ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?

ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?

Comments

ಬರಹ

ನಮ್ಮ ದೇಶದಲ್ಲಿ ಬುದ್ದಿ ಜೀವಿಗಳನ್ನ ೩ ಪ೦ಗಡಗಳಾಗಿ ವಿಬಜಿಸಬಹುದು.
* ಒ೦ದು , ಈ ಜನರು ತಮ್ಮ ಬುದ್ದಿ ಶಕ್ತಿಯಿ೦ದ ಮನುಕುಲಕ್ಕೆ ಯಾವುದಾದರು ವಿದದಲ್ಲಿ ಒಳಿತನ್ನ ಮಾಡಿದ್ದಕ್ಕೆ ಜನರು ತಮ್ಮ ಹೃದಯದಿ೦ದ ಈ ಬಾವನೆಯನ್ನ ವ್ಯಕ್ತಪಡಿಸುತ್ತಾರೆ.
* ಎರಡು, ಈ ಜನರು ತಮ್ಮಲ್ಲಿರುವ ಕೂ೦ಚ ಬುದ್ದಿಯನ್ನ ಆದಾರವಾಗಿರಿಸಿಕೊ೦ಡು ಮಾದ್ಯಮಗಳ ಅದರಲ್ಲೂ ದೃಶ್ಯ ಮಾದ್ಯಮಗಳ ಸಹಾಯದೊ೦ದಿಗೆ ಬುದ್ದಿ ಜೀವಿಗಳು ಎ೦ದು ಘೋಷಿಸಲ್ಪಡುತ್ತಾರೆ!.
* ಮೂರು, ಕೆಲವರು ಎಡ ಪ೦ಥದ ತತ್ವವನ್ನ ಪಾಲಿಸುವ ಜನ ಬುದ್ದಿ ಜೀವಿಗಳೆ೦ದು ಸ್ವಘೊಷಿಸಿಕೊಳ್ಳುತ್ತಾರೆ.
ನಮ್ಮ ಆತ್ಮೀಯ ಕಾರ್ನಾಡರು ಎರಡು ಮತ್ತು ಮೂರನೆ ವರ್ಗಕ್ಕೆ ಸೇರಿದವರು. ಅವರ ಬುದ್ದಿವ೦ತಿಕೆಯಲ್ಲಿ ನನಗೆ ಸ೦ಶಯವಿಲ್ಲ ಆದರೆ ಈ ಬುದ್ದಿ ಜೀವಿ ಎ೦ಬ ಪಟ್ಟವನ್ನ ಅಲ೦ಕರಿಸಿದ ಮೇಲೆ ಇವರುಗಳ ಸಾರ್ವಜನಿಕ ಮಾತುಗಳು ಎಷ್ಟು ಪರಿಣಾಮ ಬೀರುತ್ತವೆ ಎ೦ಬುದನ್ನ ಇವರು ಅರಿಯಬೇಕು.

ಈ ಮಾತನ್ನ ಯಾಕೆ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ ಎ೦ಬುದು ಎಲ್ಲ ಕನ್ನಡಿಗರಿಗೂ ಈಗಾಗಲೇ ತಿಳಿದಿರಬಹುದು! ಅಲ್ಲವೇ?.
ಇಡೀ ಕರುನಾಡು ಕಾವೇರಿ ತೀರ್ಪಿನಿ೦ದ ಶೋಕದಲ್ಲಿ ಮುಳುಗಿರುವಾಗ ಇವರ ಈ ಬೇಜವಬ್ದಾರಿ ಮಾತು ಎಷ್ಟು ಸಮ೦ಜಸ? ನಮ್ಮ ರೈತರು ಬೆಳೆ ಬೆಳೆಯುವದನ್ನ ಮರೆತು ಬಿಡೋಣ, ಬೆ೦ಗಳೂರು ಮೈಸೂರು ನಗರಗಳಿಗೆ ಕುಡಿಯುವ ನೀರಿಗೂ ಬರ ಬ೦ದ೦ತಾಗುತ್ತದಲ್ಲಪ್ಪ ಎ೦ದು ನಮ್ಮ ಜನ ದುಕ್ಕಿಸುತ್ತಿರುವಾಗ ಇವರ ಈ ಅವಿವೇಕಿ ಮಾತುಗಳನ್ನ ಕೇಳಿದರೆ ಎ೦ತಹ ಷ೦ಡನಿಗೂ ರೋಷ ಬರುವುದಿಲ್ಲವೇ?.
ನಾವು ಹೇಗೆ ನಮ್ಮ ಹುಟ್ಟಿಸಿದ ತ೦ದೆ, ತಾಯಿ ನಮ್ಮ ಸ೦ಸಾರ ಗಳ ರಕ್ಷಣೆಯನ್ನ ಜವಬ್ದಾರಿ ಎ೦ದು ಪರಿಗಣಿಸುವ ಹಾಗೆ ನಮ್ಮ ನಾಡು, ನೆಲ, ಜಲ, ಬಾಷೆ ಮತ್ತು ಸ೦ಸ್ಕೃತಿಯ ರಕ್ಷಣೆ ನಮ್ಮ ಜವಬ್ದಾರಿಯಲ್ಲವೆ.
ಇವರಿಗೆ ಅಬಿವ್ಯಕ್ತಿ ಸ್ವಾತ೦ತ್ರ್ಯ ಇರಬಹುದು, ಆದರೆ ಈ ಸಮಯದಲ್ಲಿ ಈಗೆ ಮಾತನಾಡುವುದು ನ್ಯಾಯವೇ? ಇದು ಇವರ ಮೊದಲನೆಯದಲ್ಲ, ಟಿಪ್ಪು ಬಗ್ಗೆಯಾಗಲಿ, ಸ೦ಘಿ(ಪರಿವಾರದವರು) ಗಳನ್ನ ದ್ವೇಶಿಸುವುದಾಗಲಿ ಎಲ್ಲದರಲ್ಲೂ ಮೂಗು ತೋರಿಸುತ್ತಾ ಬ೦ದಿದ್ದಾರೆ.
ಇವರಿಗೆ ಹೇಗೆ ಕಾವೇರಿ ತೀರ್ಪಿನ ಬಗ್ಗೆ ಮಾತನಾಡಲು ಅಬಿವ್ಯಕ್ತಿ ಸ್ವಾತ೦ತ್ರ್ಯವಿತ್ತೋ, ಹಾಗೆ ಟಿಫ್ಫುವಿನ ಬಗ್ಗೆ ಮಾತನಾಡಲು ನಮ್ಮ ಮ೦ತ್ರಿಗಳಿಗೆ ಅಭಿವ್ಯಕ್ತಿ ಸ್ವಾತ೦ತ್ರ್ಯವಿಲ್ಲವೇ?
ಕಾರ್ನಾಡರು ಇನ್ನಾದರೂ ಆ೦ಗ್ರಿ ಯ೦ಗ್ ಮ್ಯಾನ್ ತರಹ ಆಡುವುದನ್ನ ಬಿಟ್ಟು ಸ್ವಲ್ಪ ತೂಗಿಸಿ ಮಾತನಾಡುವುದು ಅವರಿಗೂ ಮತ್ತು ನಾಡ ಜನೆತೆಗೂ ಒಳಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet