ನಮ್ಮ ತಾಯಿ ಭಾರತಿ
ಕವನ
ನಮ್ಮ ದೇಶ ಭಾರತ
ಕೂಗಿ ಕೂಗಿ ಹೇಳುತ
ನಲಿ ನಲಿದು ಪಾಡುತ
ಹೆಮ್ಮೆಯಿಂದ ಬೀಗುತ
ಭರತ ಕುವರ ಆಳಿದ
ಸಿಂಧೂ ನೆಲದ ಸಂಸ್ಕೃತಿ
ಸಂಸ್ಕಾರ ನೆಲ ಜಲದ
ಪುಣ್ಯ ಭೂಮಿ ಸಹಮತ
ವಿವಿಧತೆಯಲಿ ಏಕತೆಯ
ತತ್ವವನು ಸಾರಿದ
ವೀರ ಶೂರರೆಲ್ಲ ಮೆರೆದ
ಭವ್ಯ ದಿವ್ಯ ಬುವಿಯಿದು
ದಾಸ್ಯತನವ ಹೊಡೆದೋಡಿಸಿ
ತಿರಂಗವನು ಹಾರಿಸಿ
ಹಿರಿಯರ ತ್ಯಾಗವನು
ಅನುದಿನ ಅನುಸರಿಸಿ
ಹಸಿರಿನ ಹಂದರ
ಪೈರಿನ ಚೆಲುವಿಕೆ
ಬೆಟ್ಟಗುಡ್ಡ ಹೊಳೆ ಹಳ್ಳದ
ರಮಣೀಯ ಮೃತ್ತಿಕೆ
ರಾಷ್ಟ್ರಪ್ರೇಮ ರಾಷ್ಟ್ರಭಕ್ತಿ
ಮಕ್ಕಳಲಿ ಬಿತ್ತುತ
ನಮ್ಮ ತಾಯಿ ಭಾರತಿ
ಸ್ವಾತಂತ್ರ್ಯದ ಕೀರುತಿ
ನವಶಕ್ತಿಯ ಶ್ರಮಸೇವೆ
ನೀಡುತಲಿ ದುಡಿಯುತ
ರೈತಾಪಿ ವರ್ಗಕೆ
ಸಹಕಾರ ನೀಡುತ
ಅಮ್ಮ ನಿನ್ನ ಚರಣದಲಿ
ಶಿರವ ಬಾಗಿ ಇರಿಸುತಲಿ
ನೆತ್ತರ ಹನಿ ಹನಿಯಲ್ಲಿ
ದೇಶಸೇವೆ ಪುಟಿಯುತಲಿ
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್