ನಮ್ಮೂರ ಮಂದಾರ ಹೂವು ಸಿನಿಮಾದ ಭಯಾನಕ ದೃಶ್ಯ
ಇ-ಟಿವಿ ಚಾನೆಲ್ನಲ್ಲಿ ಯಾವುದೋ ಚಲನಚಿತ್ರ ಪ್ರದರ್ಶನವಾಗುತ್ತಿತ್ತು. ಪ್ರಾಯಶ: "ನಮ್ಮೂರ ಮಂದಾರ ಹೂವೇ". ಅದರಲ್ಲಿ ನೀರಿಗೆ ಬಿದ್ದ ಹುಡುಗನೋರ್ವನನ್ನು ಶಿವರಾಜ ಕುಮಾರ್ ರಕ್ಷಿಸುತ್ತಾರೆ. ಹುಡುಗನ ಹೊಟ್ಟೆ ಅದುಮಿ ನೀರು ತೆಗೆಯುತ್ತಾರೆ. ಹುಡುಗ ಚಲನೆ ತೋರಿಸುವುದಿಲ್ಲ.ಕೃತಕ ಉಸಿರಾಟ ಮಾಡಿ ಹುಡುಗನನ್ನು ಬದುಕಿಸಲು ಶಿವರಾಜ ಕುಮಾರ್ ಪ್ರಯತ್ನಿಸುತ್ತಾರೆ. ಆಗಲೂ ಹುಡುಗನ ಸ್ಥಿತಿ ಸುಧಾರಿಸುವುದಿಲ್ಲ. ನಂತರ ಶಿವರಾಜ್ ಕುಮಾರ್ ಹುಡುಗನ ಎದೆಗೆ ಧಬ ಧಬ ಎಂದು ಎರಡೂ ಮುಷ್ಟಿಗಳಿಂದ ಎತ್ತಿ ಎತ್ತಿ ಹೊಡೆಯುತ್ತಾರೆ. ಯಾವನೇ ವಿಲನ್ ಕೂಡಾ ಮೂರ್ಛೆ ಹೋಗುವಂತೆ ಹುಡುಗನ ಎದೆಗೆ ಒನಕೆಯಿಂದ ಕುಟ್ಟುವಂತೆ ಕುಟ್ಟುತ್ತಾರೆ!
ಏನು ಪವಾಡ! ಎದೆ ಗೂಡು ಮುರಿದು ಗೊಟಕ್ ಅನ್ನಬೇಕಿದ್ದ ಹುಡುಗ ಒಂದೇ ಸಲ ಕೆಮ್ಮಿ ಚಲನೆ ತೋರಿಸುತ್ತಾನೆ.
ಈ ಚಿತ್ರ ನೋಡಿ ಯಾರಾದರೂ ನೀರಿಗೆ ಬಿದ್ದವರಿಗೆ ಈ ರೀತಿಯ "ಚಿಕಿತ್ಸೆ" ನೀಡಿದರೆ, ಗುಟುಕು ಜೀವ ಇದ್ದರೂ ಹೋಗುವುದರಲ್ಲಿ ಅನುಮಾನವಿಲ್ಲ!
ಯಾರು ಸ್ವಾಮಿ ಈ ಚಿತ್ರದ ನಿರ್ದೇಶಕ? ಅವರಿಗೇನಾದರೂ ಪ್ರಶಸ್ತಿಗಳು ಬಂತೇ?
Comments
ಉ: ನಮ್ಮೂರ ಮಂದಾರ ಹೂವು ಸಿನಿಮಾದ ಭಯಾನಕ ದೃಶ್ಯ
In reply to ಉ: ನಮ್ಮೂರ ಮಂದಾರ ಹೂವು ಸಿನಿಮಾದ ಭಯಾನಕ ದೃಶ್ಯ by Chamaraj
ಉ: ನಮ್ಮೂರ ಮಂದಾರ ಹೂವು ಸಿನಿಮಾದ ಭಯಾನಕ ದೃಶ್ಯ
ಉ: ನಮ್ಮೂರ ಮಂದಾರ ಹೂವು ಸಿನಿಮಾದ ಭಯಾನಕ ದೃಶ್ಯ