ನಮ್ಮ ಕನ್ನಡ ಚಲನ ಚಿತ್ರರಂಗದ ಅಮೃತ ಮಹೋತ್ಸವ

ನಮ್ಮ ಕನ್ನಡ ಚಲನ ಚಿತ್ರರಂಗದ ಅಮೃತ ಮಹೋತ್ಸವ

ಬರಹ

 

 

ಸಂಪದ ಮಿತ್ರರೇ, ಇದೆ ತಿಂಗಳ ೧ನೆ ತಾರೀಕಿಂದ ಶುರುವಾಗಿ ಮೂರರವರೆಗೆ ನಡೆದ, ನಮ್ಮ ಕನ್ನಡ ಚಲನ ಚಿತ್ರರಂಗದ ೭೫ ನೇ ವರ್ಷದ ಅಮೃತ ಮಹೋತ್ಸವ ವನ್ನು ನೀವು ಸಹಾ ನೇರವಾಗಿ ನೋಡಿರಬಹುದು, ಅಥವಾ ಟಿ ವಿ ಯಲ್ಲೂ ನೋಡಿರಬಹುದು. ಈ ಸುದಿನದ ಸಲುವಾಗಿ ನಾನೂ ಸಹಾ ಕಾತರದಿಂದ ಕಾಯುತ್ತಿದ್ದೆ. ಆ ದಿನ ಭಾನುವಾರ ಆಗಿದ್ದರಿಂದ ನನಗೆ,ಬಿಡುವಿದ್ದುದರಿಂದ,ನನ್ನ ಸ್ನೇಹಿತರಿಬ್ಬರ ಜೊತೆ ಈ ಸಮಾರಂಭಕ್ಕೆ ಸಾಕ್ಷಿಯಾಗಲು ಹೋದೆ. ನಾವು ಸ್ಥಳ ತಲುಪಿದಾಗ , ಅರಮನೆ ಮೈದಾನದಲ್ಲಿ ಅಸ್ಟೊಂದು ಜನರಿರಲಿಲ್ಲ, ಆಗ ಸಮಯ ೩.೫೦ ಆಸು ಪಾಸು.

 

ಇನ್ನು ಬಿಸಿಲಿದ್ದುದರಿಂದ ಜನ ಸಂಜೆ ಬರಬಹುದು ಅಂದುಕೊಂಡೆ. ಅಲ್ಲಿ ತಲುಪಿದಾಗಲೇ ಗೊತ್ತಾಗಿದ್ದು, ಒಳಗೆ ಹೋಗಲು ಪಾಸು ಬೇಕು ಅಂತ, ಅಲ್ಲಿ ಒಂದು ಕೌಂಟರ್ ನಲ್ಲಿ ಅದನ್ನು ಪಡೆಯಲು ಹೋಗಿ, ಸಾಧ್ಯವಾಗದೇ, ವಾಪಾಸ್ಸು ಬಂದಾಗ, ಗೇಟ್ ನಲ್ಲಿ ನಮಗೆ ಗೊತ್ತಿದ್ದ ಒಬ್ಬ ಪೊಲೀಸರು ಇದ್ದು, ಅವರಿಂದ ನಾವು ಎರಡು ಪಾಸು ಪಡೆದು, ಒಳ ಹೋದೆವು. ಸಮಯ ಸಂದಂತೆಲ್ಲ, 'ಸಾಗರೋಪಾದಿಯಾಗಿ' ಜನರು ಬರಲಾರಂಬಿಸಿದರು. ಖಾಲಿಯಾಗಿದ್ದ ಆಸನಗಳೆಲ್ಲ, ತುಂಬಿ, ಜನ ನಿಲ್ಲಬೇಕಾಯಿತು. ಇನ್ನು ಪಾಸು ಇದ್ದವರು, ಇಲ್ಲದವರು, ವಿಶೇಷ ಅತಿಥಿಗಳು , ಅಲ್ಲದವರು, ಹೀಗೆ ಎಲ್ಲರೂ ಸ್ಟೇಜ್ ನ ಮುಂದೆ ಜಮಾಯಿಸಿದ್ದರಿಂದ, ಚಿತ್ರರಂಗದವರು ಯಾರು, ಅಲ್ಲದವರ್ಯಾರು, ಅಂತ ಅನ್ನಿಸಿದ್ದು ಸುಳ್ಳಲ್ಲ. ಸಮಾರಂಭ ೬.೩೦ ಗೆ ಶುರು ಅಂತಿದ್ದರೂ, 'ರಾಜಕಾರಣಿಗಳ' ಆಗಮನಕ್ಕಾದ ಸಮಯದಿಂದ, ಅದು ಶುರುವಾದಾಗ, ೮.೩೦ ಆಜು ಬಾಜು, ಅಸ್ತೊತ್ತಿಗೆ ಜನ ತಾಳ್ಮೆ ಕಳೆದುಕೊಂಡಿದ್ದರಿಂದ, ಆಯೋಜಕರು, ಜನರನ್ನ ಸಮಾಧಾನಪಡಿಸಲು, ಅಣ್ಣಾವ್ರ ಕೆಲ ಹಾಡುಗಳನ್ನು, ಹಾಕಿ, ಹಾಡಿಸಿದರು.

 

ಕೊನೆಗೂ ನಮ್ಮ ಯೆಡಿಯೂರಪ್ಪನವರು, ಅವರ ಸಚಿವರಾದ,ಶೋಭಾ ಕರಂದ್ಲಾಜೆ,ಅಶೋಕ್, ಕಟ್ಟಾ ನಾಯ್ಡು,ಬಸವರಾಜ್ ಬೊಮ್ಮಾಯಿ, ಜನಾರ್ಧನ ರೆಡ್ಡಿ, ಹಾಗೂ ಎಂ ಎಲ್ ಸಿ ಮುಖ್ಯಮಂತ್ರಿ ಚಂದ್ರು, ಮುಂತಾದವರೊಡನೆ, ಆಗಮಿಸಿ, ಸಮಾರಂಬವನ್ನು ಶುರು ಮಾಡಿದರು. ಮೊದಲಿಗೆ, ನಮ್ಮ ಕನ್ನಡ ಕಟ್ಟಾಳು ಎಂದು ಸ್ವಯಮ್ ಘೋಷಿಸಿಕೊಳ್ಳುವ ಸಾ ರಾ ಗೋವಿಂದು ಅವರು, ಯಾರ್ಯಾರನ್ನೋ ಹೊಗಳುತ್ತ, ತಾವೇನು ಮಾತಾಡಬೇಕು ಎಂಬುದರ ಅರಿವೇ ಇಲ್ಲದೆ, ಯಾರ್ಯಾರನ್ನೋ, ಯಾರ್ಯಾರಿಗೋ ಸನ್ಮಾನ ಮಾಡುತ್ತಾರೆ, ಎಂದು ಹೇಳಿ, ಅಪಹಾಸ್ಯಕ್ಕೆ ಈಡಾಗಿದ್ದು ಉಂಟು.

 

ಇವರ ಅವಸರದ ಮಾತಿಗೆ ಮುಜುಗರಕ್ಕೊಳಗಾದವರಲ್ಲಿ, ಸಚಿವೆ ಶೋಭಾ ಕರಂದ್ಲಾಜೆ , ಪ್ರಮುಖರು. ಸಾ ರಾ ಗೋವಿಂದು ಹೇಳಿದ್ದು ಹೀಗೆ,' ಈಗ ನಮ್ಮ ಕರ್ನಾಟಕ ಸರ್ಕಾರದ ಸಚಿವೆ ಪ್ರೇಮ(ಶೋಭಾ) ಅವರಿಗೆ ಜಯಮಾಲ ಅವರಿಂದ ಸನ್ಮಾನ!..(ಪ್ರೇಮ ಅವರ ಎರಡು ಚಿತ್ರಗಳಲ್ಲಿ, ಕನಸುಗಾರ, ಇನೊಂದು ರಮೇಶ್, ಅಂಬರೀಶ್ ನಟಿಸಿದ್ದ ತಮಿಳು ರಿಮೇಕ್), ಇದರಿಂದ ಶೋಭಾ ಅವರಿಗೆ ನಿಜವಾಗಿಯು ಇರಿಸು-ಮುರಿಸಾಯಿತು.:(((

 ಹಾಗೂ ಇನ್ನೊಮ್ಮೆ, ಗೋವಿಂದು ,ಮಾತಾಡುವ ಭರದಲ್ಲಿ, ಪ್ರತಿ ಬಾರಿ ಹಿಂದೆ ತಿರುಗಿ, ಕುಳಿತಿದ್ದವರತ್ತ ನೋಡಿ, ಪ್ರಖ್ಯಾತ ಅಭಿನೇತ,ಪಂಚಭಾಷೆ ತಾರೆ, ಹೀಗೆಲ್ಲ ಹೇಳುತ ಇವರಿಗೆ ಮುಖ್ಯಮಂತ್ರಿ ಅವರಿಂದ ಸನ್ಮಾನ, ಎಂದಾಗ, ನಮ್ಮ ಬಿ ಸರೋಜಾ ದೇವಿಯವರು , ಇದು ಬಹುಶ ತಾವೇ ಇರಬೇಕು ಅಂತ ಎದ್ದೇಳುವಾಗ, ನಮ ಗೋವಿಂದಣ್ಣ, ಮಾತು ಮುಂದುವರಿಸುತ್ತಾ , ಪಂಚ ಭಾಷಾ ತಾರೆ ಕಮಲ ಹಾಸನ್ ಅವರಿಗೆ ಮುಖ್ಯಮಂತ್ರಿ ಅವರಿಂದ ಸನ್ಮಾನ! .:(((

 

ಈ ಕಾರ್ಯಕ್ರಮಕ್ಕಾಗಿ ಉದಯ ಟಿ ವಿ ಯಿಂದ ಬಂದಿದ್ದ ಇಬ್ಬರನ್ನು ದೂರ ಸರಿಸಿ, ಇವರು ಹೀಗೆ ಅಡ್ಡ-ದಿಡ್ಡಿ ಮಾತಾಡಿ ಹಲವರನ್ನ ಮುಜುಗರಕ್ಕೀಡು ಮಾಡಿದರು. ಇನ್ನು ನಂತರ ಜಯಮಾಲಾ, ಮಾತಾಡಿದರೂ, ಅವರು ಸಹಾ ತುಂಬಾ ಭಾವುಕರಾಗಿದ್ದರಿಂದ ಹಾಗೂ ಸಮಯದ ಅಭಾವ ಆಗಲೇ ಶುರುವಾಗಿದ್ದರಿಂದ, ಅನವರ ಬಗ್ಗೆ, ಚಿತ್ರರಂಗದ ಬಗ್ಗೆ, ಅವರಿಗೆ ಸಹಕರಿಸಿದ, ಎಲ್ಲರ ಬಗ್ಗೆ ಮಾತಾಡಿ, ಸರಕಾರದಿಂದ ಇನ್ನು ಹೆಚ್ಚ್ಚಿನ ಸಹಾಯ ಕೇಳಿ ಮಾತು ಮುಗಿಸಿದರು. ನಂತರ ಬಂದವರು ಕಟ್ಟಾ ನಾಯ್ಡು, ಎಗಾಗಲೇ, ಜನ ಇವರ ಸನ್ಮಾನ ನೋಡಿ ಸಾಕಾಗಿ, ಇದರಲ್ಲಿ ಇವರು ಭಾಷಣ ಓದಲು ಶುರು ಮಾಡುತ್ತಿದ್ದಂತೆ, ಹೋ , ಹೋ, ಹೋ, ಎನ್ನುತ್ತಾ ಅಡ್ಡಿ ಪಡಿಸಿ, ಅವರು ಭಾಷಣ ಮುಕ್ತಾಯ ಮಾಡಲಿ ಎಂದು ಹೇಳುತ್ತಿತ್ತು, ಆದರು ಅವರು ಭಾಷಣ ಮುಂದುವರೆಸಿ, ತಮ್ಮ ಸರಕಾರ ಚಿತ್ರರಂಗಕ್ಕೆ ಏನೇನು ಮಾಡಿದೆ, ಅಂತೆಲ್ಲ ವಿವರಿಸಿ, ಇನ್ನಸ್ಟು ಸಹಾಯದ ಘೋಷಣೆ ಮೊಳಗಿಸಿ ಮಾತು ಮುಗಿಸಿ, ಮಾನ ಸಹಾ ಉಳಿಸಿಕೊಂಡರು.:(((

 

 

ನಂತರ ಮುಖ್ಯಮಂತ್ರಿಗಳು ಸಹಾ ಕನ್ನಡ ಚಿತ್ರರಂಗಕ್ಕೆ, ಈಗ ಘೋಷಿಸಿರುವ, ಅಮೃತ ಮಹೋತ್ಸವ ಭವನ, ಹಾಗೂ ಅಣ್ಣಾವ್ರ ಪುನ್ಯಭೂಮಿಗಾಗಿ ಘೋಸಿಸಿರುವ , ಇನ್ನಿತರ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ, ತಮ್ಮ ಭಾಷಣವನ್ನು ಕೊನೆಗೊಳಿಸಿ, ವೇದಿಕೆಯಲ್ಲಿ ಕುಳಿತರು. ಹೀಗೆ ಇದೆಲ್ಲ ಮಿಗಿದು ನಿಜವಾದ ಪ್ರೋಗ್ರಾಮ್ 'ರವಿಚಂದ್ರನ್' ಅವರಿಂದ ಆರಂಭ ಆಗಬೇಕಾದಾಗಲೇ ಗೊತ್ತಾಗಿದ್ದು, ರವಿ ಅಂದುಕೊಂಡ ಹಾಗೆ ಪ್ರೋಗ್ರಾಮ್ ನಡೆಯಲ್ಲ, ಅಂತ, ಯಾಕೆಂದರೆ, ರವಿ ಪ್ರೇಕ್ಷಕರ ಮಧ್ಯದಿಂದ ಇಬ್ಬರು ನಾಯಕಿಯರೊಡನೆ ಸ್ಟೇಜ್ ಹತ್ತಲು ಯೋಚಿಸಿದ್ದರು, ಆದರೆ, ಅಲ್ಲಿ ಸಹಾ ಜನ ಕುಳಿತಿದ್ದರಿಂದ,(ಸೌಂಡ್ ಬಾಕ್ಸ್ ಮೇಲೆ, ಸಹಾ ಕುಳಿತಿದ್ದರು) ಅದು ಈಡೇರದೆ, ಜನರನ್ನು ವಿಪರೀತ ಬೇಡಿದರೂ, ಯಾರೊಬ್ಬರು ಅಲ್ಲಿಂದ ಕದಲದೆ ಕುಳಿತಾಗ , ಕೋಪ ಮಾಡಿಕೊಂಡು, ನಾನು ನಿಮಗೆ ಅನ್ನಿಸಿದ ಹಾಗೆ ಪ್ರೋಗ್ರಾಮ್ ಮಾಡಬೇಕ , ಇಲ್ಲ ನನಗನ್ನಿಸಿದ ಹಾಗೆ ಮಾಡಬೇಕ? ಅಂತ ಕೇಳಿದಾಗ ಜನ , ಅವರಿಸ್ಟ ಪಟ್ಟ ಹಾಗೆ ಅಂತ ಹೇಳಿದರು.

ಸರಿ, ಒಂದು ಐದು ನಿಮಿಷ ಶಾಂತವಾಗಿ ಕುಳಿತಿರಿ, ಎಂದಾಗ, ನಂತರ ಸ್ವಲ್ಪ ಹೊತ್ತಿನಲ್ಲೇ ನಿಜವಾದ ಪ್ರೋಗ್ರಾಮ್ ರವಿಚಂದ್ರನ್ ಸಾರಥ್ಯದಲ್ಲಿ ಶುರುವಾಗಿ, ಪ್ರೇಕ್ಷಕರನ್ನ, ಯಾವ್ಯಾವುದೋ ಲೋಕಕ್ಕೆ ಕರೆದೊಯ್ತು. ಈ ಸಮಾರಂಭದ ಮುಖ್ಯ ಆಕರ್ಷಣೆ, ಖಂಡಿತವಾಗಿ, ರವಿಚಂದ್ರನ್, ವಿಷ್ಣು, ಅಂಬಿ, ಶಿವಣ್ಣ(ಶಿವ ಹಾಡಿಗೆ ಅರ್ಜುನ್ ಸರ್ಜಾ ಅವರೊಂದಿಗೆ ಒಂದು ಒಳ್ಳೆ ಆರಂಭ), ಅಪ್ಪು-ದರ್ಶನ್, ರಾಮ್ ಕುಮಾರ್(ಮಯೂರ ಚಿತ್ರದ ಒಂದು ಸನ್ನಿವೇಶವನ್ನ ಅದ್ಭುತವಾಗಿ ನಟಿಸುವ ಮೂಲಕ ಅಣ್ಣಾವ್ರ ಅಳಿಯ ಸಹಾ ಒಂದು ಮಟ್ಟಕ್ಕೆ ನಟಿಸಬಲ್ಲ ಅಂತ ಪ್ರೂವ್ ಮಾಡಿದ್ರು),ಭಾರತಿ, ಸುಮಲತಾ, ಲಕ್ಷ್ಮಿ, ಕಮಲ್ ಹಸನ್, ಸಾಹುಕಾರ್ ಜಾನಕೀ, ಸರೋಜಾದೇವಿ, ಇನ್ನಿತರರು. ಈ ಸಮಾರಂಭದಲ್ಲಿ, ಲಕ್ಶೋಪ ಲಕ್ಷ ಜನ ಬರಲಾರರೆನೋ ಅಂತ, ಬೀಡು ಬೀಸಾಗಿ ವ್ಯವಸ್ಥೆ ಮಾಡಿದ್ದರಿಂದ, ಅಂದುಕೊಂಡದ್ದಕ್ಕಿಂತ ಹೆಚ್ಚು ಜನ ಬಂದು, ಕನ್ನಡ ಚಿತ್ರರಂಗದ ಅದ್ಭುತ ಒಂದಕ್ಕೆ ಸಾಕ್ಷಿಯಾದರು.

ಆಗಾಗ ನೂಕು ನುಗ್ಗಲು ಆಗಿದ್ದು, ಆದರು ಪೊಲೀಸರು ಅದನ್ನು ಆದಸ್ತು ಶಾಂತವಾಗಿ ನಿಭಾಯಿಸಿದ್ದು, ಇನ್ನೊದು ಹೈ ಲೈಟ್ . ಈ ಸಮಾರಂಭದ ಹೈ ಲೈಟು, ಎಂದರೆ, ಅದು ರವಿಚಂದ್ರನ್ ಪ್ರಾಯೋಜಿಸಿದ, ಕೆಲ ನೃತ್ಯ, ಹಾಡುಗಳು, ಸನ್ನಿವೇಶಗಳು. ಅದರಲ್ಲಿ ಮುಖ್ಯವಾಗಿ, ಶಿವ ನೃತ್ಯಕ್ಕೆ, ಶಿವಣ್ಣ, ಅರ್ಜುನ್ ಸರ್ಜಾ ಒಳ್ಳೆ ನೃತ್ಯ ಮಾಡುತ್ತಾ ಆರಂಭ ಮಾಡಿದರು.ಅದು ಅದ್ಭುತವಾಗಿತ್ತು. ಇನ್ನೊದು ಆಕರ್ಷಣೆ, ಚಿತ್ರರಂಗದ ದಂತಕಥೆ ಎಂದೆ ಹೇಳುವ, ಕಮಲ್ ಹಾಸನ್ , ಅವರು ಬಂದ ಕೂಡಲೇ ಜನರೆಲ್ಲ ಎದ್ದು ನಿಂತು, ಸ್ವಾಗತಿಸಿದರು. ಅವರು ಕೆಲ 'ಅಪ್ರಿಯವಾದ' ನುಡಿಗಳನು ಹೇಳಿ ರಾಜಕಾರಣಿಗಳನ್ನು ಮುಜುಗರಕೀಡುಮಾಡಿದರು. ತಮ್ಮ ಅಣ್ಣಾವ್ರ ಬಗ್ಗೆ ಹೇಳುತ್ತಾ, ಅಣ್ಣಾವ್ರು ಅವರನ್ನು ನೋಡಲು ಅವರಿದ್ದಲ್ಲಿಗೆ ಬರುತ್ತಿದ್ದರು, ಎಂದೇಳಿ, ಅಂತ ಮಹಾನ್ ನಟ ನಮ್ಮನ್ನು ಅಗಲಿದರು ಅವ್ರು ಅಜರಾಮರ ಎಂದರು.

 

ಇಡೀ ಸಮಾರಂಭದಲ್ಲಿ, ಜನರನ್ನು ಕಾಡಿದ್ದು ಎರಡು.

ಮುಖ್ಯವಾಗಿ,ಕನ್ನಡ ಚಿತ್ರರಂಗದ ಇಡೀ ಇತಿಹಾಸದಲ್ಲಿ, ೫೦ ವರ್ಷ ಅಭಿನಯಿಸಿ, ನಮ್ಮನ್ನೆಲ್ಲ್ಲ ಅಗಲಿದ, ಕರುನಾಡ ಮುಕುಟ, ಕಣ್ಮಣಿ, 'ಅಣ್ಣಾವ್ರು' ಅಲ್ಲಿರದಿದ್ದುದು.

ಇಲ್ಲೇ ನಡೆದ, 'ಧನ್ಯ ಮಿಲನ' 'ಜೋಗಿ' ಸಮಾರಂಬಕ್ಕೆ ಸಾಕ್ಷಿಯಾಗಿದ್ದ ಜನ 'ಅಣ್ಣಾವ್ರು ' ಇಲ್ಲದ ಈ ಕ್ಷಣವನ್ನ ನೆನೆದು ಸಂಕಟ ಪಡುತ್ತಿದ್ದರು.

ಇನ್ನೊದು,

ಕೊಟ್ತ್ಯಂತರ ರೂಪಾಯಿ ಮಾತಾಡುವ ಚಿತ್ರರಂಗದವರು, ಅಲ್ಲಿ ಜನಕ್ಕೆ, ಕುಡಿಯಲು ನೀರಿನ ವ್ಯವಸ್ಥೆ ಮಾಡದೆ, ಅದ್ರ ಉಸ್ತುವಾರಿ ಖಾಸಗಿ ಅವರಿಗೆ ಒಪ್ಪಿಸಿ, ಜನರನ್ನ ಸುಲಿಗೆ ಮಾಡಿದರು.

ಆದರೂ ಜನ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಈ ಭವ್ಯ ಸಮಾರಂಭದ ಕೊನೆವರೆಗೆ ಇರುವುದರ ಮೂಲಕ ಸಾಕ್ಷಿಯಾದರು. ಒಟ್ಟಿನಲ್ಲಿ, ಇದು ಕನ್ನಡಿಗರನ್ನೆಲ್ಲ(ಬೆಂಗಳೂರಿನ) ಒಗ್ಗೂಡಿಸಿದ್ದು ಸುಳ್ಳಲ್ಲ. ಇದರ ಸಂಪೂರ್ಣ ಸಹಕಾರ, ಚಿತ್ರರಂಗದವರ, ಸರಕಾರದ, ಜನರ ಸಹಾಯದಿಂದ ಅದ್ಭುತವಾಗಿ ನಡೆದು ಹೋಯಿತು.

 

ಇಲ್ಲಿ ಸ್ಮರಿಸಬೇಕಾದವರು,

ಜಯಮಾಲ,

ರವಿಚಂದ್ರನ್, ,

ಇಬ್ಬರೂ ಈ ಸಮಾರಂಭ ಚೆನ್ನಾಗಿ ನಡೆಯಲು ಹಗಲು ಇರುಳು ಶ್ರಮಿಸಿದರು. ನಂತರ ರಜನೀಕಾಂತ್, ಇನ್ನಿತರರು ಮಾರನೆ ದಿನ ಬಾಗವಹಿಸಿ ಇನ್ನಸ್ಟು ಕಳೆ ತಂದರು. ಒಟ್ಟಿನಲ್ಲಿ, ಕೆಲ ಕಾರಣಗಳ ಹೊರತಾಗಿ, ಇದು ಖಂಡಿತ ಒಂದು ಒಳ್ಳೆಯ ಸಮಾರಂಭ ಅಂತ ಹೇಳಬಹುದು. ನೀವು ಹೋಗಿದ್ದಿರಾ?

ಹೇಗನ್ನಿಸಿತು?

ಹೇಳ್ತೀರಾ?