ನಮ್ಮ ಕಾಯೋ ಕೃಷ್ಣಾ

ನಮ್ಮ ಕಾಯೋ ಕೃಷ್ಣಾ

ಕವನ

ಜನುಮವೆಷ್ಟು ಕಳೆದು ಬಂದೆ

ಕೃಷ್ಣ ನಿನ್ನ ಬಳಿಯೆ ನಿಂದೆ

ದಾಸ ನಾನು ನಿನ್ನ ಮಡಿಲ ಸೇರಿ ಹಾಡುವೆ

ಮನದ ತುಂಬ ನೀನೆಯೆಂದೆ

ನನ್ನ ಒಲವ ಬಂಧುವೆಂದೆ 

ದಯದಿಯೆನ್ನ ಎತ್ತಿಕೊಳ್ಳೊ ಸೇರಿ ಪಾಡುವೆ

 

ಶಾಂತ ರೂಪ ನಿನ್ನ ಮೊಗವು

ಭಕ್ತಿ ಭಾವಯೆನ್ನ ಒಡಲು

ಗಾನ ಲೋಲ ವೇಣು  ನೀನುಯೆನ್ನ ಪೊರೆವನೆ

ಮನದ ಒಡೆಯ ನೀನೆಯೆನಲು

ಚೆಲುವ ದೊರೆಯೆ ನೀನು ನಗಲು

ಉಡುಪಿಯೊಳಗೆ ನೆಲೆಯ ನಿಂತೆ ನಮ್ಮ ದೇವನೆ

 

ದಿನವು ನೀನು ಪೂಜೆಗೊಳುವೆ

ಭಕ್ತರೊಳಗೆ ಸೇರಿ ನಲಿವೆ

ಹೃದಯದಾಳದೊಳಗೆ ಇಳಿದು ಪ್ರೀತಿಯಾಡುವೆ

ಕ್ಷೇತ್ರದೊಳಗೆ ನಿಂತ ಸುಧೆಯೆ

ನಮ್ಮನೆಲ್ಲ ಹರಸುತಿರುವೆ

ಜಗದಿ ಖ್ಯಾತಿ ಪಡೆದು ನಿಂದ ಮುದ್ದು ಕೃಷ್ಣನೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್