ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

ಬರಹ

ನಾವು ಈ ಸಾಫ್ಟ್ವೇರ್ ಫೀಲ್ಡ್ನಲ್ಲಿದ್ಕೊಂಡು (ನೀವು ನಿಮ್ಮ ನಿಮ್ಮ ಫೀಲ್ಡ್ನಲ್ಲಿದ್ಕೊಂಡು)...
ಬರೀ ಇನ್ಕಂಟ್ಯಾಕ್ಸ್ ಕಟ್ಟೊದಲ್ದೆ...ನಮ್ಮದೇಶದ ಬೆಳವಣಿಗೆಗೆ ಪ್ರತ್ಯಕ್ಷ/ಪರೋಕ್ಷವಾಗಿ ಸಹಾಯವಾಗೊವಂತಹ ಯಾವ್ಯಾವ ಕೆಲಸ ಮಾಡಬಹುದು??

ಮತ್ತು

ನಮ್ಮದೇಶದ ಬೆಳವಣಿಗೆಗೆ ಪ್ರತ್ಯಕ್ಷ/ಪರೋಕ್ಷವಾಗಿ ಸಹಾಯವಾಗದಿರೊವಂತಹ ಯಾವ್ಯಾವ ಕೆಲಸ ಮಾಡೋದನ್ನ ನಿಲ್ಲಿಸಬಹುದು??

ಉದಾ:
ಡ್ರೈವಿಂಗ್ ಲೈಸೆನ್ಸ್ ತಗೊಳೋಕ್ಕೆ ಲಂಚ ಕೊಡೋದನ್ನ ನಿಲ್ಲಿಸಬೇಕು.

ಸಂಚಾರಿ ನಿಯಮಗಳನ್ನ ಸರಿಯಾಗಿ ಅನುಸರಿಸಬೇಕು.

ಪಾಲಿಥೀನ್ ಬಳಕೆಯನ್ನ ಆದಷ್ಟು ಕಡಿಮೆ ಮಾಡ್ಬೇಕು.

ನಮ್ಮ ಸಂಸ್ಕೃತಿನ ಉಳಿಸಿ ಬೆಳೆಸಬೇಕು.

ಅವಶ್ಯಕತೆಗೆ ಸರಿಯಾಗಿ ವಿದ್ಯುತ್ನ ಬಳಸಬೇಕು.

ಹುಟ್ಟಿದ ಹಬ್ಬದ ಗಿಫ್ಟ್ ಅಂತ ಒಂದು ಗಿಡ ಕೊಡಬಹುದು.(ಮೊನ್ನೆ ನಮ್ಮ ಗ್ರೂಪ್ನಲ್ಲಿ ಹುಟ್ಟಿದ ಹಬ್ಬದ ಕೇಕ್ ಬದಲಾಗಿ ಕಲ್ಲಂಗಡಿಹಣ್ಣು ಕತ್ತರಿಸಿದ್ರು ಬಹಳ ಡಿಫ್ರೆಂಟಾಗಿತ್ತು :) )

ಸಿಕ್ಕಾಪಟ್ಟೆ ಸಂಬಳದಲ್ಲಿ ಒಂದು ಚೂರಾದ್ರೂ ಒಳ್ಳೆ ಕೆಲಸಕ್ಕೆ ,ವಯಸ್ಸಾದೋವ್ರಿಗೆ, ಓದೋ ಬಡ ಮಕ್ಕಳಿಗೆ ಸಹಾಯ ಮಾಡಬಹುದು.

ಊಟ ಎಷ್ಟು ಬೇಕೋ ಅಷ್ಟನ್ನೇ ಹಾಕಿಕೊಂಡರೆ ಈಗ ಆಫೀಸ್ ಕೆಫಿಟೇರಿಯಾಲ್ಲಿ ಮಾಡ್ತಿರೋ ಫುಡ್ ವೇಷ್ಟೇಜನ್ನ ನಿಲ್ಲಿಸಬಹುದು.

ಡಬಲ್ ಸೈಡ್ ಪ್ರಿಂಟ್ ತಗೊಂಡು..ಪೇಪರ್ ಬಳಕೆ ಕಡಿಮೆ ಮಾಡಿದ್ರೆ..ಕೆಲವಾರು ಮರಗಳನ್ನದ್ರೂ ಉಳಿಸಿಕೊಬಹುದು.

ಯಾವಾಗಲೂ ಕಾರಿಗೆ ಅಂಟಿಕೊಳ್ಳದೆ ಆರಾಮಾಗಿ ಸಾರ್ವಜನಿಕ ಸಂಚಾರಿ ವಾಹನಗಳಲ್ಲೂ ಪ್ರಯಾಣಿಸಬಹುದು.
.
.
.
.
.
.
.
ಹೀಗೆ ನಮ್ನಮ್ಮಲ್ಲೇ ಒಂದು ಅವೇರ್ನೆಸ್ ಮೂಡಿಸಿಕೊಳ್ಳೋಕ್ಕೋಸ್ಕರ ನಾವು(ಅಂದ್ರೆ ನಮ್ಮ ಪ್ರಾಜೆಕ್ಟ್ ಟೀಮ್ನಲ್ಲಿರೋವ್ರು) ಆಫೀಸ್ನಲ್ಲಿ ಒಂದು ಚಿಕ್ಕ ಪ್ರೊಗ್ರಾಮ್ ಮಾಡ್ತಿದ್ದೀವಿ...ಅದಕ್ಕೆ ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಅನಿಸಿಕೆಗಳನ್ನ ತಿಳಿಸ್ತೀರಾ....ದಯವಿಟ್ಟು ಪ್ರತಿಯೊಬ್ಬರಿಂದ ಮಾಡಲ್ಲಿಕ್ಕೆ ಅಗೊವಂತಹವನ್ನೇ ತಿಳಿಸಿ.

ಸಿಕ್ಕಾಪಟ್ಟೆ ಧನ್ಯವಾದಗಳು
-ಸವಿತ