂಬಾನೇ ಹಗುರವಾಗಿ ಮಾತಾಡೊ ನಾವೆಲ್ಲಾ...ಎಷ್ಟರ ಮಟ್ಟಿಗೆ ನಮ್ಮ ಕರ್ತವ್ಯ ಪಾಲಿಸ್ತಾ ಇದ್ದಿವಿ??? ಚುನಾವಣೆ ಹತ್ತಿರ ಇರೋದ್ರಿಂದ ಬರೀತಾ ಇದ್ದಿನಿ..

ರಾಜಕೀಯದಲ್ಲಿ ಒಳ್ಳೆಯವರು ಇರೋದೆ ಇಲ್ಲ ಅನ್ನೋದನ್ನ ನಾನು ಒಪ್ಪೋದಿಲ್ಲ. ಮೊದಲ ಹಾಗೆ ತುಂಬಾ ಒಳ್ಳೆಯವರು ಇಲ್ಲದೇ ಇರಬಹುದು..ಆದರೆ ಇರೋರೊಳಗೆ ಸುಮಾರಾಗಿರೋರ್ಗೆ ಮತ ಹಾಕಿ ಗೆಲ್ಲ್ಸಿದ್ರೆ ತಾನೆ ಕೆಟ್ಟವ್ರ್ನನ್ನ ಸೋಲಿಸೋಕಾಗೊದು...???

ಆದ್ದರಿಂದ.. ನಾನು ಕೇಳಿಕೊಳ್ಳೋದು ಇಷ್ಟೆ... ಎಷ್ಟೆ ಕಷ್ಟ ಆಗ್ಲಿ.. ಅವತ್ತು ಒಂದು ದಿನ.. ನಮ್ಮ "ego" (ಕನ್ನಡ ಶಬ್ದ ಗೊತ್ತಿಲ್ಲ) ಸ್ವಲ್ಪ ಬದಿಗಿಟ್ಟು ಓಟು ಮಾಡೊ ಹಕ್ಕಿರೋ ಎಲ್ರೂ ಓಟು ಹಾಕೋಣ..ಇದರಿಂದ.. ತುಂಬಾ ಒಳ್ಳೆಯವರನ್ನ ಗೆಲ್ಸೊಕಾಗ್ದೆಇದ್ರೂ ಪರ್ವಾಗಿಲ್ಲ ಕೆಟ್ಟವ್ರನ್ನ ಸೋಲಿಸಬಹುದು. ನೆನಪಿರಲಿ.. ಸಾಮಾನ್ಯವಾಗಿ ವಿದ್ಯಾವಂತರು ಜಾಸ್ತಿಇ ರೋ ಜಾಗದಲ್ಲೇ ಓಟಿಂಗ್ ಕಡಿಮೆ ಆಗೋದು...

ಇನ್ನೊಂದು ವಿಷಯ... ನಾವ್ಯಾಕೆ ಓಟು ಹಾಕೋದಕ್ಕೆ ನಮ್ಮಲ್ಲಿ ಇರೋ ತಂತ್ರಜ್ನಾನ ಉಪಯೋಗಿಸ್ಬಾರ್ದು?? ನಮ್ಮ ಮನೆಗಳಿಂದಲೇ/ ಕೂತಲ್ಲಿಂದಲೇ... ಫೋನ್ ಮೂಲಕಾನೋ.. sms ಮೂಲಕಾನೊ ಅಥವಾ ಅಂತರ್ಜಾಲದ ಮೂಲಕ ಓಟು ಮಾಡೊ ವ್ಯವಸ್ಥೆ ಜಾರಿಗೆ ತರಬಾರದು..ಹಾ...ನಕಲಿ ಓಟುಗಳನ್ನ ೧೦೦% ತಡೆಯುವ ತಂತ್ರಜ್ನಾನ ಹೊಂದಿದ ನಂತರ. ಏನೇನೋ ಮಾಡೋ ನಾವು ಈ ತಂತ್ರಜ್ನಾನ ಕಂಡುಹಿಡಿಯೊಕಾಗಲ್ವ???
ನೀವೇನಂತೀರಾ????

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet