ನಮ್ಮ ಊರಿಗು ಬಂತು ನಗರ ಸಾರಿಗೆ!
ಕನಾ೯ಟಕ ರಸ್ತೆ ಸಾರಿಗೆ ಸಂಸ್ಥೆ ಬಡವರ ಬಂಧು, ಬಡವರ ಸಾರಿಗೆ,ಕೋಟ್ಯಾಂತರ ಬಡವರಿಗೆ ತಮ್ಮ ಬಂಧುಗಳನ್ನು ಭೇಟಿ ಮಾಡಿಸಿದ ನಮ್ಮ ಹೆಮ್ಮೆಯ ಸಾರಿಗೆ.ಕಾಯಾ೯ಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವ ದುಷ್ಟಿಯಿಂದ.ಕ.ರಾ.ರ.ಸಾ.ನಿ ವನ್ನು ಕನಾ೯ಟಕ ಸರಕಾರವು ೨೨,ಪ್ರೇಬವರಿ,೧೯೯೭ ರಲ್ಲಿ ೪ ವಿಭಾಗಗಳಾಗಿ ಇಬ್ಭಾಗಿಸಿತ್ತು.
೧) ವಾಯವ್ಯ ಕನಾ೯ಟಕ ರಸ್ತೆ ಸಾರಿಗೆ ಸಂಸ್ಥೆ ,ಕೇಂದ್ರ ಕಚೇರಿ, ಹುಬ್ಬಳ್ಳಿ
೨) ಈಶಾನ್ಯ ಕನಾ೯ಟಕ ರಸ್ತೆ ಸಾರಿಗೆ ಸಂಸ್ಥೆ,ಕೇಂದ್ರ ಕಚೇರಿ,ಕಲಬುರ್ಗಿ
೩) ಕನಾ೯ಟಕ ರಸ್ತೆ ಸಾರಿಗೆ ಸಂಸ್ಥೆ ,ಕೇಂದ್ರ ಕಚೇರಿ, ಬೆಂಗಳೂರು.
೪) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ,ಕೇಂದ್ರ ಕಛೇರಿ, ಬೆಂಗಳೂರು.
ಈಶಾನ್ಯ ಕನಾ೯ಟಕ ರಸ್ತೆ ಸಾರಿಗೆ ಸಂಸ್ಥೆ ಅಧೀನದಲ್ಲಿ ಹೈದ್ರಾಬಾದ್ ಕನಾ೯ಟಕದ ೫ ಜಿಲ್ಲೆಗಳಾದ
1) ಕಲಬುರ್ಗಿ,2) ಬೀದರ್,ರಾಯಚೂರು, ಕೊಪ್ಪಳ,ಬಳ್ಳಾರಿ ಹಾಗೂ ಮುಂಬೈ ಕನಾ೯ಟಕದ ವಿಜಯಪುರವನ್ನು ಸೇರಿಸಲಾಗಿತ್ತು.ಆ ಮೇಲೆ ಬಿ.ಎಸ್ ಯಡ್ಡಿಯೂರಪ್ಪ ಅವರು ನಮ್ಮ ರಾಜ್ಯ ಮುಖ್ಯ ಮಂತ್ರಿಯಾಗಿದ್ದಾಗ ಈ ಜನರ ಬಹಳ ದಿನದ ಬೇಡಿಕೆಯಾದ ಕಲಬುರ್ಗಿ ಜಿಲ್ಲೆಯನ್ನು ಎರಡು ಭಾಗವನಾಗಿ ಇಬ್ಭಾಗಿಸುವುದು ಅದನ್ನು ಈಡೇರಿಸಿದರು.ಅದೇ ನಮ್ಮ ರಾಜ್ಯದ ೩೦ ನೇ ಜಿಲ್ಲೆ ಯಾದಗೀರಿ.ಈ ಯಾದಗೀರಿ ಜಿಲ್ಲೆಯನ್ನು ಈ.ಕ.ರ.ಸಾ.ಸ ಗೆ ಸೇರಿಸಿದರು. ಒಟ್ಟಾಗಿ ಈ ಕ.ರ.ಸಾ.ಸ ಯ ಅಧೀನದಲ್ಲಿ ೭ ಜಿಲ್ಲೆಗಳು ಬರುತ್ತವೆ.
