ನಮ್ಮಳ್ಳಿ ಹಾಡು

ನಮ್ಮಳ್ಳಿ ಹಾಡು

ಕವನ

ಹಳ್ಳಳ್ಳಿ ತಿರುತಿರುಗಿ ಹುಡುಕಿರುವೆ ನನ್ನವಳ 

ಬೆಳ್ಳುಳ್ಳಿ ಉದ್ದಾದ ನನ್ನುಡುಗಿ ನನಗಾಗಿ

ಒಳ್ಳೊಳ್ಳೆ ಮಾತುಗಳ ಆಡುವಳು ಚೆನ್ನಾಗಿ

ಇಳ್ಳುಕಲ್ ಸೀರೆಯನು ಉಟ್ಯಾಳು ನನ್ನರಸಿ

 

ಹಣೆಯಲ್ಲಿ ಅಂಗುಲದ ಬೊಟ್ಟಿಟ್ಟು ಮೆರೆದಾಳು

ಕಣದಲ್ಲಿ ರಾಶಿಯೇ ಕಾಳನ್ನು ಹೆಕ್ಯಾಳು

ತಣಿಗೆಯಲಿ ಕಾಳ್ಸಾರು ಮುದ್ದೆಯನು ಇಟ್ಟಾಳು

ಒಣಕಾಳು ಕರಿದವಳು ನೆಂಚಿಗೆಗೆ ಕೊಟ್ಯಾಳು

 

ಚೆಂದುಳ್ಳಿ ಚೆಲುವೆಯೋ ನನ್ನರಸಿ ದೇವಕಿಯು

ಒಂದೊಳ್ಳೆ ಮಾತಿನಲಿ ಎಲ್ಲಾನು ತಿಳಿಸುವಳು

ಕುಂದಳ್ಳಿ ಬೆಳ್ಳುಳ್ಳಿ ಈರುಳ್ಳಿ ನನ್ನವಳು

ಚಂದುಳ್ಳಿ ಚಿನಕುರಳಿ ಮೆಲ್ಲುತ್ತ ತಿನ್ನುವಳು

 

ಹಿಂದಿಲ್ಲ ಮುಂದಿಲ್ಲ ಎಂದೇನು ಕೊರಗೊಲ್ಲ

ಚಂದಿಲ್ಲ ಹೊಂದಿಲ್ಲ ನಂದಲ್ಲ ಎನ್ನೋಲ್ಲ

ಬಂದಿದ್ದು ಬರಲೇಳು ಭಗವಂತ   ಇರುವಾನು

ಎಂದೆನುತ ಖುಷಿಯಲ್ಲಿ ಸುಖವಾಗಿ ನಲಿಯುವಳು 

 

-ಬಂದ್ರಳ್ಳಿ ಚಂದ್ರು, ತುಮಕೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್