ನಮ್ಮ ಕನ್ನಡ ಟಿ.ವಿ ಚಾನಲ್ ನಿರೂಪಕರಿಗೆ ತರಬೇತಿಯ ಅವಶ್ಯಕತೆ

ನಮ್ಮ ಕನ್ನಡ ಟಿ.ವಿ ಚಾನಲ್ ನಿರೂಪಕರಿಗೆ ತರಬೇತಿಯ ಅವಶ್ಯಕತೆ

Comments

ಬರಹ

ಕಳೆದ ಶನಿವಾರ ನಮ್ಮೂರಿಗೆ ಹೋಗಿದ್ದೆ. ಹಾಗೇ ಬೆಳಗಿನ ಕಾಫಿ ಹೀರುತ್ತಾ ದೂರದರ್ಶನದ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ನನ್ಜೊತೆ ನಮ್ಮಮ್ಮ, ನಮ್ಮಜ್ಜಿ, ನಮ್ಮಣ್ಣ, ನಮ್ಮ ಅಕ್ಕನ ಮಕ್ಕಳು ಹಾಗೂ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜ.. ಎಲ್ರೂ ಇದ್ದರು. ನಾವು ನೋಡುತ್ತಿದ್ದದ್ದು ಒಂದು ಕನ್ನಡ ಚಾನಲ್

ಟಿ.ವಿ. ಯಲ್ಲಿ ನಿರೂಪಣೆ ಶುರುವಾಯ್ತು.., ನಮ್ಮೆಲ್ಲರ ಗಮನ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದ್ದ ನಿರೂಪಕಿಯ ಮೇಲೆ..,

"Good Morning everybody, I am .... ....(name), with you. ನಮ್ಜೊತೆ ಮಾತಾಡೋಕೆ call ಮಾಡಬೇಕಾದ ಸಂಖ್ಯೆ nine,double four..... "
(ಕರೆ ಸ್ವೀಕರಿಸಿದ ನಂತರ)
"Good Morning ....ರವರೆ, ಏನ್ ಮಾಡ್ತಾ ಇದ್ದೀರಿ? studies ಮಾಡ್ತಾ ಇದ್ದೀರಾ? ಅಥವಾ work ಮಾಡ್ತಾ ಇದ್ದೀರಾ?"
...

"well Mr....., we will play a beatiful song for you.."

ಹೀಗೆ ಎಲ್ಲಾ ಕರೆಗಳಲ್ಲೂ ಬರೀ ಆಂಗ್ಲ ಪದಗಳ ಅಟ್ಟಹಾಸ.
ಕೊನೆಗೆ,
"Thank you for calling, ನಾವೀಗ program endಗೆ ಬಂದಿದ್ದೀವಿ... ಮತ್ತೆ ಮುಂದಿನ್ ವಾರ, ಇದೇ Timege meet ಮಾಡೊಣ... ಅಲ್ಲಿವರೆಗೂ.. have a nice time.. take care bye bye".

ಮತ್ತೊಂದು ಕಾರ್ಯಕ್ರಮದಲ್ಲಿ.. ಕರ್ನಾಟಕದ ಇತಿಹಾಸದ ಬಗ್ಗೆ ಹೇಳಬೇಕಾದರೆ... dynasty, construct, soldiers, queens, children, elephant, iron rod.... ಇನ್ನೂ ಮುಂತಾದ ಜನಸಾಮಾನ್ಯರಿಗೆ ಅರ್ಥವಾಗದ ಶಬ್ದಗಳನ್ನು ಉಪಯೋಗಿಸುತ್ತಾರೆ.
ಅಲ್ಲಿ ಕುಳಿತಿದ್ದ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜನಿಗೆ ಸುಮ್ನೆ ಕೇಳಿದೆ
"ಕಾರ್ಯಕ್ರಮದ ಸಂಭಾಷಣೆ ಅರ್ಥವಾಯಿತೆ ತಾತಾ?"
"ಆವಮ್ಮಂಗೇನೊ ಇಂಗ್ಲೀಸು-ತಂಗ್ಲೀಸು ಗೊತ್ತು ಅಂತ ನಮ್ಗೂ ಗೊತ್ತದೆ ಕಣಪ್ಪ,... ಆದ್ರೆ ನಮ್ಗೆ ಇಂಗ್ಲೀಸು ಗೊತ್ತಿಲ್ಲ ಅಂತ ಅವ್ರಿಗೆ ಗೊತ್ತಿಲ್ವಲ್ಲ..., ಬಿಡಪ್ಪ ಅತ್ಲಾಗೆ... ಏನಾರ ಮಾಡ್ಕಂಡ್ ಸಾಯ್ಲಿ..."

