ನಮ್ಮೂರ ಜಾತ್ರೆ

ನಮ್ಮೂರ ಜಾತ್ರೆ

ಬರಹ

ಗುರುವಾರ ನಡೆಯುವ ಕೊಟ್ಟೂರು ರಥೋತ್ಸವದ ಪ್ರಯುಕ್ತ ಈ ಲೇಖನ.
ಕೂಡ್ಲಿಗಿ: ತಾಲೂಕಿನ ಪ್ರಮುಖ ಶೈಕ್ಷಣಿಕ, ಐತಿಹಾಸಿಕ, ಧಾರ್ಮಿಕ ಹಾಗೂ ವಾಣಿಜ್ಯ ಕೇಂದ್ರ ಕೊಟ್ಟುರು. ಸಮಾಜವು ಹಲಾವರು ತೊಡುಕುಗಳಲ್ಲಿ ಸಿಲುಕಿ, ಪ್ರಗತಿ ಕಾಣದಿರುವಾಗ ಮಾನವತೆಯ ಜೀವನ ರಥಕ್ಕೆ ಧರ್ಮ,ನೀತಿ, ತತ್ವಗಳೆಂಬ ನೊಗವನ್ನು ಕಟ್ಟಿಎಳೆದು ಉದ್ದಾರಗೈದ ಮಹಾಪುರಷರ ಪಂಕ್ತಿಯಲ್ಲಿ ಕಾಣುವ ಶರಣರ ಶಿಷ್ಠಜನ ಮಂದಾರ ಶ್ರೀ ಗುರು ಕೊಟ್ಟೂರೇಶ್ವರ.
ಅಂತ ಪವಾಡ ಪುರಷನ ರಥತ್ಸೋವ ಇಂದು. ಪುರಾತನ ಭಾರತೀಯ ಸಂಪ್ರದಯಗಳಲ್ಲಿ, ಅಚರಣೆಗಳಲ್ಲಿ ಸಚಿತತಿಇರುವುದನ್ನು ಇಂದಿನ ವ್ಶೆಜ್ಞಾನಿಕ ಯುಗದ ಜನರ ಮನಸ್ಸಿನಲ್ಲಿ ಮೂಡಿಸಿರವ ಕೊಟ್ಟೂರಿನ ವಿಶೇಷತೆಯ ಜೊತೆಗೆ ಊರಿನಲ್ಲಿ ಒಂದೆ ದೇವರಿಗೆ ನಾಲ್ಕು ಪ್ರಮುಖ ಮಠಗಳನ್ನು ಹೊಂದಿರುವುದು ಕೊಟ್ಟೂರಿನ ಮತ್ತೊಂದು ವಿಶೇಷತೆ. ಹರಿಜನರು, ಮುಸಲ್ಮಾನರಾದಿಯಾಗಿ ಎಲ್ಲಾ ಜನಾಂಗದವರೂ ಶ್ರೀ ಸ್ವಾಮಿಯ ಕೃಪಗೆ ಪಾತ್ರರಾಗಿ ಅನನ್ಯ ಭಕ್ತಿ, ನಡೆ ನುಡಿಗಳಿಂದ ಸೇವೆ ಸಲ್ಲಿಸುತ್ತಿರುವುದು ಜಾತ್ಯಾತಿಯ ಭಾವಕ್ಯತೆಯನ್ನು ವ್ಯಕ್ತಪಡಿಸುತ್ತದೆ.
ಶ್ರೀ ಸ್ವಾಮಿಯ ಪುಣ್ಯ ತಿಥಿಯು ಮಾಘ ಬಹುಳ ದಶಮಿಂiಗಿರುವುದರಿಂದ ಪ್ರತಿ ವರುಷ ಮಾಘ ಬಹುಳ ದಶಮಿ ತಿಥಿ ಮೂಲಾನಕ್ಷತ್ರ ಸಮಯದಲ್ಲಿ ಶ್ರೀ ಸ್ವಾಮಿಯ ರಥೋತ್ಸವವು ಸಕಲ ವೈಭವಗಳಿಂದ ಲಕ್ಷಂತರ ಭಕ್ತರ ಸಮೂಹದಲ್ಲಿಶ್ರೀ ಗುರು ಕೊಟ್ಟೂರೇಶ್ವರ ದೊರೆಯೇ, ನಿನಗಾರು ಸರಿಯೇ, ಸರಿಯೆಂದವರ ಹಲ್ಲು ಮುರಿಯೇ, ಬಹುಪರಾಕ್, ಎಂಬ ಜಯಕಾರನಾದಗಳೊಂದಗೆ ವಿಜೃಂಬಣೆಯಿಂದ ನಡೆಯುತ್ತದೆ. ಅಂತಯೇ ಈ ವರುಷದ ರಥೋತ್ಸವವು ಇಂದು(ಪೆ,೧೯ರಂದು) ನಡೆಯಲಿದೆ. ಶ್ರೀ ಸ್ವಾಮಿಯ ರಥೋತ್ಸವದ ದಿನದಂದು ಕೊಟ್ಟೂರಿನ ಹರಿಜನ ಕೇರಿಯಲ್ಲಿ ಒಂದಾದರು ಹಸು ಕರವನ್ನು ಹಾಕುವುದು ವಿಶೇಷವಾಗಿದೆ. ಅದರ ಹಾಲಿನಿಂದ ಮಾಡಿದ ಗಿಣ್ಣದ ನೈವೈದ್ಯ ಹಾಗೂ ಹರಿಜನ ಸುಮಂಗಲೆಯರ ಮಂಗಳಾರತಿ ಮಾಡಿದ ನಂತರವೇ ಶ್ರೀ ಸ್ವಾಮಿಯಾ ರಥೋಹರಣ ಮಾಡುತ್ತಾನೆ. ಪ್ರರಿ ವರುಷ ತಪ್ಪದೆ ಇಂದಿಗೂ ನಡೆದುಕೊಂದು ಬರುತ್ತದೆ. ಇದು ೧೨ ಶತಮಾನದ ಶ್ರೀಬಸವೇಶ್ವರರ ಜಾತ್ಯಾತೀಯ ಭಾವೈಕ್ಯತೆಯನ್ನು ೧೬ನೇ ಶಾತಮಾನದಲ್ಲಿಯೂ ಸಹ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯೂ ಮುಂದುವರಿಸಿಕೊಂಡು ಬಂದಿರುವುದು ಸಂಕೇತವೇಂದು ತಿಳಿದು ಬರುತ್ತದೆ.
೧೬ ನೇ ಶತಮಾನದ ಅಧಿಯಲ್ಲಿ ಗೌರವಾಂಕ ಕವಿಯು ರಚಿಸಿದ ಶ್ರೀ ಸ್ವಾಮಿಯ ಲೀಲಾ ಪ್ರಬಂದ ಗ್ರ್ರಂಥವನ್ನು ನೋಡಿ ಶ್ರೀಮನೃಪ ಶಾಲಿವಾಹನ ಶೆಕೆ ೧೬೦೦ ಕಾಳಯುಕ್ತಿ ಸಂವತ್ಸರ, ಪಾಲ್ಗುಣ ಬಹುಳ ಸಪ್ತಮಿಯ ಶನಿವಾರ, ಮಿತ್ರ ತಾರೆ, ಹರ್ಷನಾಮಯೋಗ, ಭದ್ರಕರಣ ರೀತ ಪಂಚಂಗ ಶುದ್ದಿಯುಳ್ಳ ಶುಭ ಮೂಹೂರ್ತದಲ್ಲಿ ಶ್ರೀ ಬಸವಲಿಂಗ ಕವಿಯು ವಾರ್ದಿಕಷಟ್ಪದಿಯಲ್ಲಿ ಶ್ರೀ ಗುರುಬಸವರಾಜೇಂದ ಸ್ವಾಮಿಯ ಲೀಲಾ ಪುರಾಣ ಗ್ರಂಥವನ್ನು ಸಮಾಪ್ತಿಗೊಳಿಸಿರುವುದರಿಂದ ಶ್ರೀ ಸ್ವಾಮಿಯು ೧೬ ನೇ ಶತಮಾನದ ಅದಿಯಲ್ಲಿ ಅವತರಿಸಿ ೧೭ನೇ ಶತಮಾನದ ಆದಿಬಾಗದಲ್ಲಿ ಶಿವೈಕ್ಯೆ, ಸಮಪ್ತಿಯಾಗಿರುವುದು ಪುರಾಣಗಳಿಂದ ತಿಳಿದುಬರುತ್ತದೆ.
ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಲಿ, ದವಣಗೆರೆ, ರಾಣೇಬೆನ್ನೂರು, ಧಾರವಾಡ ಮುಂತಾದ ಅನೇಕ ಪಟ್ಟಣಗಳಿಂದ ಭಕ್ತಾಧಿಗಳು ಪಾದ ಯಾತ್ರೆ ಮೂಲಕ ರಥೋತ್ಸವದ ದಿನ ಶ್ರೀ ಸ್ವಾಮಿಯ ಕೃಪಗೆ ಪಾತ್ರರಾಗಲು ಬರಿತಿರುವುದು ಮತ್ತೋಂದು ವಷೇಶವಾಗಿದೆ.

ಆರಾಧ್ಯ ಕೂಡ್ಲಿಗಿ