ದಿನಗಳೆದಂತೆ ಜಿಲ್ಲಾ ಕೇಂದ್ರದ ನಗರಗಳಲ್ಲಿ ಜನಸಂಖ್ಯೆಯು ಹೆಚ್ಚಿದಂತೆ ನಗರಗಳು ಬೆಳೆಯುತ್ತಾ ಹೋದವು. ಕಲಬುರ್ಗಿ, ವಿಜಯಪುರ ಮತ್ತು ಬಳ್ಳಾರಿಯ ನಗರಸಭೆಗಳನ್ನು ಮಾಹನಗರ ಪಾಲಿಕೆಯನಾಗಿ ಮೇಲದ೯ಜೆಗೆ ಏರಿಸಲಾಯಿತು. ಬಡಜನರು, ಮಧ್ಯಮ ವಗ೯ದ ಜನರು,ವಿದ್ಯಾರ್ಥಿಗಳು ಮತ್ತು ದಿನಗೂಲಿ ನೌಕರರು ನಗರಗಳಲ್ಲಿ ಓಡಾಡಲು ಆಟೋಗಳ ಮೇಲೆ ಅವಲಂಬಿಸಿದರು. ಆದ್ದರಿಂದ ನಗರಗಳಲ್ಲಿ ಆಟೋಗಳ ಹಾವಳಿ ಹೆಚ್ಚಾಯಿತು.ಜನರು ತಮ್ಮ ಪರಿವಾರದ ಜೊತೆಗೆ ನಗರದ ಒಂದು ಮೂಲೆಯಿಂದ ಇನೊಂದು ಮೂಲೆಗೆ ಹೋಗಬೇಕಾದರೆ ೨೦೦ ರಿಂದ ೩೦೦ ರೂಪಾಯಿಗಳು ನೀಡಬೇಕಾಯಿತ್ತು.
ಇನ್ನೂ ಒಬ್ಬರೇ ಹೋಗಬೇಕಾದರೆ ಎರಡೂ ಆಟೋಗಳನ್ನು ಬದಲಿಸಬೇಕಾಗುತ್ತಿತ್ತು.
ನಗರಗಳಲ್ಲಿ ಮಕ್ಕಳನ್ಮು ಮನೆಯಿಂದ ಶಾಲೆಗೆ ಕರೆದುಕೊಂಡು ಹೋಗಿ ಬರಲು ಆಟೋದವರು ತಿಂಗಳಿಗೆ ೪೦೦ ರಿಂದ ೫೦೦ ರೂಪಾಯಿ ಕೆಳುತ್ತಾಯಿದ್ದರು.ಬಡವರು ತಮ್ಮ ಮಕ್ಕಳ ಶಾಲೆಯ ಶುಲ್ಕ ಕಟ್ಟೋಕೆ ಬಡದಾಡುತ್ತಿದ್ದರು, ಇನ್ನೂ ಆಟೋಗಳಿಗೆ ಎಲ್ಲಿಂದ ದುಡ್ಡು ಕೊಡಬೇಕು. ನಗರಗಳಲ್ಲಿ ಬಡವರು ತಮ್ಮ ಮಕ್ಕಳನ್ನು ಓದಿಸೋದು ಕಷ್ಟವಾಗುತ್ತ ಹೋಯಿತು . ನಗರದ ಯಾವದೊಂದು ಮೂಲೆಯಲ್ಲಿರುವ ವಿಶ್ವವಿದ್ಯಾಲಯ ,ಅಲ್ಲಿಗೇ ಹೋಗೋಕ್ಕೆ ಒಂದೇ ಸಿಟಿ ಬಸ್ಸು.ಆ ಬಸ್ಸು ತಪ್ಪಿದರೆ ಆ ದಿನ ಕ್ಲಾಸ್ ಗೆ ರಜೆಯೆ .ಯಾಕೆಂದರೆ ಆಟೋದರು ಅಲ್ಲಿಗೆ ಹೋಗೋಕ್ಕೆ ೪೦ ರಿಂದ ೫೦ ರೂಪಾಯಿಗಳು ಕೇಳುತ್ತಿದ್ದರು,ಬಡ ವಿದ್ಯಾರ್ಥಿಗಳು ಎಲ್ಲಿಂದ ಕೊಡಬೇಕು. ದಿನಗೂಲಿ ಕಾಮಿ೯ಕರು ನಗರದಿಂದ ಸ್ವಲ್ಪ ದೂರದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿದ ಕಂಪನಿಗಳಲ್ಲಿ ಕೆಲಸಕ್ಕೆ ಹೋಗಲು ಆಟೋದವರಿಗೆ ೩೦ ರಿಂದ ೪೦ ರೂಪಾಯಿಗಳು ಕೊಡುತ್ತಾಯಿದ್ದರು.ಅವರು ಒಂದು ದಿನ ದುಡಿದಿದ್ದ ಹಣದಲ್ಲಿ ಮುಕ್ಕಾಲು ಭಾಗವನ್ನು ಅಲೆ ಖಚ್ಚು೯ ಆಗುತ್ತಾಯಿತ್ತು.
