ನಮ್ಮ ಕರುನಾಡು

ನಮ್ಮ ಕರುನಾಡು

ಕವನ

ಒಮ್ಮೆ ಸುತ್ತಿ ನೋಡು

ನಮ್ಮ ಹೆಮ್ಮೆಯ ಕರುನಾಡು
ಆ ಸ್ವರ್ಗವೆ ಭುವಿಗಿಳಿದಿರುಹುದು
ನೋಡಲು ಎರಡು ಕಣ್ಣು ಸಾಲದು

ಕೈ ಬೀಸಿ ಕರೆದಿದೆ ಕರಾವಳಿಯ ಅಲೆ
ಎಂದಿಗೂ ಬತ್ತದ ಪ್ರೀತಿಯ ಸೆಲೆ
ಮಲೆನಾಡಿನ ಮಳೆ ಹನಿಯ ತುಂತುರು
ತುಂಬಿದೆ ಕಣ್ಣು ಹಾಯಿಸಿದಲೆಲ್ಲ ಹಸಿರು
ವಿಶಾಲವಾಗಿ ಹಬ್ಬಿದ ಬಯಲುಸೀಮೆ
ಎಲ್ಲೆಡೆ ಸಾರಿದೆ ನಮ್ಮ ನಾಡ ಹಿರಿಮೆ

ಹರಿಯುತಿದೆ ತುಂಗ, ಭದ್ರಾ, ಕೃಷ್ಣಾ, ಕಾವೇರಿ
ತುಂಬಿ ತುಳುಕುತ್ತಿದೆ ಪ್ರಕೃತಿಯ ಸಿರಿ
ನೀಡುವೆವು ಜಗಕೆ ಮಾಹಿತಿ ತಂತ್ರಜ್ಞಾನ
ಇಲ್ಲಿ ಬಾಳುವವರು ಎಲ್ಲರೂ ಸಮಾನ
ಬೆರಗುಗೊಳಿಸಿದೆ ಇಡಿ ಜಗವ
ನಮ್ಮ ನಾಡಿನ ವೈಭವ

ಒಮ್ಮೆ ಸುತ್ತಿ ನೋಡು
ನಮ್ಮ ಹೆಮ್ಮೆಯ ಕರುನಾಡು….