ಹೌದು, ದೂರದರ್ಶನದಲ್ಲಿ ಬರೋ ಶೇಕಡಾ ೮೦ ರಷ್ಟು ಕಾರ್ಯಕ್ರಮಗಳಲ್ಲಿ ಇಂಥದೇ ಸಂಭಾಷಣೆ ಇರುತ್ತೆ. ಇಂದು ಕರ್ನಾಟಕದಲ್ಲಿ ಬಹಳಷ್ಟು ಜನ ಅನಕ್ಷರಸ್ತರಿದ್ದಾರೆ, ಕನ್ನಡ ಮಾಧ್ಯಮದಲ್ಲಿ ಓದಿದವರಿದ್ದಾರೆ. ಬಹುಪಾಲು ಜನಕ್ಕೆ ಓದು ಬರಹ ಬಂದರೂ.. ಟಿ.ವಿ ನಿರೂಪಕರಷ್ಟು ಓದಿರುವುದಿಲ್ಲ. ಇದನ್ನ ನಿರೂಪಕರೂ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ, ಕೇವಲ ತಮಗಿರುವ ಭಾಷಾಜ್ಞಾನ ಎಲ್ಲರಿಗೂ ತಿಳಿದಿದೆಯೆಂದು ತಿಳ್ಕೊಂಡಿರುತ್ತಾರೆ. ಅಷ್ಟೇ ಅಲ್ಲ... ಇನ್ನೂ ಒನ್, ಟೂ, ತ್ರೀ.. ಬಾರದ ನಮ್ಮ ಅಜ್ಜಿಯಿದ್ದಾರೆ, ಮಕ್ಕಳಿದ್ದಾರೆ., ಯಾರಿಗೂ ಎನೊಂದೂ ಅರ್ಥವಾಗದೇ ಕುಳಿತಿರುತ್ತಾರೆ.
ಇಂಥ ಕಾರ್ಯಕ್ರಮಗಳು ಕೇವಲ ಇಂಗ್ಲೀಷ್ ಬಲ್ಲ ವಿದ್ಯಾವಂತರಿಗಷ್ಟೇ ಸೀಮಿತವಾಗಿರುತ್ತವೆ.
ಆದ್ದರಿಂದ ಇನ್ನು ಮುಂದೆಯಾದರೂ ದೂರದರ್ಶನದವರು ತಾವು ಪ್ರಸಾರ ಮಾಡುವ ಕಾರ್ಯಕ್ರಮಗಳು ನಿರೂಪಕರಿಗಾಗಿ ಅಲ್ಲ, ಜನಸಾಮಾನ್ಯರಿಗೆ ಎಂದು ಅರ್ಥ ಮಾಡಿಕೊಂಡರೆ.. ಒಳ್ಳೆಯ ಕಾರ್ಯಕ್ರಮಗಳು ನಮ್ಮ ಜನಸಾಮಾನ್ಯರಿಗೆ ತಲುಪಿ.. ಯಶಸ್ಸನ್ನೂಗಳಿಸುತ್ತವೆ. ನಿರೂಪಕರಿಗೆ ಅತ್ಯಗತ್ಯವಾದ ಕನಿಷ್ಟ ತರಬೇತಿಯನ್ನಾದರೂ ನೀಡಿದರೆ... ಅದು ಕನ್ನಡವನ್ನು ಬೇಳೆಸುವುದಷ್ಟೇ ಅಲ್ಲದೆ, ಎಲ್ಲ ರೀತಿಯ ಜನರಿಗೆ ತಲುಪುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet