ನಮ್ಮ ಬದುಕಿನ ನಡೆಗೆ...

ನಮ್ಮ ಬದುಕಿನ ನಡೆಗೆ...

ಕವನ

ನಮ್ಮ ಬದುಕಿನ ನಡೆಗೆ ನಾವು ನಡೆಯುತ ಸಾಗಿ

ನಮ್ಮೊಳಗಿನ ನುಡಿಗೆ ಶರಣಾಗುವ

ನಮ್ಮ ಬಾಂಧವ್ಯವು ತೇರನೆಳೆಯುತಲಿರಲಿ

ನಮ್ಮನಾಳುವ ಕುಲದಿ ಒಂದಾಗುವ

 

ಭಾವವಿದು ಪುಣ್ಯವಿದು ಮನುಜ ಸ್ನೇಹದ ನುಡಿಗೆ

ಭಾವದೊಳು ನಮಿಸುತಲಿ ಕೈಹಿಡಿಯುವ

ಭಾವಾಂತರಂಗದೊಳು ಮನವು ಕುಣಿಯುತ ಸಾಗೆ 

ಭಾವನೆಯ ರೂಪದೊಳು ಜೊತೆ ಸೇರುವ 

 

ಸೇವೆಗಳ ಮಾಧೂರ್ಯ ಉಣುತ ಸಾಗುತಲಿರಲು

ಸೇವೆಯಲಿ ಹೊಸೆಯೋಣ ಹೊಸರಾಗವ

ಸೇವಾಶ್ರಮದೊಳಗೊಳಗೆ ಕುಳಿತಿರಲು ನಾವಿಂದು

ಸೇವೆ ಪುಣ್ಯಗಳೊಳಗೆ ಚೆಲುವಾಗುವ 

 

ಕನಸುಗಳ ಬೆಸುಗೆಯೊಳು ನನಸುಗಳೆ ಕೂಡಿರಲು

ಕನಸೆಲ್ಲ ಸವಿಯಾಯ್ತು ಹೂವಾಗುವ 

ಕನಸಿನಾಟದ ಸುತ್ತ ಪ್ರೀತಿಸುವ ತನುವಿರಲು

ಕನಸೊಳಗೆ ಈಜುತಲಿ ದಡ ಸೇರುವ 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್