ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ?
ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ?
ವರ್ತುಲ ರಸ್ತೆಯಲ್ಲಿ, ಪ್ರತಿ ದಿನದ ದಿನಚರಿಯಲ್ಲಿ
ನಗರದ ಧಾವಂತತೆ ರಸ್ತೆಯಲ್ಲಿ ಎದ್ದು ಕಾಣುತ್ತಿತ್ತು.ಕಣ್ಣೆಣಿಕೆಯಷ್ಟು ದೂರವೂ ಗಾಡಿಗಳು ದ್ವಿಚಕ್ರ, ತ್ರಿಚಕ್ರ,ಚತುರ್ಚಕ್ರ ಮತ್ತು ಬಹು ಚಕ್ರ ವಾಹನಗಳದ್ದೇ ಸಂತೆ, ಅದೂ ಈ ವರ್ತುಲ ರಸ್ತೆಯಲ್ಲಂತೂ ಎತ್ತನೋಡಿದರತ್ತ ಅವುಗಳೇ. ಪ್ರತಿ ಸವಾರರಿಗೂ ಧಾವಂತತೆಯ ಅವರದ್ದೇ ಆದ ಲೋಕ,ತಲೆಬಿಸಿಯ ಸಂಸಾರ, ಕಾಯಿದೆ ಕಾನೂನು, ಮತ್ತು ಕಾರಣ. ಪ್ರಾಯಶಃ ಡ್ರೈವಿಂಗ್ ಕಲಿಯುವಾಗಲಷ್ಟೇ ನೋಡಿಕೊಂಡಿದ್ದ, ಕಲಿತುಕೊಂಡಿದ್ದ ರಹದಾರಿಯ ಸೂಚನೆ ನಿಯಮಗಳು ಅನಂತರ ೞಲಕಗಳಲ್ಲಷ್ಟೇ ಲಭ್ಯ. ಈಗಂತೂ "ಚಲನೆಯೇ ಜೀವನ ಇಲ್ಲದಿರೆ ಮರಣ" ಅಂದುಕೊಳ್ತಾರೆ ಅನ್ನಿಸುವಷ್ಟರ ಮಟ್ಟಿಗೆ ಇವರ ಚಲನೆ. ಯಾಕೆಂದರೆ ಈ ವಾಹನಗಳು ಚಲಿಸುತ್ತಲೇ ಇವೆಯಲ್ಲಾ, ಅದರಲ್ಲೂ ದ್ವಿಚಕ್ರ ವಾಹನಗಳಾದರೆ ಇದು ಇನ್ನೂ ಹೆಚ್ಚು. ನಾನು ಒಳ ರಸ್ತೆಯಿಂದ ವರ್ತುಲ ರಸ್ತೆಗೆ ಕಷ್ಟಪಟ್ಟು ರವಾನೆಯಾದೆ. ಕಷ್ಟ ಅಂತ ಯಾಕೆ ಹೇಳಿದೆನೆಂದರೆ ಎಡೆಬಿಡದೆ ಚಲಿಸುವ ವಾಹನಗಳ ಈ ಮಧ್ಯಕ್ಕೆ ಸಮತೋಲನ ಕಾಯ್ದುಕೊಂಡು ಸೇರುವುದಂದರೆ ಅದೇ ಒಂದು ಮಹಾ ಯುದ್ಧವನ್ನು ಜೈಸಿದಂತೆಯೇ.ಒಮ್ಮೆ ನುಗ್ಗಿದರೂ ನಮ್ಮ ಲೇನ್ ಕಾದುಕೊಳುವುದೂ ಮಹಾ ಕಷ್ಟ. ಒಮ್ಮೆಯಂತೂ ಜಾಲಹಳ್ಳಿ ಕ್ರಾಸಿನಿಂದ ಯಶ್ವಂತಪುರ ರೈಲ್ವೇ ನಿಲ್ದಾಣ ತಲುಪಲು ಬರೇ ಆರು ಕಿಮೀ ದಾರಿ ನಾನು ಒಂದೂವರೆ ಘಂಟೆ ಕಾಲ ಕ್ರಮಿಸಿದ್ದೆ.ಹೊಸ ಹಾಸ್ಯ ಕೇಳಿದ್ದೀರಾ ದುಬೈಯಿಂದ ಇಲ್ಲಿಗೆ ಬರಲು ಮೂರು ಘಂಟೆ ಆದರೆ ವಿಮಾನ ನಿಲ್ದಾಣದಿಂದ ಮನೆಗೆ ಬರಲು ಬರೇ ಅರ್ಧ ಘಂತೆ ಜಾಸ್ತಿ ಬೇಕು ಅಂತ. ಇವತ್ತೂ ಹಾಗೆಯೇ, ನಾನು ವರ್ತುಲ ರಸ್ತೆಯ ತೀರಾ ಎಡಗಡೆ ಇದ್ದರೂ ಮುಂದಿನ ವಾಹನಗಳು ನಿಂತರೆ,ನಾನೂ ನಿಲ್ಲಲೇ ಬೇಕಲ್ಲ! ಆದರೆ ಆಗ ನನ್ನ ಎಡಬಲಗಳ ಎಲ್ಲಾ ಕಡೆಯಿಂದಲೂ ರುಂ ಝುಂ ಅಂತ ಪುಂಖಾನು ಪುಂಖವಾಗಿ ರಭಸದಿಂದ ಅನಾಯಾಸವೆಂಬಂತೆ ಚಲಿಸುತ್ತಿರುತ್ತವೆ. ಕಣ್ಣೆದುರಿನಲ್ಲಿಯೇ ರಸ್ತೆಯಾಚೆಗಿನ ಜಾಗ ಅಂದರೆ ಕಾಲು ದಾರಿ (ೞುಟ್ ಪಾಥ್) ಯಲ್ಲೂ ಇದೂ ರಸ್ತೆಯೇ ಎಂಬಂತೆ ಈ ದ್ವಿಚಕ್ರವಾಹನಗಳನ್ನು ಚಲಿಸುತ್ತಿರುವುದು ನೋಡುವಾಗ ನನ್ನ ಕಿವಿಗಳೆರಡು ಬಿಸಿಯಾಗತೊಡಗುತ್ತವೆ.ನಾನು ಯಾವುದೋ ಲಾರಿಯ ಹಿಂಬದಿ ನಿಂತಿದ್ದೆ. ನನ್ನ ಬಲಗಡೆ ನನ್ನ ಹಾಗೇ ನಿಂತಿದ್ದ ಕೆಂಪುಹೊಂಡಾ, ಶರ್ಟು, ಹೆಲ್ಮೆಟ್(ಎಲ್ಲಾ ಕೆಂಪೇ) ವ್ಯಕ್ತಿಗೆ ಇದೆಲ್ಲ ತೋರಿಸಿ" ಅಲ್ಲ ರೀ ಇವರಿಗೆಲ್ಲಾ ಯಾಕೆ ಇಷ್ಟು ಧಾವಂತ? ಇವರೆಲ್ಲಾ ನಮ್ಮ ಹಾಗೆ ರಹದಾರೀ ನಿಯಮಗಳನ್ನು ಅನುಸರಿಸೋದಿಲ್ಲ ಯಾಕೆ? ಹೀಗಾದರೇನೇ ಅವಘಡಗಳು ಜಾಸ್ತಿಯಾಗುತ್ತವೆ ಅಲ್ಲವಾ..........?"ಎಂದ ನನ್ನ ಮಾತನ್ನು ನಿರ್ಲಿಪ್ತತೆಯಿಂದ ಕೇಳಿದ ಆ ವ್ಯಕ್ತಿ "ಸ್ವಲ್ಪ ಹಿಂದೆ ಸರಿಸುತ್ತೀರಾ ನಿಮ್ಮ ಗಾಡಿ!" ಎಂದ. ನಾನುಗಾಡಿ ಹಿಂತೆಗೆದೆ. ಆತ ತನ್ನ ಹೀರೋ ಹೊಂಡವನ್ನು ನನ್ನ ಎಡಗಡೆಗೆ ತಿರುಗಿಸಿ ಬರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ ಎಂದು ಓಡುತ್ತಿರುವ ಗಾಡಿಗಳ ಜತೆ ತಾನೂ ನೂರರಲ್ಲೊಂದಾಗಿ ಬಿಟ್ಟ. ನಾನು ಇಂಗು ತಿಂದ ಮಂಗನಂತಾಗಿ ಆ ಕಡೆಯೇ ನೋಡುತ್ತಿದ್ದುಬಿಟ್ಟೆ.
ಇದಿರಿನ ಲಾರಿ ನಿಧಾನವಾಗಿ ಚಲಿಸತೊಡಗಿತು. ನಾನೂ ಅದರ ಹಿಂದೆಯೇ ಅದರಂತೆಯೇ ಚಲಿಸತೊಡಗಿದೆ.ಮುಂದಿನ ನನ್ನ ನಿಲ್ಲುವಿಕೆ ಗುರುಗುಂಟೆ ಪಾಳ್ಯದ ಸಿಗ್ನಲ್. ಕಾಲು ದಾರಿಯನ್ನೇ ನೋಡದದವರಿಗೆ ಈ ಸಿಗ್ನಲ್ ಕಾಣುತ್ತದಾ?ಇವೆಲ್ಲ ರಹದಾರೀ ನಿಯಮಗಳು ಅದನ್ನು ಅನುಸರಿಸುವವರಿಗೆ ಮಾತ್ರ.ಇಲ್ಲಿಯೂ ಬರ್ರ್ರ್ರ್ರ್ರ್ ಅಂತ ಹೋಗುವವರು ಇನ್ನೂ ಹೋಗುತ್ತಲೇ ಇದ್ದರು. ನನ್ನ ಹಿಂದೆ ಬರುವವರಿಗೂ ಅದೇ ಧಾವಂತ.ಹಿಂದಿನಿಂದ ಹಾರ್ನ ಗಳ ಸುರಿಮಳೆ. ನೋಡಿದರೆ ಮತ್ತೆ ಅದೇ ಕೆಂಪು ಬೈಕಿನವ.ನನಗೆ ಒಂದೇ ಮುಂದೆ ಹೋಗಿ ಇಲ್ಲವಾದರೆ ದಾರಿ ಬಿಡಿ ಎಂಬ ಸಂಜ್~ಜೆ ಬೇರೆ. ನಾನು ಆತನಿಗೆ ಸಿಗ್ನಲ್ ಇನ್ನೂ ಕೆಂಪಿರುವುದನ್ನು ತೋರಿಸಿದರೆ, ಆತ ನಾನೆಲ್ಲೋ ಹಳ್ಳಿ ಗುಗ್ಗು ಎಂಬಂತೆ ತಾತ್ಸಾರ ಮಾಡಿ, ನನ್ನ ಪಕ್ಕದ ಮಣ್ಣು ದಿನ್ನೆಯನ್ನು ಕಷ್ಟ ಪಟ್ಟು ಹತ್ತಿ ನಾನು ನೋಡನೋಡುತ್ತಿರುವಂತೆಯೇ ಧೂಳೆಬ್ಬಿಸಿ ಹೋಗಿಯೇ ಬಿಟ್ಟ. ಮತ್ತು ಅವನ ಹಿಂದೆಯೇ ಧೂಳೆಬ್ಬಿಸುತ್ತಾ ಅಸಂಖ್ಯಾತ ದ್ವಿಚಕ್ರಿಗಳೂ. ಅಷ್ಟರಲ್ಲಿ ದೀಪ ಹಸಿರಾಯಿತು. ನಾನೂ ಹೊರಟೆ.
ಮಾತೆತ್ತಿದರೆ ಸರ್ಕಾರ ಏನೂ ಮಾಡಿಲ್ಲ, ಮುನ್ಸಿಪಾಲಿಟಿ, ಕಾರ್ಪೋರೇಶನ್ ಏನೂ ಮಾಡಿಲ್ಲಾ ಅನ್ನುವವರು,ನಾವು ಏನು ಮಾಡಿದ್ದೀವಿ ಅನ್ನೋದು ಕೇಳಿಕೊಳ್ಳಬೇಕಾದ ಪ್ರSನೆ.ಬಡಾವಣೆ ಅಭಿವ್Rಅದ್ಧಿಆಗಿಲ್ಲ ಅನ್ನೋ ನಾವು ಅದಕ್ಕೆ ಸರ್ಕಾರದತ್ತ ಬೊಟ್ಟೂ ಮಾಡುತ್ತೇವೆಯೇ ಹೊರತು ಮನೆ ತೆರಿಗೆ/ಬೆಟರ್ಮೆಂಟ್ ಚಾರ್ಜ್ ಸರಿಯಾಗಿ ಕಟ್ಟುತ್ತೇವಾ? ಕೇಳಿದರೆ ಇದಕ್ಕೆ ಉತ್ತರ ನೋಡೋಣ ನನ್ನೊಬ್ಬನಿಂದ ಏನಾಗತ್ತೆ ಎಲ್ಲರೂ ಕಟ್ಟಿದರೆ ಆಗ ನೋಡೋಣ ಅಂತ. ಒಮ್ಮೆ ನಮ್ಮ ವೈದ್ಯರೊಬ್ಬರು " ಅಲ್ಲಾರೀ ಈರಸ್ತೆ ರಿಪೇರಿ ಹೇಗೆ ಮಾಡಿಸುತ್ತಾರೆ ಗೊತ್ತಾ? ಒಂದು! ಕೇವಲ ಒಂದು ತಿಂಗಳಲ್ಲಿ ರಸ್ತೆ ಹಾಳಾಗಿ ರಿಪೇರಿಗೆ ಬರುತ್ತೆ ಗೊತ್ತಾ?. ಈಗಂತೂ ಎಲ್ಲಿ ನೋಡಿದರಲ್ಲಿ ಹೊಂಡ ಗುಂಡಿಗಳಿದ್ದು ಗಾಡಿ ಸರಿಯಾಗಿ ಓಡಿಸುವುದೇ ಕಷ್ಟ. " ನಾನು ಕೇಳಿದೆ " ಅಲ್ಲಾ ಸಾರ್ ಈರಸ್ತೆಯಲ್ಲಿ ಹತ್ತು ವರ್ಷದ ಹಿಂದೆ ವಾಹನ ಸಂಚಾರ ದಟ್ಟಣೆ ಹೇಗಿತ್ತು ಈಗ ಹೇಗಿದೆ? ನೀವೊಮ್ಮೆ ರಸ್ತೆ ರಿಪೇರಿ ಯಾವ ಸಮಯದಲ್ಲಿ ಆಗತ್ತೆ ಯೋಚಿಸಿದ್ದೀರಾ? ನಾನು ಯಾರ ಕಡೆಗೂ ಇಲ್ಲ.ಆದರೆ ರಿಪೇರಿಯಾಗಬೇಕಾದರೂ ನಾವು ನಮಗೆ ಆಗುವ ತೊಂದರೆ ಸಹಿಸೋದಿಲ್ಲ, ರಸ್ತೆ ತಡೆಯಬಾರದು,ಹೀಗಿರುವಾಗ ವಾಹನ ದಟ್ಟಣೆಯ ನಡುವೆಯೂ ಹೇಗೆ ಸರಿಯಾದ ಕ್ವಾಲಿಟಿ ಕೆಲಸ ಸಾಧ್ಯ ಹೇಳಿ?ನಮಗೆ ಹೆಲ್ಮೆಟ್ ಅಲರ್ಜಿ. ಯಧ್ವಾ ತದ್ವಾ ಗಾಡಿ ಓಡಿಸಿ ಅಪಘಾತ ವಾದರೆ ಅದಕ್ಕೆ ಸರ್ಕಾರ ಹೊಣೆ.ರಸ್ತೆಯ ಪಕ್ಕ ಪಾದಚಾರೀ ಜಾಗದಲ್ಲೇ ನಮಗೆ ವ್ಯಾಪಾರ ವ್ಯವಹಾರ ನಡೆಯಬೇಕು, ಬಸ್ಸಿದ್ದರೂ ನಮ್ಮ ದೊಡ್ಡ ಸೈzಇನ ಕಾರೇ ಸಂಚಾರಕ್ಕೆ ಬೇಕು, ಆದರೆ ವಾಹನ ದಟ್ಟಣೆ ಬೇಡ. ನಮ್ಮ ಮನೆಯ ಸುತ್ತ ನಾವು ಕಾಂಕ್ರೀಟ್ ಕಾಡು ಮಾಡಿಕೊಂಡರೂ ಅದು ಸರಿಯೇ, ನಮಗೆ ಕುಡಿಯಲು ಕಾವೇರೀ ನೀರೇ ಬೇಕು.ಸುತ್ತ ಕಾಂಕ್ರೀಟ್ ಕಾಡಾಗಿ ಮಳೆಬಿದ್ದು ನೀರು ಒಟ್ಟಾಗಿ ಹರಿದು ನಮ್ಮ ಮನೆಯನ್ನೇ ಮುಳುಗಿಸಲು ಬಂದಾಗ ನಮಗೆ ಸರ್ಕಾರದ ತಪ್ಪು ಕಾಣ್ತದೆ.ನೆಲವನ್ನು ಎಲ್ಲರೂ ತೂತು ಕೊರೆದೂ ಕೊರೆದೂ ನೀರನ್ನೆತ್ತಿ ಎತ್ತೀ ನೀರಿನ ಮುಖ್ಯ ಶ್Rಓತವನ್ನೇ ಕಡೆಗಣಿಸಿದ್ದೇವೆಯೇ ಹೊರತೂ ಅದನ್ನ ಪುನಹಾ ಮರು ತುಂಬುವಿಕೆಯತ್ತ ಎಷ್ಟು ಗಮನಹರಿಸಿದ್ದೀವಿ? ಸರ್ಕಾರೀ/ಸಾರ್ವಜನಿಕ ವಸ್ತುಗಳ ಸಧ್ಬಳಕೆಯ ಕಾಳಜಿ ನಮಗೆ ಎಷ್ಟಿದೆ?
ಇದು ಸರಿಯೇ?