ನಮ್ಮ ನಿಮ್ಮ ಜನಪ್ರತಿನಿಧಿಗಳು....

ನಮ್ಮ ನಿಮ್ಮ ಜನಪ್ರತಿನಿಧಿಗಳು....

ಬರಹ

ಹ... ಲೋಕಸಭಾ ಚುನಾವಾಣೆ ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ಎದುರಿಗೆ ಬರಲಿದೆ... ಮೊದಲ ಹಂತ 23ನೇ ಎಪ್ರಿಲ್ ಮತ್ತು ಎರಡನೆ ಮತ್ತು ಕೊನೆಯ ಹಂತ 30ನೇ ಎಪ್ರಿಲ್ 2009....

ಇನ್ನೊಂದು ವಿಷಯ... ನಿಮಗೆ ಗೊತ್ತೆ ನಿಮ್ಮ ಲೋಕಾಸಭಾ ವ್ಯಾಪ್ತಿಯಲ್ಲಿ ನಿಮ್ಮನ್ನು ಪ್ರತಿನಿಧಿಸಲು ಒಟ್ಟು ಎಷ್ಟು ಜನ ಚುನಾವಣೆಗೆ ನಿಂತಿದ್ದಾರಂತಾ???
ಹುಂ.. ಗೊತ್ತಿಲ್ಲದಿದ್ದರೆ ಬಿಡಿ... ಎಕಂದರೆ ನನಗೂ ಇಗೊರಿಗೂ ಗೊತಿಲ್ಲ... ಎಕೆಂದರೆ 17ನೇ ಸಂಖ್ಯೆಯ ನಮ್ಮನ್ನು ಲೋಕಸಭೆಯಲ್ಲಿ ಪ್ರತಿನಿಧಿಸಲು ಹೋಗುತಿರುವ "ಅಭ್ಯರ್ಥಿ" ಎದುರಿಗೆ ಬರದೆ ಒಂದು ದಿನಪತ್ರಿಕೆಯ ಮುಲಕ "ತಾನು ಚುನಾವಾಣೆಗೆ ನಿಂತಿದ್ದೇನೆ... ದಯವಿಟ್ಟು ನನ್ನನ್ನು ಆರಿಸಿ ಕಳಿಸಿ... " ಎಂಬ ಸಾಲುಗಳ ಕರಪತ್ರ ಪ್ರಿಂಟ್ ತಗಿಸಿ ಪೇಪರ್ ನೊಟ್ಟಿಗೆ "ಬೋನಸ್ ಅಫರ್" ನಂತೆ ಕಳುಹಿಸಿದ್ದರು...! ನಮ್ಮ ಎದುರಿಗೆ ಪ್ರತ್ಯಕ್ಷರಾಗದವರೂ ಸಹ ನಮ್ಮ "ಪ್ರತಿನಿಧಿ" ಎಂದು ಚುನಾವಣೆಗೆ ಹೋಗುವ ಜನಾ...!

ವಿಪರ್ಯಸವೆನೆಂದರೆ ಒಟ್ಟು 17 ಜನಾ ( ಇದಕ್ಕೂ ಹೆಚ್ಚು ಜನಾ ನನ್ನ ಲೋಕಸಭಾ ವ್ಯಾಪ್ತಿಯಲ್ಲಿ ಪ್ರತಿನಿಧಿಸುತ್ತಿರಬಹುದು ಎಂದು ಭಾವಿಸಿ...!) ಈ ವರೆಗೂ ನಿಂತಿದ್ದಾರೆ ಎಂಬ ಸತ್ಯ ತಿಳಿದಿದ್ದು ಅಗಲೆ...! ಹೋಗಲಿ ನಮ್ಮನ್ನು "ಉದ್ದಾರ" ಮಾಡುವುದು ಬೇಡ... Atleast ಮುಖ ತೋರಿಸುವುದಕ್ಕೂ ಸಮಯವಿಲ್ಲದ ಜನರಿದ್ದರಾ ನಮ್ಮ "ಜನ ಪ್ರತಿನಿಧಿ" ಯಾಗಿ??(ನನಗೆ ಇನ್ನೂ ಒಬ್ಬ ಜನಪ್ರತಿನಿಧಿಯ ಮುಖದರ್ಶನ ಮಾಡುವ ಭಾಗ್ಯ ಬಂದಿಲ್ಲ....!!?!). ಹುಂ, ಇವರಿಂದ ನಾವು ಎನನ್ನು ಪಡೆಯಬಹುದು, ನಮ್ಮ ಕ್ಷೇತ್ರದ ಕೆಲಸ ಕಾರ್ಯಗಳು ಎಷ್ಟು ಪೂರ್ಣಗೊಳ್ಳಬಹುದು ಎಂಬುದಕ್ಕೆ ಡೊಡ್ಡ ಪ್ರಶ್ನಚಿನ್ಹೆ ಅಗಲೇ ಬೀಳುತ್ತದೆ....! ನಾವು ಕೇವಲ "ಓಟು ಮಾಡುವ" ಸಾಧನೆಗಳಾದೆವಾ ಎಂಬ ಮತ್ತೊಂದು ಸಣ್ಣ ಅನುಮಾನದೊಂದಿಗೆ....! ನೀವೇನು ಹೇಳ್ತೀರಿ ಇದರ ಬಗ್ಗೆ ???