ಪ್ರತಿದಿನ ಹಳ್ಳಿಯಿಂದ ನಗರಕ್ಕೆ ಚಿಕಿತ್ಸೆಗಾಗಿ,ತಮಗೆ ಬೇಕಾದ ಅಗತ್ಯವಾದ ವಸ್ತುಗಳನ್ನು ಕೊಂಡುಕೊಳ್ಳಲು ಆಗಮಿಸುತ್ತಾಯಿದ್ದ ಜನರು ಆಟೊಗಳನ್ನೆ ಅವಲಂಬಿಸಿದ್ದರು.ಆದ್ದರಿಂದಲೇ ಆಟೋದವರು ಬರೀ ೩ ರಿಂದ ೪ ಕಿಲೋಮೀಟರ್ ಹೋಗಲು ಒಬ್ಬರಿಗೆ ೨೦ ರಿಂದ ೩೦ ರೂಪಾಯಿಗಳು ಕೆಳುತ್ತಾಯಿದ್ದರು.ಹಳ್ಳಿಯ ಬಡಜನರು ಎಲ್ಲಿಂದ ಕೊಡಬೇಕು,ಅದ್ದು ಅವರಿಗೆ ತುಂಬಾ ಭಾರವಾಗಿದ್ದರೂ ಅನಿ೯ವಾಯ ಹೋಗುತ್ತಾಯಿದ್ದರು.ನಮ್ಮ ಭಾಗದ ಜನರು ಬೆಂಗಳೂರಿಗೆ ಹೋದಾಗ ಅಲ್ಲಿಯ ಬಿ.ಮಂ.ಟಿ.ಸಿ ಯ ಸಾರಿಗೆ ವ್ಯವಸ್ಥೆಯನ್ನು ಕಂಡು, ನಮ್ಮ ಊರಲ್ಲಿ ಯಾವಾಗ ಈ ರೀತಿಯ ಸಿಟಿ ಬಸ್ಸುಗಳು ಓಡಾಡುತವೆ ಅಂತ ಯೋಚಿಸುತ್ತಾಯಿದ್ದರು.ರಾಜಕಾರಣಿಗಳು ಎಲ್ಲವನ್ನೂ ಬರೀ ಬೆಂಗಳೂರು ನಗರಕ್ಕೆ ಕೊಡುತ್ತಾರೆ, ನಮ್ಮ ನಗರಕ್ಕೆ ಏನೂ ಮಾಡೋದಿಲ್ಲ ಅಂತ ಹಿಡಿ ಶಾಪ ಹಾಕುತ್ತಾಯಿದ್ದರು.ಮುಂದೆ ಒಂದು ದಿನ ನಮ್ಮ ನಗರಗಳಲ್ಲಿಯೂ ಅದೇ ರೀತಿಯ ಸಿಟಿ ಬಸ್ಸುಗಳು ಓಡಾಡಬಹುದು ಅಂತ ಕನಸು ಕಾಣುತ್ತಾಯಿದ್ದರು. ಅವರ ಆ ಒಂದು ದಿನ ಬೇಗನೆ ಬಂದೇಬಿಟ್ಟಿತು.
ಈ.ಕ.ರ.ಸಾ.ಸಂ ಯು ಕೇಂದ್ರ ಸರಕಾರದ ಜೇವಹರ ಲಾಲ್ ನೆಹರೂ ನ್ಯಾಶನಲ್ ಅರಬನ್ ರೀನಿವಲ್ ಮೀಶನ್ ಯೋಜನೆ (Jawaralala Neharu National Urban Renewal Mission) ಅಡಿ ನೀಡುವ ಅನುದಾನವನ್ನು ಉಪಯೋಗಿಸಿ ಮತ್ತು ರಾಜ್ಯ ಸರಕಾರದ ಸಹಬಾಗಿತ್ವದಲ್ಲಿ ಮೊದಲು ತನ್ನ ಅಧೀನದಲ್ಲಿ ಬರುವ ೭ ಜಿಲ್ಲೆಯ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಗರ ಸಾರಿಗೆಯನ್ನು ಶುರು ಮಾಡಿತ್ತು. ಆಯಾ ಸಳ್ಥದ ಇತಿಹಾಸವನ್ನು ಆಧರಿಸಿ ಆಯಾ ನಗರ ಸಾರಿಗೆಗೆ ಹೆಸರಿಡಲಾಯಿತು.
೧) ಕಲಬುರ್ಗಿಯಲ್ಲಿ - ನೃಪತುಂಗ ನಗರ ಸಾರಿಗೆ
೨) ರಾಯಚೂರುದಲ್ಲಿ - ರಾಯರಥ ನಗರ ಸಾರಿಗೆ
೩) ವಿಜಯಪುರದಲ್ಲಿ - ವಿಜಯಪುರ ನಗರ ಸಾರಿಗೆ
೪) ಬಳ್ಳಾರಿಯಲ್ಲಿ - ಭುವನ ವಿಜಯ ನಗರ ಸಾರಿಗೆ
೫) ಬೀದರದಲ್ಲಿ - ಕಲ್ಯಾಣ ಕನಾ೯ಟಕ ನಗರ ಸಾರಿಗೆ
೬) ಕೊಪ್ಪಳದಲ್ಲಿ – QêñÀQÃAzÀ ನಗರ ಸಾರಿಗೆ
೭) ಯಾದಗೀರಿಯಲ್ಲಿ - ಗಿರಿ ನಗರ ಸಾರಿಗೆ
ಪ್ರತಿಯೊಂದು ನಗರಗಳಲ್ಲಿ ಅಂದಾಜು ೪೦ ರಿಂದ ೫೦ ಬಸ್ಸುಗಳನ್ನು ಓಡಾಡಿಸಲು ಪ್ರಾರಂಭಿಸಿದರು . ಎಲ್ಲಾ ಬಸ್ಸುಗಳು ಪೂತಿ೯ ಹೈ- ಟೈಕ ಆಗಿದವು. ಪ್ರತಿಯೊಂದರಲ್ಲು ಸಿಸಿಟಿವಿ (CCTV),ಒಂದು ದೊಡ್ಡದಾದ ತುತು೯ ನಿಗ೯ಮನ ದ್ವಾರ (Emargency door), ಡಿಜಿಟಲ್ ಡಿಸಪ್ಲೇ ಬೋಡ್ರ್(Digital Display board) ,ಸಯ್ವಂ ಚಾಲಿತ ಬಾಗಿಲು,ಬೆಂಕಿ ನಂದಿಸುವ ಕೀಟ್ಟಜನರನ್ನು ಆಕ೯ಷಿಸಲು ನಗರ ಸಾರಿಗೆಯನ್ನು ಶುರು ಮಾಡಿದ ಮೊದಲ ತಿಂಗಳು ನಗರದಲ್ಲಿ ಏಲ್ಲೆ ಪ್ರಯಾಣ ಮಾಡಿದರು ಕೇವಲ ೫ ರೂಪಾಯಿ ಪ್ರಯಾಣ ದರವನ್ನು ನಿಗದಿಸಲಾಯಿತು. ಅವರು ಈ ಯೋಜನೆ ಸಕ್ಕಸ್ಸ್ ಕೂಡ ಆಯಿತ್ತು.ಜನರು ಆಟೊಗಳನ್ನು ಬಿಟ್ಟು ಸಿಟಿ ಬಸ್ಸಿನಲ್ಲಿ ಓಡಾಡಲು ಶುರು ಮಾಡಿದರು. ಒಂದು ತಿಂಗಳು ಕಳೆದ ಮೇಲೆ ಪ್ರಯಾಣ ದರವನ್ನು ಪರೀಕ್ಷಿಸಿ ಹೆಚ್ಚಿಸಲಾಯಿತು ಆದರೂ ಜನರು ಸಿಟಿ ಬಸ್ಸಿನಲ್ಲಿಯೆ ಪ್ರಯಾಣಿಸುತ್ತಿದ್ದರು ಯಾಕೆಂದರೆ ಆ ಪ್ರಯಾಣ ದರವು ಆಟೋಗಳ ಪ್ರಯಾಣ ದರದ ಅಧ೯ಕ್ಕಿಂತ ಕಡಿಮೆಯಾಗಿತ್ತು.ಶಾಲೆಯ,ಕಾಲೇಜಿನ ವಿದ್ಯಾರ್ಥಿಗಳು ಸರಕಾರವು ವಿದ್ಯಾರ್ಥಿಗಳಿಗೊಸಕ್ಕರ ಕಡಿಮೆ ದರದಲ್ಲಿ ನೀಡುವ ಬಸ್ಸು ಪಾಸಗಳನ್ನು ಉಪಯೋಗಿಸಿ ಪ್ರಯಾಣಿಸಲಂಬಿಸಿದರು.ಹಳ್ಳಿಯಿಂದ ಬರುವ ಬಡಜನರಿಗೂ ತುಂಬಾ ಸಹಾಯವಾಯಿತು. ವಿಶ್ವವಿದ್ಯಾಲಯಕ್ಕೆ ಹೋಗಲು ಪ್ರತಿ ೧೫ ನಿಮಿಷಕ್ಕೆ ಒಂದು ಬಸ್ಸುಗಳಾದವು.
ನಗರ ಸಾರಿಗೆಯಿಂದ ಕೇವಲ ೨೦ ರೂಪಾಯಿಯಲ್ಲಿ ಒಂದು ದಿನದ ಪಾಸ್ ಕೊಡುವ ವ್ಯವಸ್ಥೆಯು ಮಾಡಲಾಯಿತು.
ನಗರ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದ ಜನರಲ್ಲಿ ಬೆಂಗಳೂರಿನ ಬಿ.ಎಮ್.ಟಿ.ಸಿ ಯ ಬಸ್ಸಿನಲ್ಲಿ ಪ್ರಯಾಣಿಸಿದ ಹಾಗೆ ಅನುಭವವಾಗುತ್ತಿತ್ತು. ಈ.ಕ.ರ.ಸಾ.ಸಂ ಯು ನಗರ ಸಾರಿಗೆಯನ್ನು ಆರಂಭಿಸಿ ಒಂದು ವಷ೯ ಕಳೆಯಿತು .ಎಲ್ಲಾ ನಗರ ಸಾರಿಗೆಗಳಿಗೆ ಒಂದು ವಷ೯ದಲ್ಲಿ ಲಾಭವಾಯಿತು ಹಾಗೂ ಜನರ ಸ್ಪಂದನೆಯು ಹೆಚ್ಚಾಯಿತು. ನಗರದ ಕೆಲವು ಕಾಲೋನಿಯಲ್ಲಿನ ರಸ್ತೆಗಳು ಚಿಕ್ಕದಾಗಿದವು ಆದ್ದರಿಂದ ನಗರ ಸಾರಿಗೆಯ ಬಸ್ಸುಗಳು ಚಲಿಸಲು ಆಗುತ್ತಿರಲಿಲ್ಲ.ಆದ್ದರಿಂದ ಈ.ಕ.ರ.ಸಾ.ಸಂ ಯು ವಿಶೇಷವಾದ ಚಿಕ್ಕ ಬಸ್ಸುಗಳು ಓಡಿಸಲು ಶುರು ಮಾಡಿತ್ತು.ಇದ್ದರಿಂದ ಕಾಲೋನಿಗಳಲ್ಲಿ ವಾಸಿಸುವ ಜನರ ಮುಖದಲ್ಲಿಯು ಮಂದಹಾಸ ಮುಡಿತ್ತು.ಎಲ್ಲರಿಂದಲೂ ಮೆಚ್ಚಿಗೆಯನ್ನು ಪಡೆದರು,ಕೆಲವು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿಯು ನಗರ ಸಾರಿಗೆ ಪ್ರಾರಂಭಿಸಿದರು.
೧) ಕಲಬುರ್ಗಿಯ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿ ನಲ್ಲಿ -ನಾಗಾವಿ ನಗರ ಸಾರಿಗೆ ಹಾಗೂ ಸೇಡಂ ತಾಲ್ಲೂಕ ಕೇಂದ್ರದಲ್ಲಿ.
೨) ರಾಯಚೂರು ಜಿಲ್ಲೆಯ,ಸಿಂಧನೂರ ತಾಲ್ಲೂಕು ಕೇಂದ್ರದಲ್ಲಿ.
೩) ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಕೇಂದ್ರದಲ್ಲಿ -ಹಂಪಿರಥ ನಗರ ಸಾರಿಗೆ.
5) ಕೊಪ್ಪಳದ ಗಂಗಾವತಿ ತಾಲೂಕ್ಲು ಕೇಂದ್ರದಲ್ಲಿ.
ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದರು.
ಪ್ರಶಸ್ತಿ -
ಈ.ಕ.ರ.ಸಾ.ಸಂ ಯು ತನ್ನ ವ್ಯಾಪ್ತಿಯಲ್ಲಿ ಬರುವ ಸಣ್ಣ ಹಾಗೂ ಮಧ್ಯಮ ವಗ೯ದ ನಗರಗಳಲ್ಲಿ ಪ್ರಾರಂಭಿಸಿರುವ ನಗರ ಸಾರಿಗೆಯನ್ನು, ನಗರ ಸಾರಿಗೆಯಲ್ಲಿನ ಕ್ರಾಂತಿಕಾರಿ ಬೆಳವಣಿಗೆ ಎಂದು ಪರಿಗಣಿಸಿ, ೨೮ ನವೆಂಬರ್, ೨೦೧೪ ರಂದು
ಕೇಂದ್ರ ಸರಕಾರದ ನಗರಾವೃದಿ ಸಚಿವಾಲಯವು ,ಬ್ಸೇಟ್ ಸಿಟಿ ಬಸ್ಸು ಸ್ರವಿಸ್ಸ್ ( Best city bus Services) ವಗ೯ದಲ್ಲಿ ನೀಡುವ ಅವ್ರಾಡ್ ಆಫ್ ಎಕ್ಸಸೀಲ್ನೇನಿ ( Award of Excellence) ಯನ್ನು ನೀಡಿ ಗೌರವಿಸಿತ್ತು.
ಈ.ಕ.ರ.ಸಾ.ಸಂ ಯು ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲಾ ಬಸ್ಸು ನಿಲ್ದಣಗಳನ್ನು,ತಾಲ್ಲೂಕು ಬಸ್ಸು ನಿಲ್ದಾಣಗಳನ್ನು ಕಡಿಮೆ ವೆಚ್ಚದಲ್ಲಿ ಪೂತಿ೯ ಹೈ-ಟೇಕ್ ಆಗಿ ನವ ನಿಮಾ೯ಣವಾಗಿ ಮಾಡಿದ್ದಾರೆ.
ವಾಯು ಮಾಲಿನ್ಯದಲ್ಲಿ ವಿಶ್ವದ ನಂಬರ್ ಒನ್(No 1) ಸ್ಥಾನದಲ್ಲಿರುವ ನಗರ ನಮ್ಮ ದೇಶದ ರಾಜಧಾನಿ ನವ ದೆಹಲಿ.ಅಲ್ಲಿಯ ಪರಿಸರ ಎಷ್ಟು ಕಲುಷಿತವಾಗಿದೆ ಅಂತ ಒಮ್ಮೆ ನೀವೇ ಯೋಚಿಸಿ. ಇದಕ್ಕೆ ಕಾರಣ ನವ ದೆಹಲಿ ನಗರದಲ್ಲಿ ಹೆಚ್ಚುತ್ತಿರುವ ಬೈಕುಗಳ, ಕಾರುಗಳ ಸಂಖ್ಯೆ.ದೆಹಲಿ ನಗರದಲ್ಲಿ ಎಲ್ಲಾ ರೀತಿಯ ಸಾವ೯ಜನಿಕ ಸಾರಿಗೆಗಳ ವ್ಯವಸ್ಥೆ ಇವೇ ಉದಾರಣೆಗೆ ದೆಹಲಿ ಮೇಟ್ರೋ, ಸಿಟಿ ಬಸ್ಸುಗಳ ಸಾರಿಗೆ ಆದರೂ ಅದು ವಾಯು ಮಾಲಿನ್ಯದಲ್ಲಿ ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇರೋದು ವಿಪ೯ಯಾಸವೆ ಸರಿ.ಎಲ್ಲಾ ಸಾವ೯ಜನಿಕ ಸಾರಿಗೆಗಳ ವ್ಯವಸ್ಥೆಗಳ ಮಧ್ಯೆ ಸರಿಯಾದ ಸಂಪರ್ಕ ವಿಲ್ಲದೆ ಇರುವುದು ಇದಕ್ಕೆ ಕಾರಣ. ನಾವೆಲ್ಲರೂ ಆದಷ್ಟೂ ಸಾವ೯ಜನಿಕ ಸಾರಿಗೆಯನ್ನು ಉಪಯೋಗಿಸೋನ.ನಮ್ಮ ನಗರಗಳಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಯೋನ.
ಈ.ಕ.ರ.ಸಾ.ಸಂ ಯ ರೀತಿಯಲ್ಲಿ ನಮ್ಮ ರಾಜ್ಯದ ಹಾಗೂ ದೇಶದ ಇತರ ಸಾರಿಗೆ ಸಂಸ್ಥೆಗಳು ಸಣ್ಣ ಪಟ್ಟಣಗಳಲ್ಲಿ ನಗರ ಸಾರಿಗೆಗಳನ್ನು ಪ್ರಾರಂಭಿಸಲ್ಲಿ ಅಂತ ಆಶೀಸೋನ.ಅಲ್ಲಿಯ ಬಡಜನರಿಗೂ ಸಹಾಯವಾಗಲ್ಲಿ ಎಂದು ಹಾರೈಸೋನ.
ಬಡಜನರ ನೋವಿಗೆ ಸ್ಪಂದಿಸಿ ,ಸಣ್ಣ ಪಟ್ಟಣಗಳಲ್ಲಿಯೂ ನಗರ ಸಾರಿಗೆಯನ್ನು ಪ್ರಾರಂಭಿಸಿದ ಈಶಾನ್ಯ ಕನಾ೯ಟಕ ರಸ್ತೆ ಸಾರಿಗೆ ಸಂಸ್ಥೆಗೆ,ಅನುದಾನವನ್ನು ನೀಡಿದ ಕೇಂದ್ರ ಸರಕಾರಕ್ಕೆ ಹಾಗೂ ನಮ್ಮ ರಾಜ್ಯ ಸರಕಾರಕ್ಕೆ,ನಮ್ಮ ಭಾಗದ ಲಕ್ಷಾಂತರ ಬಡಜನರ ಪರವಾಗಿ ನನ್ನ ಹೃದಯಪೂರ ವಂದನೆಗಳು.
Comments
ಉ: ನಮ್ಮ ಊರಿಗು ಬಂತು ನಗರ ಸಾರಿಗೆ!
ತಡವಾಗಿಯಾದರೂ ಪ್ರಾರಂಭಿಸಿದ್ದು ಒಳ್ಳೆಯದು. ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡುಹೋಗಲೆಂದು ಆಶಿಸೋಣ.
In reply to ಉ: ನಮ್ಮ ಊರಿಗು ಬಂತು ನಗರ ಸಾರಿಗೆ! by kavinagaraj
ಉ: ನಮ್ಮ ಊರಿಗು ಬಂತು ನಗರ ಸಾರಿಗೆ!
ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.